ರಾಹುಲ್ ಗಾಂಧಿಯವರ ಅಧ್ಯಕ್ಷೀಯ ನುಡಿಗಳು

        

Last Updated : Dec 16, 2017, 03:09 PM IST
ರಾಹುಲ್ ಗಾಂಧಿಯವರ ಅಧ್ಯಕ್ಷೀಯ ನುಡಿಗಳು  title=
ಫೋಟೋ ಕೃಪೆ :ANI

ನವದೆಹಲಿ: ರಾಹುಲ್ ಗಾಂಧಿ  ನೂತನವಾಗಿ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ವಹಿಸಿಕೊಂಡ ಸಂಧರ್ಭದಲ್ಲಿ ಮಾತನಾಡಿದ ಮುಖ್ಯಾಂಶಗಳು ಇಲ್ಲಿವೆ 

- ಎಲ್ಲರಂತೆ ನಾನು ಆದರ್ಶವಾದಿ,ನಾನು 13 ವರ್ಷಗಳ ಹಿಂದೆ ಪಕ್ಷಕ್ಕೆ ಪಾದಾರ್ಪಣೆ ಮಾಡಿದೆ.

- ಇಂದು ರಾಜಕೀಯ ಹೆಚ್ಚಾಗಿ ಜನರ ಏಳಿಗೆಗಾಗಿ ಬಳಸುವುದಕ್ಕಿಂತ ಹೆಚ್ಚಾಗಿ ಅವರನ್ನು ಹತ್ತಿಕ್ಕಲು ಬಳಸಲಾಗುತ್ತಿದೆ.

- ಕಾಂಗ್ರೆಸ್ ಪಕ್ಷವು ಭಾರತವನ್ನು 21 ನೆಯ ಶತಮಾನಕ್ಕೆ ಕೊಂಡೊಯ್ದರೆ  ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಮಧ್ಯಕಾಲೀನ ಅವಧಿಗೆ ಕರೆದೊಯ್ಯುತ್ತಿದ್ದಾರೆ.

- ನಾವೆಲ್ಲಾ ಇಂದಿನ ರಾಜಕಾರಣದಿಂದ ನಿರಾಸೆಗೊಂಡಿದ್ದೇವೆ. ಇಂದು ರಾಜಕೀಯ ಸತ್ಯ ಮತ್ತು ದಯದ ಕೊರತೆಯಿಂದ ಬಳಲುತ್ತಿದೆ.
 
-ಈಗ ನಾವು ಈ ಹಳೆಯ ಪಕ್ಷವನ್ನು ನಾವು ಹೊಸ  ಮತ್ತು ಹಳೆಯ ಪಿಳಿಗೆಯನ್ನು ಜೊತೆಯಾಗಿ ತೆಗೆದುಕೊಂಡು ಹೋಗುವುದರ ಮೂಲಕ ಪಕ್ಷಕ್ಕೆ ಹೊಸ ಚೈತನ್ಯವನ್ನು ನೀಡುತ್ತೇವೆ.

-ಮುಂದಿನ ದಿನಗಳಲ್ಲಿ ಖಂಡಿತ ಕಾಂಗ್ರೆಸ್ ಪ್ರತಿಧ್ವನಿ ಮೊಳಗಲಿದೆ.
 
-ಸದ್ಯ ಬಿಜೆಪಿ ಮಾಡುತ್ತಿರುವ ದ್ವೇಷದ ರಾಜಕಾರಣವನ್ನು ನಮ್ಮ  ಪ್ರೀತಿಯ ಕಾರ್ಯಕರ್ತರು ಮತ್ತು ನೇತಾರರು ಮಾತ್ರ ತಡೆಗಟ್ಟಬಲ್ಲರು.

-ನಾವೆಲ್ಲಾ, ಜೊತೆಯಾಗಿ ಹೋರಾಡೋಣ ,ಒಂಟಿಯಾಗಿ ಹೋರಾಡಲಾರರ ಜೊತೆಯೂ ಸೇರಿ.
 
-ಬಿಜೆಪಿಯ ವಿಚಾರಗಳು ನಮಗೆ ಸಾಮ್ಯತೆ ಹೊಂದದಿದ್ದರೂ ಕೂಡಾ  ನಾವು ಅವರನ್ನು  ಸಹೋದರರು ಸಹೋದರಿಯರಂತೆ ಕಾಣುತ್ತೇವೆ.ಅವರು ನಮ್ಮನ್ನು ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ಅವರನ್ನು ಒಳಗೊಳ್ಳುವಂತೆ ಮಾಡಲು ಪ್ರಯತ್ನಿಸುತ್ತೇವೆ.ನಾವು ನಿರಂತರವಾಗಿ ಪ್ರೀತಿ ಮತ್ತು ಸೌಹಾರ್ದತೆಯೊಂದಿಗೆ ಮುನ್ನಡೆಯುತ್ತೇವೆ.

-ಕಳೆದ 13 ವರ್ಷಗಳಿಂದ ನಾನು ರಾಜಕಿಯದಲ್ಲಿದ್ದೇನೆ,ಇದರಲ್ಲಿ ನಾನು ನನ್ನ ಹಿರಿಯರಾದ ಮನಮೋಹನ್ ಸಿಂಗ್ ಸೋನಿಯಾ ಗಾಂಧೀಜಿಯವರಿಂದ ಗೌರವಾದರಗಳನ್ನು ಕಲಿತಿದ್ದೇನೆ.

-ನಾನು ಇಂದು ಈ ಹುದ್ದೆಯನ್ನು ಇಂಥ ದೊಡ್ಡ ಮಹನಿಯರ ನೆರಳಿನಲ್ಲಿ ನಾನು ಕಾರ್ಯನಿರ್ವಹಿಸುತಿದ್ದೇನೆ ಎನ್ನುವ ನಂಬಿಕೆಯಲ್ಲಿ ಇದನ್ನು ಸ್ವೀಕರಿಸುತ್ತಿದ್ದೇನೆ. 
 

Trending News