ನವದೆಹಲಿ: ಶನಿವಾರ ಮಧ್ಯಾಹ್ನ ಮೊಹಾಲಿಯ ಖರಾರ್‌ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದ ನಂತರ ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಇನ್ನೂ ಯಾವುದೇ ಪ್ರಾಣಹಾನಿ ಕುರಿತಾಗಿ ಪೂರ್ಣ ಮಾಹಿತಿ ದೊರೆತಿಲ್ಲ ಎನ್ನಲಾಗಿದೆ.
ಈ ಘಟನೆ ಮೊಹಾಲಿಯ ಖರಾರ್-ಲ್ಯಾಂಡ್ರಾನ್ ರಸ್ತೆಯಲ್ಲಿರುವ ಜೆಟಿಪಿಎಲ್ ನಗರದ ಗೇಟ್‌ಗಳಲ್ಲಿ ನಡೆದಿದೆ."ಯಾರಾದರೂ ಅವಶೇಷಗಳ ಅಡಿಯಲ್ಲಿದ್ದಾರೋ ಇಲ್ಲವೋ, ಎಂದು ನಾವು ಹೇಳಲಾಗುವುದಿಲ್ಲ, ಕೆಲಸ ನಡೆಯುತ್ತಿದೆ, ಆಂಬುಲೆನ್ಸ್‌ಗಳನ್ನು ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಲಿವೆ' ಎಂದು ಖರಾರ್ ಡಿಎಸ್ಪಿ ಪಾಲ್ ಸಿಂಗ್ ಹೇಳಿದರು. ಜೆಟಿಪಿಎಲ್ ನಗರದ ಗೇಟ್ ಬಳಿ ನೆಲಮಾಳಿಗೆಯನ್ನು ಅಗೆಯುತ್ತಿದ್ದಂತೆ ಕಟ್ಟಡ ಕುಸಿಯಿತು. ಅಂಬಿಕಾ ಬಿಲ್ಡರ್ ಗಳು ತಮ್ಮ ಕಚೇರಿಗಳನ್ನು ಕಟ್ಟಡದಲ್ಲಿ ನಿರ್ವಹಿಸುತ್ತಿದ್ದರು.
#UPDATE Himanshu Jain, Sub-Divisional Magistrate (SDM), Mohali: Two persons have been rescued. 6-7 persons still feared trapped under the debris. NDRF team & other support staff carrying out search and rescue operation. #Punjab https://t.co/jHxp7kUSfg pic.twitter.com/eUGYbuCsbU
— ANI (@ANI) February 8, 2020
ಈ ಘಟನೆ ಕುರಿತಾಗಿ ಮೊಹಾಲಿ ಉಪವಿಭಾಗ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಹಿಮಾಂಶು ಜೈನ್ ಮಾತನಾಡಿ 'ಇಬ್ಬರು ವ್ಯಕ್ತಿಗಳನ್ನು ರಕ್ಷಿಸಲಾಗಿದೆ. 6-7 ಜನರು ಇನ್ನೂ ಭಗ್ನಾವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿದ್ದಾರೆ. ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ತಂಡ ಮತ್ತು ಇತರ ಸಹಾಯಕ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಭಗ್ನಾವಶೇಷಗಳ ಅಡಿಯಲ್ಲಿ ಜೆಸಿಬಿ ಯಂತ್ರವೂ ಪತ್ತೆಯಾಗಿದೆ ಮತ್ತು ಕೆಲವು ಕಾರ್ಮಿಕರನ್ನು ರಕ್ಷಿಸಲಾಗಿದೆ.