ಇಂದು ರಾಜನಾಥ್ ಸಿಂಗ್‌ರಿಂದ ಫ್ರೆಂಚ್ ರಕ್ಷಣಾ ವಲಯದ ಸಿಇಒಗಳ ಭೇಟಿ

ಮೊದಲ ರಫೇಲ್ ಯುದ್ಧ ವಿಮಾನ ಸ್ವೀಕರಿಸಿದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರೆಂಚ್ ರಕ್ಷಣಾ ವಲಯದ ಉನ್ನತ ಸಿಇಒಗಳನ್ನು ಬುಧವಾರ ಭೇಟಿ ಮಾಡಲಿದ್ದಾರೆ.

Last Updated : Oct 9, 2019, 07:45 AM IST
ಇಂದು ರಾಜನಾಥ್ ಸಿಂಗ್‌ರಿಂದ ಫ್ರೆಂಚ್ ರಕ್ಷಣಾ ವಲಯದ ಸಿಇಒಗಳ ಭೇಟಿ title=

ಪ್ಯಾರಿಸ್: ಫ್ರಾನ್ಸ್‌ನಿಂದ 36 ಫೈಟರ್ ಜೆಟ್‌ಗಳಲ್ಲಿ ಮೊದಲ ರಫೇಲ್ ಯುದ್ಧ ವಿಮಾನ ಸ್ವೀಕರಿಸಿದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರೆಂಚ್ ರಕ್ಷಣಾ ವಲಯದ ಉನ್ನತ ಸಿಇಒಗಳನ್ನು ಬುಧವಾರ ಭೇಟಿ ಮಾಡಲಿದ್ದಾರೆ.

ವರದಿಗಳ ಪ್ರಕಾರ, ಸಿಂಗ್ ಅವರು ಫ್ರೆಂಚ್ ರಕ್ಷಣಾ ಉದ್ಯಮದ ಸಿಇಒಗಳನ್ನು ಉದ್ದೇಶಿಸಿ ಮಾತನಾಡಲಿದ್ದು, "ಮೇಕ್ ಇನ್ ಇಂಡಿಯಾ" ಮತ್ತು 2020ರಲ್ಲಿ ಫೆಬ್ರವರಿ 5 ರಿಂದ ಫೆ. 8ರ ನಡುವೆ ಲಕ್ನೋದಲ್ಲಿ ನಡೆಯಲಿರುವ ಡೆಫ್ಎಕ್ಸ್ಪೋದಲ್ಲಿ ಭಾಗವಹಿಸಲು ತಿಳಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. 

ಮಂಗಳವಾರ ರಫೇಲ್ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಮಂತ್ರಿ ಎಂದೇ ಇತಿಹಾಸ ಸೃಷ್ಟಿಸಿದ ರಾಜನಾಥ್ ಸಿಂಗ್, ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಷನ್ ​​ಮೆರಿಗ್ನಾಕ್ ವಾಯುನೆಲೆಯಿಂದ ರಫೇಲ್ ಫೈಟರ್ ಜೆಟ್‌ನಲ್ಲಿ 35 ನಿಮಿಷಗಳ ಸುದೀರ್ಘ ಹಾರಾಟ ನಡೆಸಿದರು.

ಎರಡು ಆಸನಗಳ ಫೈಟರ್ ಜೆಟ್ ಅನ್ನು ಡಸಾಲ್ಟ್ ಏವಿಯೇಷನ್‌ನ ಹೆಡ್ ಟೆಸ್ಟ್ ಪೈಲಟ್ ಫಿಲಿಪ್ ಡುಚಾಟೊ ಹಾರಾಟ ನಡೆಸಿದರೆ,  ರಾಜನಾಥ್ ಸಿಂಗ್ ಕಾಕ್‌ಪಿಟ್‌ನಲ್ಲಿ ಪೈಲಟ್‌ನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜನಾಥ್ ಸಿಂಗ್, ರಫೇಲ್ ಜೆಟ್ ನಲ್ಲಿ ಹಾರಾಟ ತುಂಬಾ ಆರಾಮದಾಯಕವಾಗಿತ್ತು. ಇದೊಂದು ಅಭೂತಪೂರ್ವ ಕ್ಷಣ. ಒಂದು ದಿನ ಫೈಟರ್ ಜೆಟ್‌ನಲ್ಲಿ ಸೂಪರ್ಸಾನಿಕ್ ವೇಗದಲ್ಲಿ ಹಾರಾಟ ನಡೆಸಲು ನನಗೆ ಅವಕಾಶ ಸಿಗುತ್ತದೆ ಎಂದು ಅವರು ಎಂದಿಗೂ ಯೋಚಿಸಿರಲಿಲ್ಲ ಎಂದು ಹೇಳಿದರು. 
 

Trending News