ರೈತರ ಪ್ರತಿಭಟನೆ ನಡುವೆ ಪಂಜಾಬ್-ಹರಿಯಾಣ ಸಿಎಂ ಟ್ವಿಟ್ಟರ್ ವಾರ್, ಯಾರು ಏನು ಹೇಳಿದರು?

ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಡುವೆ ಟ್ವಿಟರ್ ವಾರ್ ಮುಂದುವರೆದಿದೆ.

Last Updated : Nov 27, 2020, 12:13 PM IST
  • ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಡುವೆ ಟ್ವಿಟರ್ ವಾರ್
  • ಸಾರ್ವಜನಿಕ ಹೆದ್ದಾರಿಗಳ ಮೂಲಕ ಶಾಂತಿಯುತವಾಗಿ ಸಾಗುವ ಹಕ್ಕು ರೈತರಿಗೆ ಇಲ್ಲವೇ? #ConstitutionDay2020 ಸಂವಿಧಾನ ದಿನದಂದು ರೈತರ ಸಾಂವಿಧಾನಿಕ ಹಕ್ಕನ್ನು ಕಸಿದು ಈ ರೀತಿ ಕಿರುಕುಳ ನೀಡುತ್ತಿರುವುದು ವಿಷಾದಕರ ಸಂಗತಿ - ಕ್ಯಾಪ್ಟನ್ ಅಮರಿಂದರ್ ಸಿಂಗ್
  • ಅಮರಿಂದರ್ ಸಿಂಗ್ ರಾಜಕೀಯ ಮಾಡುತ್ತಿದ್ದಾರೆ- ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಆರೋಪ
ರೈತರ ಪ್ರತಿಭಟನೆ ನಡುವೆ ಪಂಜಾಬ್-ಹರಿಯಾಣ ಸಿಎಂ ಟ್ವಿಟ್ಟರ್ ವಾರ್, ಯಾರು ಏನು ಹೇಳಿದರು? title=

ನವದೆಹಲಿ: ಪಂಜಾಬ್-ಹರಿಯಾಣ ರೈತರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ "ದೆಹಲಿ ಚಲೋ" ಕೈಗೊಂಡಿದ್ದಾರೆ. ಆದರೆ ಹರಿಯಾಣದಲ್ಲಿಯೇ ರೈತರನ್ನು ತಡೆಯಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ದೆಹಲಿಯ ಗಡಿಯಲ್ಲಿ ಹೆಚ್ಚಿನ ಪ್ರಮಾಣದ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಏತನ್ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಡುವೆ ಟ್ವಿಟ್ಟರ್ ವಾರ್ ನಡೆದಿದೆ.

ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ :
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amrinder Singh) ಅವರು ಹರಿಯಾಣದಲ್ಲಿ ರೈತರನ್ನು ತಡೆಯುವ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡುವ ಮೂಲಕ ಹರಿಯಾಣ ಪೊಲೀಸ್ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು ರೈತರ ವಿರುದ್ಧ ಬಲ ಪ್ರಯೋಗ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ಎಂದು ಹೇಳಿದ್ದಾರೆ.  

ಟ್ವೀಟ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್  (Manohar Lal Khattar) ಎಂಎಸ್‌ಪಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ನಾನು ರಾಜಕೀಯವನ್ನು ತೊರೆಯುತ್ತೇನೆ. ಆದ್ದರಿಂದ, ದಯವಿಟ್ಟು ಮುಗ್ಧ ರೈತರನ್ನು ಪ್ರಚೋದಿಸುವುದನ್ನು ನಿಲ್ಲಿಸಿ  ಎಂದು ಕಿಡಿಕಾರಿದ್ದಾರೆ.

ಪಂಜಾಬ್ ಸಿಎಂ ಆರೋಪ:
ಮನೋಹರ್ ಲಾಲ್ ಖಟ್ಟರ್ ಅವರನ್ನು ಟ್ಯಾಗ್ ಮಾಡಿ ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು , 'ಸುಮಾರು 2 ತಿಂಗಳಿನಿಂದ ರೈತರು ಯಾವುದೇ ಸಮಸ್ಯೆ ಇಲ್ಲದೆ ಪಂಜಾಬ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಪ್ರಚೋದಿಸಲು ಹರಿಯಾಣ ಸರ್ಕಾರ ಏಕೆ ಬಲವನ್ನು ಬಳಸುತ್ತಿದೆ? ಸಾರ್ವಜನಿಕ ಹೆದ್ದಾರಿಗಳ ಮೂಲಕ ಶಾಂತಿಯುತವಾಗಿ ಸಾಗುವ ಹಕ್ಕು ರೈತರಿಗೆ ಇಲ್ಲವೇ? #ConstitutionDay2020 ಸಂವಿಧಾನ ದಿನದಂದು ರೈತರ ಸಾಂವಿಧಾನಿಕ ಹಕ್ಕನ್ನು ಕಸಿದು ಈ ರೀತಿ ಕಿರುಕುಳ ನೀಡುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಮನೋಹರ್ ಲಾಲ್ ಖಟ್ಟರ್ ಜಿ ಅವರೇ ರೈತರಿಗೆ ಹೋಗಲು ಬಿಡಿ, ಅವರನ್ನು ಅಂಚಿಗೆ ತರಬೇಡಿ. ಅವರು ತಮ್ಮ ಧ್ವನಿಯನ್ನು ಶಾಂತಿಯುತವಾಗಿ ದೆಹಲಿಗೆ ಕೊಂಡೊಯ್ಯಲಿ ಎಂದಿದ್ದಾರೆ.

ನಿಮ್ಮ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಈ ರೀತಿ ಪಡೆಯಿರಿ ಸಹಾಯ

ಅಮರೀಂದರ್ ಸಿಂಗ್ ಮಾಡಿದ ಟ್ವೀಟ್‌ಗೆ ಮನೋಹರ್ ಲಾಲ್ ಖಟ್ಟರ್ ಕೂಡ ಪ್ರತಿಕ್ರಿಯಿಸಿದ್ದು ಪಂಜಾಬ್ (Punjab) ಸಿಎಂ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಜಿ, ನಾನು ಈಗಾಗಲೇ ಹೇಳಿದ್ದೇನೆ ಮತ್ತು ನಾನು ಮತ್ತೆ ಹೇಳುತ್ತಿದ್ದೇನೆ, ಎಂಎಸ್‌ಪಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ನಾನು ರಾಜಕೀಯವನ್ನು ತೊರೆಯುತ್ತೇನೆ. ಆದ್ದರಿಂದ ದಯವಿಟ್ಟು ಮುಗ್ಧ ರೈತರನ್ನು ಪ್ರಚೋದಿಸುವುದನ್ನು ನಿಲ್ಲಿಸಿ ಎಂದು ಬರೆದಿದ್ದಾರೆ.

ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಖಟ್ಟರ್ :
ಮುಂದಿನ ಟ್ವೀಟ್‌ನಲ್ಲಿ ಖಟ್ಟರ್, 'ನಾನು ಕಳೆದ ಮೂರು ದಿನಗಳಿಂದ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ದುಃಖಕರವೆಂದರೆ, ನೀವು ಸಂಪರ್ಕಿಸದಿರಲು ನಿರ್ಧರಿಸಿದ್ದೀರಿ. ರೈತರ (Farmers) ಸಮಸ್ಯೆಗಳ ಬಗ್ಗೆ ನೀವು ತುಂಬಾ ಗಂಭೀರವಾಗಿರುವಿರಾ? ನೀವು ಕೇವಲ ಟ್ವೀಟ್ ಮಾಡುತ್ತಿದ್ದೀರಿ. ಆದರೆ ಮಾತುಕತೆಯನ್ನು ಏಕೆ ತಪ್ಪಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಮುಂದಿನ ಟ್ವೀಟ್‌ನಲ್ಲಿ, ನಿಮ್ಮ ಸುಳ್ಳು, ವಂಚನೆ ಮತ್ತು ಪ್ರಚಾರದ ಸಮಯ ಮುಗಿದಿದೆ. ನಿಮ್ಮ ನೈಜ ಮುಖವನ್ನು ಜನರು ನೋಡಲಿ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಜನರ ಜೀವಕ್ಕೆ ಅಪಾಯವಾಗುವುದನ್ನು ದಯವಿಟ್ಟು ನಿಲ್ಲಿಸಿ. ಜನರ ಜೀವನದೊಂದಿಗೆ ಆಟವಾಡದಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಸಾಂಕ್ರಾಮಿಕ ಸಮಯದಲ್ಲಿಯೂ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.

ಖಟ್ಟರ್ ಆರೋಪಕ್ಕೆ ಅಮರಿಂದರ್ ಸಿಂಗ್ ಪ್ರತಿಕ್ರಿಯೆ:
ಖಟ್ಟರ್ ಅವರ ಆರೋಪಕ್ಕೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿರುವ ಅಮರಿಂದರ್ ಸಿಂಗ್, 'ಖಟ್ಟರ್ ಜಿ, ನಿಮ್ಮ ಪ್ರತಿಕ್ರಿಯೆ ಬಗ್ಗೆ ನನಗೆ ಆಶ್ಚರ್ಯವಾಗಿದೆ. ಅವರು ಎಂಎಸ್‌ಪಿ (MSP) ಬಗ್ಗೆ ಮನವರಿಕೆ ಆಗಬೇಕಿರುವುದು ರೈತರು, ನಾನಲ್ಲ. ಅವರ 'ದೆಹಲಿ ಚಲೋ'ಗೆ ಮುಂಚಿತವಾಗಿ ನೀವು ಅವರೊಂದಿಗೆ ಮಾತನಾಡಲು ಪ್ರಯತ್ನಿಸಬೇಕಿತ್ತು. ನಾನು ರೈತರನ್ನು ಪ್ರಚೋದಿಸುತ್ತಿದ್ದೇನೆ ಎಂದು ನೀವು ಭಾವಿಸುವುದಾದರೆ ಹರಿಯಾಣದ ರೈತರು ಕೂಡ ಏಕೆ ದೆಹಲಿಯತ್ತ ತೆರಳುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಸಹಕಾರ ಸಂಘಗಳ ಮೂಲಕ ಜೂನ್ ಒಳಗೆ 5 ಸಾವಿರ ಉದ್ಯೋಗ ನಿರ್ಮಾಣ: ಎಸ್.ಟಿ.‌ ಸೋಮಶೇಖರ್

Trending News