ಮಿನಿಸ್ಟರ್, ನಿಮ್ಮ ಸರ್ಕಾರದ ಆರ್ಥಿಕ ನೀತಿಯಿಂದ ಉದ್ಯೋಗ ಇಲ್ಲದಂತಾಗಿದೆ-ಪ್ರಿಯಾಂಕಾ ಗಾಂಧಿ ತಿರುಗೇಟು

ದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆ ಇರುವ ಕಾರಣ ಹಿಂದುಳಿದಿದ್ದಾರೆ ಎಂದು ಹೇಳಿದ್ದ ಕೇಂದ್ರ ಕಾರ್ಮಿಕ ಸಚಿವ್ ಸಂತೋಷ್ ಗಂಗ್ವಾರ್ ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.

Last Updated : Sep 15, 2019, 08:04 PM IST
ಮಿನಿಸ್ಟರ್, ನಿಮ್ಮ ಸರ್ಕಾರದ ಆರ್ಥಿಕ ನೀತಿಯಿಂದ ಉದ್ಯೋಗ ಇಲ್ಲದಂತಾಗಿದೆ-ಪ್ರಿಯಾಂಕಾ ಗಾಂಧಿ ತಿರುಗೇಟು title=
file photo

ನವದೆಹಲಿ: ದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ ಉತ್ತರ ಭಾರತೀಯರಲ್ಲಿ ಸಾಮರ್ಥ್ಯದ ಕೊರತೆ ಇರುವ ಕಾರಣ ಹಿಂದುಳಿದಿದ್ದಾರೆ ಎಂದು ಹೇಳಿದ್ದ ಕೇಂದ್ರ ಕಾರ್ಮಿಕ ಸಚಿವ್ ಸಂತೋಷ್ ಗಂಗ್ವಾರ್ ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.

ಈ ಸಚಿವರ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ' ಮಿನಿಸ್ಟರ್, ನಿಮ್ಮ ಸರ್ಕಾರವು ಐದು ವರ್ಷಕ್ಕಿಂತಲೂ ಹಳೆಯದು. ನಿಮ್ಮ ಸರ್ಕಾರ ತಂದಂತಹ  ಆರ್ಥಿಕ ಹಿಂಜರಿತದಿಂದಾಗಿ ಅಲ್ಲಿದ್ದ ಉದ್ಯೋಗಗಳು ಕಳೆದುಹೋಗಿವೆ. ಯುವಕರು ಸರ್ಕಾರಕ್ಕೆ ಏನಾದರೂ ಮುಂದೆ ಒಳ್ಳೆಯ ದಾರಿ ತೋರಿಸಲು ನೋಡುತ್ತಿದ್ದಾರೆ...ಆದರೆ ನೀವು ಉತ್ತರ ಭಾರತೀಯರನ್ನು ಅವಮಾನಿಸುವ ಮೂಲಕ ತಪ್ಪಿಸಿಕೊಳ್ಳಲು ಬಯಸುತ್ತೀದ್ದಿರಿ. ಇದು ನಡೆಯುವುದಿಲ್ಲ ' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಹೇಳಿಕೆ ಆಕ್ರೋಶ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ 'ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಬದಲು, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಆರ್ಥಿಕ ಕುಸಿತ ಮತ್ತು ಇತರ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರು ಮಾಡಿದ ಅಪಹಾಸ್ಯದ ಹೇಳಿಕೆಗಳ ನಂತರ, ಅವರಲ್ಲಿ ಕೆಲವರು ಕೊರತೆ ಇದೆ ಎಂದು ಹೇಳಿದ್ದು ನಾಚಿಕೆಗೇಡಿನ ಸಂಗತಿ. ಇದಕ್ಕಾಗಿ ದೇಶಕ್ಕೆ ಕ್ಷಮೆಯಾಚಿಸಬೇಕು' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಶನಿವಾರ, ಉತ್ತರ ಪ್ರದೇಶದ ಬರೇಲಿಯ ತಮ್ಮ ಕ್ಷೇತ್ರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಶ್ರೀ ಗಂಗ್ವಾರ್, ಉದ್ಯೋಗಾವಕಾಶಗಳ ಕೊರತೆಯಿಲ್ಲ ಎಂದು ಒತ್ತಾಯಿಸಿದ್ದರು ಮತ್ತು ಉತ್ತರ ಭಾರತದಲ್ಲಿ ನೇಮಕಾತಿ ಮಾಡಿಕೊಳ್ಳುವ ಕಂಪನಿಗಳು ಅರ್ಹ ಅಭ್ಯರ್ಥಿಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಿದರು.

ಮೇ ತಿಂಗಳಲ್ಲಿ ಭಾರತದ ನಿರುದ್ಯೋಗ ದರವು 2017-18 ರಲ್ಲಿ 45 ವರ್ಷಗಳಲ್ಲೇ ಗರಿಷ್ಠ 6.1 ರಷ್ಟಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಜನವರಿಯಲ್ಲಿ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ಸೋರಿಕೆಯಾದ ಈ ಅಂಕಿ ಅಂಶವನ್ನು ಕೇಂದ್ರವು ಧೃಡಪಡಿಸಿತ್ತು. 

ಇನ್ನೊಂದೆಡೆಗೆ ಜೂನ್ ತ್ರೈಮಾಸಿಕದಲ್ಲಿ ಭಾರತದ ಬೆಳವಣಿಗೆಯ ದರವು ಶೇಕಡಾ 5 ಕ್ಕೆ ಇಳಿದಿದ್ದು, ಜನವರಿ-ಮಾರ್ಚ್ ಅವಧಿಯಲ್ಲಿ ಶೇ 5.8 ಕ್ಕೆ ಇಳಿದಿದ್ದು, 17 ವರ್ಷಗಳಲ್ಲಿ ಇದು ನಿಧಾನ ಎಂದು ತಜ್ಞರು ಹೇಳಿದ್ದಾರೆ. ಆಟೋಮೊಬೈಲ್‌ನಿಂದ ಗ್ರಾಹಕ ಸರಕುಗಳವರೆಗೆ ಹಲವಾರು ಕ್ಷೇತ್ರಗಳು ಮಾರಾಟದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

Trending News