Rain Alert: ಈ ಭಾಗಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ-ಹಲವೆಡೆ ಸಿಡಿಲು ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

Weather Update 02-08-2023: ಹವಾಮಾನ ಇಲಾಖೆಯ ಪ್ರಕಾರ, ಆಗಸ್ಟ್ 7 ರವರೆಗೆ ಯುಪಿಯಲ್ಲಿ ಹವಾಮಾನವು ಕೆಟ್ಟದಾಗಿರುತ್ತದೆ. ಅದರಲ್ಲೂ ಆಗಸ್ಟ್ 6ರವರೆಗೆ ರಾಜ್ಯದ ಹಲವೆಡೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.

Written by - Bhavishya Shetty | Last Updated : Aug 2, 2023, 08:14 AM IST
    • ಆಗಸ್ಟ್ 2 ರಂದು ಉತ್ತರ ಪ್ರದೇಶದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ
    • ವಾಯುವ್ಯ ಭಾರತದಲ್ಲಿ ಹಗುರದಿಂದ ಮಧ್ಯಮ ಮಳೆಯಾಗಬಹುದು.
    • ರಾಜ್ಯದ ಹಲವೆಡೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ
Rain Alert: ಈ ಭಾಗಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ-ಹಲವೆಡೆ ಸಿಡಿಲು ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ title=
Rain Alert

Weather Update 02-08-2023: ಮಾನ್ಸೂನ್ ಋತು ಈಗಾಗಲೇ ಶುರುವಾಗಿದೆ. ಕೆಲವೆಡೆ ಅತಿವೃಷ್ಟಿಯಿಂದ ಪ್ರವಾಹದಂತಹ ಪರಿಸ್ಥಿತಿಯಿದ್ದು, ಕೆಲವೆಡೆ ಅನಾವೃಷ್ಟಿಯಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಇಂದಿನ ಹವಾಮಾನದ ಬಗ್ಗೆ ಮಾತನಾಡುವುದಾದರೆ ಆಗಸ್ಟ್ 2 ರಂದು ಉತ್ತರ ಪ್ರದೇಶದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿಲೋಮೀಟರ್ ಆಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಆಗಸ್ಟ್ 2 ರಂದು ವಾಯುವ್ಯ ಭಾರತದಲ್ಲಿ ಹಗುರದಿಂದ ಮಧ್ಯಮ ಮಳೆಯಾಗಬಹುದು.

ಇದನ್ನೂ ಓದಿ; ಇಂದು ಈ ರಾಶಿಯ ಮೇಲಿರಲಿದೆ ಗಣಪತಿ ಕಟಾಕ್ಷ: ಪ್ರತೀ ಕಾರ್ಯವೂ ನಿರ್ವಿಘ್ನ

ಉತ್ತರಾಖಂಡ್ ಹವಾಮಾನ:

ಹವಾಮಾನ ಇಲಾಖೆಯ ಪ್ರಕಾರ, ಆಗಸ್ಟ್ 7 ರವರೆಗೆ ಯುಪಿಯಲ್ಲಿ ಹವಾಮಾನವು ಕೆಟ್ಟದಾಗಿರುತ್ತದೆ. ಅದರಲ್ಲೂ ಆಗಸ್ಟ್ 6ರವರೆಗೆ ರಾಜ್ಯದ ಹಲವೆಡೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ವ್ಯಕ್ತವಾಗಿದೆ. ಮತ್ತೊಂದೆಡೆ, ಉತ್ತರಾಖಂಡದಲ್ಲಿ ಇಂದು ಬಲವಾದ ಸಿಡಿಲು ಮತ್ತು ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಪರ್ವತ ಪ್ರದೇಶಗಳಲ್ಲಿ ಭೂಕುಸಿತವಾಗುವ ಸಾಧ್ಯತೆ ಇದೆ.

ಮಧ್ಯಪ್ರದೇಶ-ಛತ್ತೀಸ್‌ಗಢದ ಸ್ಥಿತಿ:

ಆಗಸ್ಟ್ 2 ರಂದು ಪಶ್ಚಿಮ ಮಧ್ಯಪ್ರದೇಶದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. IMD ಪ್ರಕಾರ, 'ಛತ್ತೀಸ್‌ಗಢದಲ್ಲಿ ಆಗಸ್ಟ್ 2 ರಂದು ಭಾರೀ ಮಳೆಯಾಗುತ್ತದೆ. ಮತ್ತೊಂದೆಡೆ, ಆಗಸ್ಟ್ 2 ರಂದು ಪೂರ್ವ ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ.

ಮಧ್ಯ ಮತ್ತು ದಕ್ಷಿಣ ಭಾರತದ ಸ್ಥಿತಿ:

ಇಂದು ಬಿಹಾರ-ಜಾರ್ಖಂಡ್‌ನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಆಗಸ್ಟ್ 2 ರಂದು ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಮತ್ತೊಂದೆಡೆ, ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಮತ್ತು ತೆಲಂಗಾಣದ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮತ್ತು ಭಾರೀ ಮಳೆಯ ಮುನ್ಸೂಚನೆ ಇದೆ.

ಇದನ್ನೂ ಓದಿ; 3,539 ದಿನಗಳ ಬಳಿಕ ಟೀಂ ಇಂಡಿಯಾ ಏಕದಿನಕ್ಕೆ ಮರಳಿ 27 ವರ್ಷ ಹಳೆದ ದಾಖಲೆ ಮುರಿದ ಸ್ಟಾರ್ ವೇಗಿ!

ಮಂಗಳವಾರ ದೆಹಲಿಯ ಗರಿಷ್ಠ ತಾಪಮಾನವು 36.7 ಡಿಗ್ರಿಗಳಷ್ಟು ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಹೆಚ್ಚಾಗಿದೆ. ಹವಾಮಾನ ಇಲಾಖೆ ಪ್ರಕಾರ, ಗುರುವಾರದಿಂದ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗಬಹುದು. ಇಂದು ಆಗಸ್ಟ್ 2 ರಂದು ದೆಹಲಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇಲ್ಲ. ಆದರೂ ಕೆಲವೆಡೆ ಲಘು ತುಂತುರು ಮಳೆಯಾಗಬಹುದು. ದೆಹಲಿಯಲ್ಲಿ ಬುಧವಾರ ಗಾಳಿಯ ವೇಗ ಗಂಟೆಗೆ 10 ರಿಂದ 20 ಕಿಲೋಮೀಟರ್ ಆಗಿದ್ದರೆ, ಗುರುವಾರ ಗಾಳಿಯ ವೇಗ ಗಂಟೆಗೆ 10 ರಿಂದ 12 ಕಿಲೋಮೀಟರ್ ಆಗುವ ನಿರೀಕ್ಷೆಯಿದೆ. ಮುಂದಿನ ವಾರ ಬಿಸಿಲಿನ ಝಳಕ್ಕೆ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News