ಪ್ರಯಾಣಿಕರನ್ನು ಆಕರ್ಷಿಸಲು ರೈಲ್ವೆ ಹೊಸ ಪ್ಲಾನ್; ಅಂತಿಮ ಘಳಿಗೆಯ ಟಿಕೆಟ್'ಗಳ ಮೇಲೆ ಶೇ.10 ರಿಯಾಯಿತಿ!

ಪ್ರಯಾಣಿಕರ ಪಟ್ಟಿ ಪ್ರಕಟವಾದ ನಂತರವೂ ಸೀಟುಗಳು ಉಳಿದಿದ್ದರೆ, ಮೂಲ ಟಿಕೆಟ್ ದರದ ಮೇಲೆ ಶೇ.10 ರಿಯಾಯಿತಿ ನೀಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. 

Last Updated : Jul 19, 2018, 05:37 PM IST
ಪ್ರಯಾಣಿಕರನ್ನು ಆಕರ್ಷಿಸಲು ರೈಲ್ವೆ ಹೊಸ ಪ್ಲಾನ್; ಅಂತಿಮ ಘಳಿಗೆಯ ಟಿಕೆಟ್'ಗಳ ಮೇಲೆ ಶೇ.10 ರಿಯಾಯಿತಿ! title=

ನವದೆಹಲಿ: ಪ್ರಯಾಣಿಕರನ್ನು ಆಕರ್ಷಿಸಲು ರೈಲ್ವೆ ಇಲಾಖೆ ನೂತನ ಕ್ರಮ ಕೈಗೊಂಡಿದೆ. ಈ ಮೊದಲೇ ಆಸನಗಳನ್ನು ರಿಸರ್ವ್ ಮಾಡಿದ ಪ್ರಯಾಣಿಕರ ಪಟ್ಟಿ ಪ್ರಕಟವಾದ ನಂತರವೂ ಸೀಟುಗಳು ಉಳಿದಿದ್ದರೆ, ಮೂಲ ಟಿಕೆಟ್ ದರದ ಮೇಲೆ ಶೇ.10 ರಿಯಾಯಿತಿ ನೀಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. 

ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ರಾಜ್ಯ ಸಚಿವ ರಾಜೇನ್ ಗೋಹೈನ್, ರೈಲ್ವೆಯ ಬೇಡಿಕೆ ಏಕರೂಪವಾಗಿಲ್ಲ. ಋತುಗಳಿಗೆ ಅನುಸಾರವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರುಪೇರಾಗುತ್ತದೆ. ಆದರೆ 2017-18 ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆಯ ಎಲ್ಲ ರೈಲುಗಳಲ್ಲಿ ಮೀಸಲು ಆಸನಗಳು ಶೇ.100ರಷ್ಟು ಭರ್ತಿಯಾಗಿದ್ದವು ಎಂದು ಅವರು ಹೇಳಿದರು.

ಕಡಿಮೆ ಪ್ರಯಾಣಿಕರಿರುವ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ರೈಲು ಸೇವೆಯನ್ನು ಚುರುಕುಗೊಳಿಸಿ, ಕಾರ್ಯಾಚರಣೆಯ ಅವಧಿಯನ್ನು ತಗ್ಗಿಸಲು ಸರಕಾರ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಅಲ್ಲದೆ, ಖಾಲಿ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು, ಸ್ಲೀಪರ್ ಕ್ಲಾಸ್ ಕೋಚ್ಗಳನ್ನು ಎರಡನೇ ದರ್ಜೆಯ ಭೋಗಿಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜೇನ್ ಗೋಹೈನ್ ಹೇಳಿದರು.

Trending News