Pushkar Temple: ವಿವಾಹಿತ ಪುರುಷರು ಭೇಟಿ ನೀಡಲು ಹೆದರುವ ದೇಶದ ಏಕೈಕ ದೇವಸ್ಥಾನ ಇದು

Brahmaji Mandir - ಮದುವೆಯಾದ ಗಂಡಸರು ಹೋಗಲು ಭಯಪಡುವಂಥ ದೇವಸ್ಥಾನ ನಮ್ಮ ದೇಶದಲ್ಲಿದೆ ಎಂದರೆ ನೀವು ನಂಬುವಿರಾ? ಹೌದು, ಇದರ ಹಿಂದೆ ಒಂದು ಪೌರಾಣಿಕ ಕಾರಣವಿದೆ. ಮದುವೆಯಾಗದ ಹುಡುಗ ಹುಡುಗಿಯರು ಮತ್ತು ವಿವಾಹಿತ ಮಹಿಳೆಯರು ಮಾತ್ರ ಈ ದೇವಸ್ಥಾನಕ್ಕೆ (Temple Where Men Prohibited To Enter) ಹೋಗುತ್ತಾರೆ.

Written by - Nitin Tabib | Last Updated : Mar 3, 2022, 01:26 PM IST
  • ಪುಷ್ಕರ ದೇವಸ್ಥಾನಕ್ಕೆ ಸಂಬಂಧಿಸಿದ ಈ ಸಂಗತಿ ತುಂಬಾ ವಿಚಿತ್ರವಾಗಿದೆ
  • ವಿವಾಹಿತ ಪುರುಷರು ಪುಷ್ಕರ ದೇವಸ್ಥಾನಕ್ಕೆ ಭೇಟಿ ನೀಡುವುದಿಲ್ಲ
  • ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
Pushkar Temple: ವಿವಾಹಿತ ಪುರುಷರು ಭೇಟಿ ನೀಡಲು ಹೆದರುವ ದೇಶದ ಏಕೈಕ ದೇವಸ್ಥಾನ ಇದು  title=
Married Men Are Not Allowed In This Temple (File Photo)

ನವದೆಹಲಿ:  Married Man, Married Men Not Allowed - ಮದುವೆಯ ನಂತರ ವಧು-ವರರು ದೇವಾನುದೇವತೆಗಳ ಆಶೀರ್ವಾದ ಪಡೆಯುವುದು ಬಹುತೇಕ ಎಲ್ಲ ಧರ್ಮಗಳಲ್ಲೂ ರೂಢಿಯಲ್ಲಿದೆ. ಹೆಸರಾಂತ ದೇವಸ್ಥಾನಗಳಲ್ಲಿ ಅಥವಾ ಧಾರ್ಮಿಕ ಸ್ಥಳಗಳಲ್ಲಿ ವಿವಾಹಿತರು ತಲೆಬಾಗುತ್ತಾರೆ. ಆದರೆ ನಮ್ಮ ದೇಶದಲ್ಲಿ ಮದುವೆಯ ನಂತರ ಹುಡುಗರು ಹೋಗಲು ಹೆದರುವ ದೇವಸ್ಥಾನವಿದೆ ಎಂದರೆ ನೀವು ನಂಬುತ್ತೀರಾ? ವಿವಾಹಿತ ಪುರುಷರು ಅಪ್ಪಿ-ತಪ್ಪಿಯೂ ಕೂಡ ಅಲ್ಲಿಗೆ ಭೇಟಿ ನೀಡುವುದಿಲ್ಲ. ಹೋದರೆ ಅವರಿಗೆ ಶಾಪ ತಟ್ಟಿ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಪುಷ್ಕರನಲ್ಲಿರುವ ಈ ಬ್ರಹ್ಮ ದೇವಾಲಯಕ್ಕೆ ವಿವಾಹಿತ ಪುರುಷರು ಹೋಗುವುದಿಲ್ಲ (Story Behind Pushkar Temple)
ಹೊಸದಾಗಿ ಮದುವೆಯಾದ ಹುಡುಗರು ರಾಜಸ್ಥಾನದ ಪುಷ್ಕರ್ ನಲ್ಲಿರುವ ವಿಶ್ವವಿಖ್ಯಾತ ಬ್ರಹ್ಮಾಜಿಯ ದೇವಸ್ಥಾನಕ್ಕೆ (Story Of Temple) ಹೋಗಲು ಹೆದರುತ್ತಾರೆ. ಹೊಸದಾಗಿ ಮದುವೆಯಾದ ಹುಡುಗರು ಈ ದೇವಾಲಯಕ್ಕೆ ಬಂದರೆ, ಅವರ ವೈವಾಹಿಕ ಜೀವನದಲ್ಲಿ ವಿಘ್ನಗಳು ಎದುರಾಗುತ್ತವೆ ಎಂದು ನಂಬಲಾಗಿದೆ. ಇದರ ಹಿಂದಿನ ಕಾರಣ ಬ್ರಹ್ಮ ದೇವರಿಗೆ ಅವನ ಹೆಂಡತಿ ನೀಡಿದ ಶಾಪ ಎನ್ನಲಾಗುತ್ತದೆ

ಪುರಾಣಗಳ ಪ್ರಕಾರ ಬ್ರಹ್ಮಾಂಡದ ಸೃಷ್ಟಿಗಾಗಿ ಬ್ರಹ್ಮನು ರಾಜಸ್ಥಾನದ ಪುಷ್ಕರ್‌ನಲ್ಲಿ ಯಾಗವನ್ನು ನಡೆಸಿದ್ದರು ಎನ್ನಲಾಗುತ್ತದೆ. ಈ ಯಾಗದಲ್ಲಿ ಅವರು ತನ್ನ ಪತ್ನಿಯ ಜೊತೆಗೆ ಕುಳಿತುಕೊಳ್ಳಬೇಕಾಗಿತ್ತು, ಆದರೆ ಅವರ  ಪತ್ನಿ ಸಾವಿತ್ರಿ ಬರಲು ತಡವಾದುದನ್ನು ಕಂಡು ನಂದಿನಿ ಹಸುವಿನ ಬಾಯಿಯಿಂದ ಗಾಯತ್ರಿಯನ್ನು ಪ್ರಕಟಿಸಿ  ಮತ್ತು ಅವಳನ್ನು ಮದುವೆಯಾಗಿ ಯಜ್ಞವನ್ನು ಮಾಡಲು ಪ್ರಾರಂಭಿಸುತ್ತಾರೆ. ಸಾವಿತ್ರಿಯು (Who Is Wife Of Brahmaji) ತಲುಪಿದಾಗ, ಅವಳು ಬ್ರಹ್ಮಾಜಿಯ ಪಕ್ಕದಲ್ಲಿ ತನ್ನ ಸ್ಥಳದಲ್ಲಿ ಇನ್ನೊಬ್ಬ ಮಹಿಳೆ ಕುಳಿತಿರುವುದನ್ನು ನೋಡಿ ಕೋಪಗೊಳ್ಳುತ್ತಾಳೆ ಮತ್ತು ನೀವು ನನ್ನನ್ನು ಸೃಷ್ಟಿಸಲು ಮರೆತ ಜಗತ್ತು ನಿನ್ನನ್ನು ಆರಾಧಿಸುವುದಿಲ್ಲ ಎಂದು ಶಾಪ ನೀಡುತ್ತಾಳೆ. ನಿಮ್ಮ ಈ ದೇವಾಲಯವನ್ನು ಪ್ರವೇಶಿಸುವ ವಿವಾಹಿತ ಪುರುಷನು ತನ್ನ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ವಿವಾಹಿತ ಪುರುಷರು ಈ ದೇವಾಲಯಕ್ಕೆ ಭೇಟಿ ನೀಡಲು ಹೆದರುತ್ತಾರೆ.

ಇದನ್ನೂ ಓದಿ-ಈ ತಿಂಗಳಲ್ಲಿ ಜನಿಸಿದವರು ಬಹಳ ಅದೃಷ್ಟವಂತರಾಗಿರುತ್ತಾರೆ! ಅವರ ಯಶಸ್ಸಿನ ಹಿಂದಿದೆ ಅದ್ಬುತ ಕಾರಣ

ಸಾವಿತ್ರಿಯ ದೇವಸ್ಥಾನವನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ (Savitri Temple)
ಪುಷ್ಕರನ ಈ ದೇವಾಲಯದ ಬಳಿಯ ಪ್ರತ್ಯೇಕ ಬೆಟ್ಟದ ಮೇಲೆ ಬ್ರಹ್ಮನ ಪತ್ನಿ ಸಾವಿತ್ರಿಜಿಯ ದೇವಾಲಯವನ್ನು ನಿರ್ಮಿಸಲಾಗಿದೆ. ಕೋಪವು ಕಡಿಮೆಯಾದಾಗ, ಬ್ರಹ್ಮನ ಹೆಂಡತಿ ಸಾವಿತ್ರಿಯು ಪುಷ್ಕರದ ಬಳಿಯ ಬೆಟ್ಟಗಳಿಗೆ ಹೋಗಿ ತಪಸ್ಸಿನಲ್ಲಿ ಮುಳುಗಿದಳು ಮತ್ತು ನಂತರ ಅಲ್ಲಿಯೇ ಉಳಿದುಕೊಳ್ಳುತ್ತಾಳೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಈ ದೇವಾಲಯದಲ್ಲಿ, ಮಹಿಳೆಯರು ಮೆಹಂದಿ, ಬಿಂದಿ ಮತ್ತು ಬಳೆಗಳಂತಹ ಮೇಕಪ್ ವಸ್ತುಗಳನ್ನು ಪ್ರಸಾದವಾಗಿ ಅರ್ಪಿಸುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

ಇದನ್ನೂ ಓದಿ-Russia-Ukraine ಯುದ್ಧದ ಪ್ರಭಾವ ಭಾರತದ ಮೇಲೆ ಯಾವಾಗ? ಇಲ್ಲಿದೆ ಬೆಚ್ಚಿಬೀಳಿಸುವ ಭವಿಷ್ಯವಾಣಿ!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-ಬೆಳಗ್ಗೆ ಈ ಆಹಾರಗಳನ್ನು ತಿಂದರೆ ಬೊಜ್ಜು ಸುಲಭವಾಗಿ ಕರಗುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News