ಚಂಬಲ್ ನದಿಗೆ ಕಾರು ಬಿದ್ದು 9 ಮಂದಿ ದುರ್ಮರಣ: ಮದುವೆಗೆ ತೆರಳುತ್ತಿದ್ದವರು ಮಸಣಕ್ಕೆ!

ಮೂಲಗಳ ಪ್ರಕಾರ ವರನ ಕಡೆಯವರು ಬೆಳಗ್ಗೆ 5.30ಕ್ಕೆ ಸವಾಯಿ ಮಾಧೋಪುರದಿಂದ ಹೊರಟು ಉಜ್ಜಯಿನಿಗೆ (ಮಧ್ಯಪ್ರದೇಶ) ಪ್ರಯಾಣಿಸುತ್ತಿದ್ದರು.

Written by - Zee Kannada News Desk | Last Updated : Feb 20, 2022, 12:09 PM IST
  • ರಾಜಸ್ಥಾನದ ಕೋಟಾದಲ್ಲಿ ಭಾನುವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ
  • ಚಂಬಲ್ ನದಿಗೆ ಕಾರು ಬಿದ್ದು ವರ ಸೇರಿ 9 ಜನರು ದುರ್ಮರಣ ಹೊಂದಿದ್ದಾರೆ
  • ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ
ಚಂಬಲ್ ನದಿಗೆ ಕಾರು ಬಿದ್ದು 9 ಮಂದಿ ದುರ್ಮರಣ: ಮದುವೆಗೆ ತೆರಳುತ್ತಿದ್ದವರು ಮಸಣಕ್ಕೆ! title=
ವರ ಸೇರಿ 9 ಜನರು ದುರ್ಮರಣ ಹೊಂದಿದ್ದಾರೆ

ಕೋಟಾ: ರಾಜಸ್ಥಾನದ (Rajasthan)ಕೋಟಾದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವರ ಸೇರಿ 9 ಮಂದಿ ದುರ್ಮರಣ ಹೊಂದಿದ್ದಾರೆ. ಛೋಟಿ ಪುಲಿಯಾದಿಂದ (Chhoti Puliya) ಚಂಬಲ್ ನದಿಗೆ (Chambal river) ಕಾರು ಬಿದ್ದು  ಈ ದುರಂತ ಸಂಭವಿಸಿದೆ.

ಮಾಹಿತಿ ಪ್ರಕಾರ ಕಾರಿನಲ್ಲಿದ್ದವರು ಮದುವೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಸಾವನ್ನಪ್ಪಿರುವ 9 ಜನರಲ್ಲಿ ವರನೂ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಚಂಬಲ್ ನದಿಗೆ(Chambal River) ಕಾರು ಬಿದ್ದಿದೆ. ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: 7th Pay Commission : ಕೇಂದ್ರ ನೌಕರರಿಗೆ ಬಿಗ್ ಶಾಕ್! ನಿಮಗೆ ಸಧ್ಯಕ್ಕೆ ಸಿಗುವುದಿಲ್ಲ 18 ತಿಂಗಳ DA ಬಾಕಿ ಹಣ

ಮೂಲಗಳ ಪ್ರಕಾರ ವರನ ಕಡೆಯವರು ಬೆಳಗ್ಗೆ 5.30ಕ್ಕೆ ಸವಾಯಿ ಮಾಧೋಪುರದಿಂದ ಹೊರಟು ಉಜ್ಜಯಿನಿಗೆ (ಮಧ್ಯಪ್ರದೇಶ) ಪ್ರಯಾಣಿಸುತ್ತಿದ್ದರು. ಕೋಟಾ(Kota)ದ ನಯಾಪುರ ಮೋರಿಯಿಂದ ಕಾರು ಚಂಬಲ್ ನದಿ(Chambal river)ಗೆ ಬಿದ್ದಿದೆ. ಕಾರಿನಲ್ಲಿ 7 ಜನರು ಸಾವನ್ನಪ್ಪಿದರೆ, ಇಬ್ಬರು ನದಿಯಲ್ಲಿ ತೇಲಿ ಹೋಗಿದ್ದಾರೆಂದು ವರದಿಯಾಗಿದೆ. ಬೆಳಗ್ಗೆ ಸ್ಥಳೀಯರು ಕಾರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪರಿಹಾರ ಕಾರ್ಯ ಆರಂಭಿಸಲಾಯಿತು. ಇದುವರೆಗೆ 9 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಪೊಲೀಸ್ ತಂಡ ಕಾರಿನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕ್ರೇನ್ ಸಹಾಯದಿಂದ ಕಾರನ್ನು ಕೂಡ ಹೊರತೆಗೆಯಲಾಗಿದೆ.

ಕಾರು ನದಿಗೆ(Car Accident) ಬಿದ್ದ ನಂತರ ನೂಕುನುಗ್ಗಲು ಉಂಟಾಗಿದೆ ಎಂದು ತಿಳಿದಿದೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಅಪಘಾತದ ಬಗ್ಗೆ ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್(Rajasthan Police) ತಂಡ ಮೃತದೇಹಗಳನ್ನು ನದಿಯಿಂದ ಹೊರ ತೆಗೆಯುವ ಕಾರ್ಯ ಆರಂಭಿಸಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Pensioners : ಪಿಂಚಣಿದಾರರೆ ಫೆ. 28 ರೊಳಗೆ ಈ ಕೆಲಸ ಮಾಡಿ! ಇಲ್ಲದಿದ್ದರೆ ಬಂದಾಗುತ್ತೆ ನಿಮ್ಮ ಪಿಂಚಣಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News