ರಾಹುಲ್ ಗಾಂಧಿ ಅದ್ಬುತ ಪ್ರಧಾನಿಯಾಗಬಲ್ಲರು -ಉರ್ಮಿಳಾ ಮಾತೊಂಡಕರ್

90 ರ ದಶಕದಲ್ಲಿ ರಂಗೀಲಾ, ದೌಡ್ ನಂತಹ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟಿ ಉರ್ಮಿಳಾ ಮಾತೊಂಡಕರ್,ಇತ್ತೀಚಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು.ಅಲ್ಲದೆ ಈಗ ಮುಂಬೈ ಉತ್ತರ ಭಾಗದ ಮೂಲಕ ಚುನಾವಣೆಗೂ ಕೂಡ ಸ್ಪರ್ಧಿಸುತ್ತಿದ್ದಾರೆ.

Last Updated : Apr 12, 2019, 04:50 PM IST
ರಾಹುಲ್ ಗಾಂಧಿ ಅದ್ಬುತ ಪ್ರಧಾನಿಯಾಗಬಲ್ಲರು -ಉರ್ಮಿಳಾ ಮಾತೊಂಡಕರ್ title=

ನವದೆಹಲಿ: 90 ರ ದಶಕದಲ್ಲಿ ರಂಗೀಲಾ, ದೌಡ್ ನಂತಹ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟಿ ಉರ್ಮಿಳಾ ಮಾತೊಂಡಕರ್,ಇತ್ತೀಚಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು.ಅಲ್ಲದೆ ಈಗ ಮುಂಬೈ ಉತ್ತರ ಭಾಗದ ಮೂಲಕ ಚುನಾವಣೆಗೂ ಕೂಡ ಸ್ಪರ್ಧಿಸುತ್ತಿದ್ದಾರೆ.

ಈಗ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಅದ್ಬುತ ಪ್ರಧಾನಿಯಗಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ "ಕಳೆದ ಐದು ವರ್ಷಗಳಿಂದ ಅವರ ಮೇಲೆ ಕೆಳಮಟ್ಟದ ಟ್ರೋಲ್ ಮಾಡಲಾಗಿದೆ ಅಲ್ಲದೆ ಇಲ್ಲದ ವಿಷಯಗಳನ್ನು ಅವರನ್ನು ಹೊಣೆ ಮಾಡಲಾಗಿದೆ.ಆದರೆ ಅವರು ತಳಮಟ್ಟಕ್ಕೆ ಇಳಿದು ಜನರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ಅದರ ಫಲವಾಗಿ ಈಗ ಕಾಂಗ್ರೆಸ್ ಪಕ್ಷದ ಪ್ರನಾಳಿಕೆ ಹೊರಬಂದಿದೆ.ಇದೊಂದು ಅತ್ತ್ಯುತ್ತಮ ಸಾಧನೆ ಎಂದು ಉರ್ಮಿಳಾ ಮಾತೊಂಡಕರ್ ಹೇಳಿದರು. 

ರಾಹುಲ್ ಗಾಂಧಿ ಅಧಿಕಾರದಲ್ಲಿ ಇಲ್ಲದೆ ಪಕ್ಷವನ್ನು ಹಾಗೂ ದೇಶವನ್ನು ಉತ್ತಮ ಸ್ಥಿತಿಗೆ ಕೊಂಡ್ಯೂಯಲು  ಪ್ಯತ್ನಿಸುತ್ತಿದ್ದಾರೆ.ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ಎಲ್ಲವನ್ನು ಕೂಡ ಅವರು ಈಡೇರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಸಧ್ಯ ಸಿನಿಮಾದ ಬದಲು ರಾಜಕೀಯದ ಮೇಲೆ ಹೆಚ್ಚು ಕೇಂದ್ರಿಕರಿಸುವುದಾಗಿ ಉರ್ಮಿಳಾ ಮಾತೊಂಡಕರ್ ಹೇಳಿದರು 
 

Trending News