Alert..! ತಾಂತ್ರಿಕ ಕಾರಣಗಳಿಂದ ಕೆಲ ಕಾಲ ಬಂದ್ ಇರಲಿದೆ ರೇಲ್ವೆ PRS ಸಿಸ್ಟಮ್, ವಿಚಾರಣೆ ಕೂಡ ಸಂಭವವಿಲ್ಲ

ತಾಂತ್ರಿಕ ಕಾರಣಗಳಿಂದ ರೇಲ್ವೆ ಇಲಾಖೆ ಸ್ವಲ್ಪ ಕಾಲ ತನ್ನ ಸೇವೆ ಬಂದ್ ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಅವಧಿಯಲ್ಲಿ ಟಿಕೆಟ್ ಕಾಯ್ದಿರಿಸುವಿಕೆ, ಟಿಕೆಟ್ ಕ್ಯಾನ್ಸಲೇಶನ್ ಹಾಗೂ ವಿಚಾರಣೆಗಳಂತಹ ಸೇವೆಗಳು ಇರುವುದಿಲ್ಲ ಎನ್ನಲಾಗಿದೆ.  

Last Updated : May 28, 2020, 04:37 PM IST
Alert..! ತಾಂತ್ರಿಕ ಕಾರಣಗಳಿಂದ ಕೆಲ ಕಾಲ ಬಂದ್ ಇರಲಿದೆ ರೇಲ್ವೆ PRS ಸಿಸ್ಟಮ್, ವಿಚಾರಣೆ ಕೂಡ ಸಂಭವವಿಲ್ಲ title=

ನವದೆಹಲಿ: ಸೋಮವಾರದಿಂದ ಭಾರತೀಯ ರೇಲ್ವೆ ಇಲಾಖೆ 200 ಹೆಚ್ಚುವರಿ ರೈಲುಗಳ ಸಂಚಾರ ಆರಂಭಿಸಲಿದೆ. ಇದರಿಂದ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಅವರವರ ಊರುಗಳಿಗೆ ತಲುಪಲು ಸಾಧ್ಯವಾಗಲಿದೆ. ಈ ನಡುವೆ ತಾಂತ್ರಿಕ ಕಾರಣಗಳಿಂದ ರೇಲ್ವೆ ಇಲಾಖೆ ಸ್ವಲ್ಪ ಕಾಲ ತನ್ನ ಸೇವೆ ಬಂದ್ ಮಾಡಲಿದೆ ಎಂದು ಮೂಲಗಳು ಹೇಳಿವೆ. ಈ ಅವಧಿಯಲ್ಲಿ ಟಿಕೆಟ್ ಕಾಯ್ದಿರಿಸುವಿಕೆ, ಟಿಕೆಟ್ ರದ್ದತಿ ಹಾಗೂ ವಿಚಾರಣೆಯಂತಹ ಸೇವೆಗಳು ಪಡೆಯಲು ಸಾದ್ಯವಿಲ್ಲ ಎಂದು ಹೇಳಲಾಗಿದೆ

ಮೇ 30ರ ರಾತ್ರಿಯಿಂದ ಮೇ 31ರ ಬೆಳಗಿನವರೆಗೆ ಸೇವೆ ಇರುವುದಿಲ್ಲ
ತಾಂತ್ರಿಕ ಕಾರಣಗಳಿಂದ ಭಾರತೀಯ ರೇಲ್ವೆ ಇಲಾಖೆಯ ದೆಹಲಿಯಲ್ಲಿರುವ ಪ್ಯಾಸಿಂಜರ್ ರಿಸರ್ವೇಶನ್ ಸಿಸ್ಟಮ್ ಮೇ 30ರ ರಾತ್ರಿ 11.45 ರಿಂದ ಮೇ 31 ಬೆಳಗಿನ ಜಾವ 3.15 ರವರೆಗೆ ಬಂದ್ ಇಡುವ ಘೋಷಣೆ ಮಾಡಲಾಗಿದೆ. ನಮ್ಮ ಸಹಯೋಗಿ ವೆಬ್ಸೈಟ್ zeebiz ಡಾಟ್ ಕಾಮ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ದೆಹಲಿ PRS ಸಿಸ್ಟಮ್ ಬಂದ್ ಇರುವ ಕಾರಣ ವಿಚಾರಣೆ ಸೇವೆ 139 ಸಂಪೂರ್ಣ ಬಂದ್ ಇರಲಿದೆ. ಜೊತೆಗೆ ರೇಲ್ವೆ ರಿಸರ್ವೇಶನ್, ಕ್ಯಾನ್ಸಲೇಶನ್, ಚಾರ್ಟಿಂಗ್, ಇಂಟರ್ನೆಟ್ ಬುಕಿಂಗ್, ಪಿಎನ್ಆರ್ ಎನ್ಕ್ವೈರಿ, ಪಿಆರ್ಎಸ್ ಎನ್ಕ್ವೈರಿಗಳಂತಹ ಸೌಲಭ್ಯಗಳು ಬಂದ್ ಇರಲಿವೆ. ಇತಹುದರಲ್ಲಿ ಯಾತ್ರಿಗಳಿಗೆ ಅನಾನುಕೂಲತೆ ಎದುರಾಗುವ ಸಾಧ್ಯತೆ ಇದೆ.

ಜೂನ್ 1ರಿಂದ 200 ರೈಲುಗಳು ಸಂಚರಿಸಲಿವೆ
ಭಾರತೀಯ ರೈಲ್ವೆ ಇಲಾಖೆ ಜೂನ್ 1 ರಿಂದ ಪ್ರತಿನಿತ್ಯ ಸುಮಾರು 200 ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ನಿಯಮಿತ ರೈಲುಗಳನ್ನು ಅವುಗಳ ಟೈಮ್ ಟೇಬಲ್ ಪ್ರಕಾರ ಓಡಿಸಲಾಗುತ್ತದೆ ಎಂದು ಹೇಳಿದೆ. ಈ ರೈಲುಗಳನ್ನು ಓಡಿಸುವ ಮೊದಲು ರೈಲ್ವೆ ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರಯಾಣದ ಸಮಯದಲ್ಲಿ ಈ ಮಾರ್ಗಸೂಚಿಯನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಇನ್ನೂ ಟಿಕೆಟ್ ಸಿಗುತ್ತಿವೆ
ಈ ರೈಲುಗಳಿಗಾಗಿ ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿದೆ. ಇತ್ತೀಚೆಗಷ್ಟೇ ಈ ಕುರಿತು ಮಾಹಿತಿ ನೀಡಿದ್ದ ರೈಲು ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಕೆಲ ರೈಲುಗಳನ್ನು ಬಿಟ್ಟರೆ ಹೆಚ್ಚಿನ ಸಂಖ್ಯೆಯ ರೈಲುಗಳಲ್ಲಿ ಸೀಟ್ ಗಳು ಇನ್ನೂ ಖಾಲಿ ಇವೆ. ಯಾವ ರೂಟ್ ಗಳ ರೈಲುಗಳು ಸಂಪೂರ್ಣ ಭರ್ತಿಯಾಗಿವೆಯೋ ಆ ರೈಲುಗಳನ್ನು ಓಡಿಸಲಾಗುವುದು. ಕೇವಲ IRCTC ಅಧಿಕೃತ ವೆಬ್ ಸೈಟ್ ಹಾಗೂ ಮೊಬೈಲ್ ಆಪ್ ಮೂಲಕವೇ ಈ ರೈಲುಗಳಲ್ಲಿ ಬರ್ತ ಕಾಯ್ದಿರಿಸಬಹುದಾಗಿದೆ.

Trending News