ರಫೇಲ್ ಡೀಲ್: ರಾಹುಲ್ ಸವಾಲಿಗೆ ತಿರುಗೇಟು ನೀಡಿದ ಅರುಣ್ ಜೇಟ್ಲಿ

ರಫೇಲ್‌ ಒಪ್ಪಂದದಲ್ಲಿ ಹಗರಣವಾಗಿಲ್ಲ, ಈ ಒಪ್ಪಂದವೇ ಹಗರಣ - ರಾಹುಲ್ ಗಾಂಧಿ  

Last Updated : Jan 2, 2019, 04:18 PM IST
ರಫೇಲ್ ಡೀಲ್: ರಾಹುಲ್ ಸವಾಲಿಗೆ ತಿರುಗೇಟು ನೀಡಿದ ಅರುಣ್ ಜೇಟ್ಲಿ title=
Pic Courtesy: PTI

ನವದೆಹಲಿ: ಸಂಸತ್‌ ಚಳಿಗಾಲದ ಅಧಿವೇಶನದಲ್ಲಿಂದು ಪ್ರತಿಪಕ್ಷ ಕಾಂಗ್ರೆಸ್ ರಫೇಲ್ ಡೀಲ್ ಕುರಿತಂತೆ ಆಡಳಿತ ಪಕ್ಷದ ಮೇಲೆ ಭಾರೀ ಟೀಕಾ ಪ್ರಹಾರ ನಡೆಸಿತು. ಪ್ರಧಾನಿ ಬಳಿ ಇಡೀ ದೇಶವೇ ಉತ್ತರ ಬಯಸುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗುಡುಗಿದ್ದಾರೆ. ಇನ್ನು ವಿತ್ತ ಸಚಿವ ಅರುಣ್ ಜೇಟ್ಲಿ, ಆಗಸ್ಟಾ ವೆಸ್ಟ್‌ಲ್ಯಾಂಡ್‌ ಮತ್ತು ನ್ಯಾಷನಲ್ ಹೆರಾಲ್ಡ್‌ ಪ್ರಕರಣಗಳನ್ನು ಪ್ರಸ್ತಾಪಿಸಿ ರಾಹುಲ್ ಗೆ ತಿರುಗೇಟು ನೀಡಿದರು.

ಕಲಾಪದಲ್ಲಿ  ಮಾತನಾಡಿದ ರಾಹುಲ್‌ ಗಾಂಧಿ ಸಂದರ್ಶನವೊಂದರಲ್ಲಿ, ರಫೇಲ್‌ ವಿಚಾರದಲ್ಲಿ ನನ್ನನ್ನು ಯಾರು ಪ್ರಶ್ನೆ ಮಾಡಿಲ್ಲ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಇಡೀ ದೇಶವೇ ಪ್ರಧಾನಿ ಬಳಿ ಉತ್ತರ ಬಯಸುತ್ತಿದೆ ಎಂದರು. 

ತಮ್ಮ ಬಳಿ ಇರುವ ಗೋವಾದ ಮಂತ್ರಿ ಅವರು ಮನೋಹರ ಪರಿಕ್ಕರ್ ಹಾಗೂ ರಫೆಲ್‌ ಕಡತಗಳ ಬಗ್ಗೆ ಮಾತನಾಡಿರುವ ಆಡಿಯೋ ಫೈಲ್‌ ಒಂದನ್ನು ಬಿಡುಗಡೆ ಮಾಡಲು ಅವರು ಅನುಮತಿ ಕೋರಿದ್ದರು. ಆದರೆ ಸಭಾಧ್ಯಕ್ಷರು ಅದಕ್ಕೆ ಅನುಮತಿ ನೀಡಲಿಲ್ಲ. 

ಇನ್ನು ರಫೇಲ್​ ಹಗರಣಕ್ಕೆ ಸಂಬಂಧಿಸಿದ ಆಡಿಯೋವೊಂದನ್ನು ಕಾಂಗ್ರೆಸ್​ನ ನಾಯಕ ರಣದೀಪ್​ ಸಿಂಗ್​ ಸುರ್ಜೆವಾಲ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅರುಣ್ ಜೇಟ್ಲಿ ಅದನ್ನು ತಿರುಚಲಾಗಿದೆ. ಆಡಿಯೋ ಕ್ಲಿಪ್ ಕುರಿತ ದೃಢೀಕರಣದ ಬಗ್ಗೆ ರಾಹುಲ್ ಅವರಿಗೇ ಸಂಶಯವಿದೆ. ಏಕೆಂದರೆ ಆಡಿಯೋ ಕ್ಲಿಪ್'ನ್ನು ತಮ್ಮ ಪಕ್ಷದವರೇ ಸೃಷ್ಟಿಸಿರುವುದರಿಂದ ರಾಹುಲ್ ಅವರಿಗೆ ಭಯವಿದೆ ಎಂದು ವಾಗ್ದಾಳಿ ನಡೆಸಿದರು.
 

Trending News