ಬಿಜೆಪಿ ಪೋಸ್ಟರ್ ನಲ್ಲಿ 'ಮಹಿಷಾಸುರ' ಳಾಗಿ ಪ್ರಿಯಾಂಕಾ ಗಾಂಧಿ! ಕಾಂಗ್ರೆಸ್ ನಿಂದ ದೂರು

ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ,ಬಿಜೆಪಿಯ ಪ್ರಿಯಾಂಕಾ ಸಿಂಗ್ ರಾವತ್  ಬೆಂಬಲಿಗರು ಬರಾಬಂಕಿ ಜಿಲ್ಲೆಯಲ್ಲಿ ಪ್ರಿಯಾಂಕಾ ಗಾಂಧಿಯನ್ನು 'ಮಹಿಶಾಸುರ' ಅವತಾರದಲ್ಲಿ ಬಿಂಬಿಸಿದ ಪೋಸ್ಟರ್ ನ್ನು ಅಂಟಿಸಲಾಗಿದೆ.

Last Updated : Feb 4, 2019, 12:22 PM IST
ಬಿಜೆಪಿ ಪೋಸ್ಟರ್ ನಲ್ಲಿ 'ಮಹಿಷಾಸುರ' ಳಾಗಿ ಪ್ರಿಯಾಂಕಾ ಗಾಂಧಿ! ಕಾಂಗ್ರೆಸ್ ನಿಂದ ದೂರು  title=
photo:ANI

ಬಾರಾಬಂಕಿ: ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ,ಬಿಜೆಪಿಯ ಪ್ರಿಯಾಂಕಾ ಸಿಂಗ್ ರಾವತ್  ಬೆಂಬಲಿಗರು ಬರಾಬಂಕಿ ಜಿಲ್ಲೆಯಲ್ಲಿ ಪ್ರಿಯಾಂಕಾ ಗಾಂಧಿಯನ್ನು 'ಮಹಿಶಾಸುರ' ಅವತಾರದಲ್ಲಿ ಬಿಂಬಿಸಿದ ಪೋಸ್ಟರ್ ನ್ನು ಅಂಟಿಸಲಾಗಿದೆ.

ಅಚ್ಚರಿಯೆಂದರೆ ಬಿಜೆಪಿ ಪ್ರಿಯಾಂಕಾ ರಾವತ್ರನ್ನು ದುರ್ಗಾ ದೇವಿಯಂತೆ ಬಿಂಬಿಸಿ ಅಸುರನನ್ನು (ರಾಕ್ಷಸ) ಕೊಲ್ಲುವ ಹಾಗೆ ಬಿತ್ತರಿಸಲಾಗಿದೆ.ಈ ಪೋಸ್ಟರ್ ಬಗ್ಗೆ ಬಿಜೆಪಿಯ ಪ್ರಿಯಾಂಕಾ ರಾವತ್ ರನ್ನು ಪ್ರಶ್ನಿಸಿದಾಗ " ಇದು ನಿಮ್ಮಿಂದಲೇ ಈ ಸುದ್ದಿ ತಿಳಿದದ್ದು, ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

 ಇತ್ತೀಚೆಗೆ ಬಿಹಾರ್ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಮಹಿಷಾಸುರ' ಎಂದು ಬಿಂಬಿಸಿದ ಪೋಸ್ಟರ್ ಗಳ ವಿಚಾರವಾಗಿ ನಿರಾಕರಿಸಿದ ನಂತರ ಈ ಪೋಸ್ಟರ್ ಹೊರಹೊಮ್ಮಿದೆ.ಈಗ ಮಹಿಳಾ ಕಾಂಗ್ರೆಸ್ ಸೈಬರ್ ಪೋಲಿಸ್ ಗೆ ದೂರು ನೀಡಿ ಈ ಘಟನೆಯ ಹಿಂದಿರುವವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

 

Trending News