ಪ್ರಿಯಾಂಕಾ ಗಾಂಧಿ ಪಕ್ಷದ ನೇತೃತ್ವ ವಹಿಸಲು ಕಾಂಗ್ರೆಸ್ ನಲ್ಲಿ ಹೆಚ್ಚಿದ ಒತ್ತಡ

ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿ ಇದುವರೆಗೆ ರಾಹುಲ್ ಗಾಂಧಿಗೆ ಪರ್ಯಾಯವಾಗಿ ಪಕ್ಷದ ಅಧ್ಯಕ್ಷರನ್ನು ಹುಡುಕುವಲ್ಲಿ ವಿಫಲವಾಗಿದೆ.

Last Updated : Jul 17, 2019, 12:36 PM IST
ಪ್ರಿಯಾಂಕಾ ಗಾಂಧಿ ಪಕ್ಷದ ನೇತೃತ್ವ ವಹಿಸಲು ಕಾಂಗ್ರೆಸ್ ನಲ್ಲಿ ಹೆಚ್ಚಿದ ಒತ್ತಡ  title=

ನವದೆಹಲಿ: ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿ ಇದುವರೆಗೆ ರಾಹುಲ್ ಗಾಂಧಿಗೆ ಪರ್ಯಾಯವಾಗಿ ಪಕ್ಷದ ಅಧ್ಯಕ್ಷರನ್ನು ಹುಡುಕುವಲ್ಲಿ ವಿಫಲವಾಗಿದೆ.

ಈ ಹಿಂದೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸುಶೀಲ್ ಕುಮಾರ್ ಶಿಂದೆ ಅವರ ಹೆಸರು ಕೇಳಿ ಬಂದಿದ್ದರೂ ಕೂಡ, ಈಗ ಪಕ್ಷದಲ್ಲಿ ಯುವಕರಿಗೆ ಪ್ರಾಧ್ಯಾನ್ಯತೆ ನೀಡುವ ನಿಟ್ಟಿನಲ್ಲಿ ಯೋಚಿಸಲಾಗುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ನೀಡಿದ ಹೇಳಿಕೆಯೇ ನಿದರ್ಶನ ಎನ್ನಬಹುದು.

ಇನ್ನು ಜ್ಯೋತಿರಾದಿತ್ಯ ಸಿಂಧ್ಯ ಕೂಡ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿ ಅಧ್ಯಕ್ಷ ಸ್ಥಾನವನ್ನು ಯುವಕರಿಗೆ ನೀಡುವ ವಿಚಾರವಾಗಿ ಹೇಳಿಕೆ ನೀಡಿದ್ದರು. ಈಗಾಗಲೇ ರಾಜಿನಾಮೆ ವಿಚಾರವಾಗಿ ರಾಹುಲ್ ಗಾಂಧೀ ಸುದೀರ್ಘ ಪತ್ರ ಬರೆದು ತಮ್ಮ ಸ್ಪಷ್ಟ ನಿರ್ಧಾರವನ್ನು ತಿಳಿಸಿರುವ ಹಿನ್ನಲೆಯಲ್ಲಿ, ಈಗ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷವು ಅಧ್ಯಕ್ಷ ಹುದ್ದೆಗೆ ಪರ್ಯಾಯ ಆಯ್ಕೆ ಹುಡುಕಾಟಕ್ಕೆ ಮುಂದಾಗಿದೆ.

ರಾಹುಲ್ ಗಾಂಧೀ ಮುಂದಿನ ಅಧ್ಯಕ್ಷರು ತಮ್ಮ ಕುಟುಂಬದ ಹೊರಗಿನವರಾಗಿರುತ್ತಾರೆ ಎಂದು ಹೇಳಿದ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧೀ ಹೆಸರನ್ನು ಬಹಿರಂಗವಾಗಿ ಪ್ರಸ್ತಾಪಿಸಿರಲಿಲ್ಲ, ಆದರೆ ಈಗ ಪಕ್ಷದ ಒಳಗೆ ಪ್ರಿಯಾಂಕಾ ಗಾಂಧಿಯವರನ್ನು ಅಧ್ಯಕ್ಷರಾಗಿ ನೇಮಕ ಮಾಡಲು ಒತ್ತಡ ಹೆಚ್ಚಿದೆ.

ಮಾಜಿ ಕೇಂದ್ರ ಮಂತ್ರಿ ಶ್ರೀಪ್ರಕಾಶ್ ಜಸ್ವಾಲ್ ಸುದ್ದಿಗಾರರೊಂದಿಗೆ ಮಾತನಾಡಿ " ಈಗ ಬಹುತೇಕರು ಈಗ ಹೇಳುತ್ತಿದ್ದಾರೆ, ಅದೇ ರೀತಿ ನಾನು ಕೂಡ ಹೇಳುತ್ತಿದ್ದೇನೆ, ಪ್ರಿಯಾಂಕಾ ಗಾಂಧೀ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗ ಬೇಕು. ಅವರು ಗಾಂಧೀ ಕುಟುಂಬಕ್ಕೆ ಸೇರಿದವರಾಗಿದ್ದಾರೆ.ಅವರಿಗೆ ಪಕ್ಷದ ನೇತೃತ್ವವನ್ನು ವಹಿಸುವ ಎಲ್ಲ ಸಾಮರ್ಥ್ಯವಿದೆ 'ಎಂದು ಅವರು ಹೇಳಿದರು.

Trending News