ಪ್ರಧಾನಿ ಮೋದಿ ಹೊಗಳಿದ ರಾಜಸ್ತಾನದ ರಾಜ್ಯಪಾಲರ ಮೇಲೆ ಕ್ರಮ ಜರುಗಿಸಲು ರಾಷ್ಟ್ರಪತಿ ಸೂಚನೆ

ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಬೀಸಿದ್ದ ರಾಜಸ್ತಾನದ ರಾಜ್ಯಪಾಲ್ ಕಲ್ಯಾಣ ಸಿಂಗ್ ರ ಮೇಲೆ ಈಗ ಶಿಸ್ತುಕ್ರಮ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Last Updated : Apr 4, 2019, 06:30 PM IST
ಪ್ರಧಾನಿ ಮೋದಿ ಹೊಗಳಿದ ರಾಜಸ್ತಾನದ ರಾಜ್ಯಪಾಲರ ಮೇಲೆ ಕ್ರಮ ಜರುಗಿಸಲು ರಾಷ್ಟ್ರಪತಿ ಸೂಚನೆ  title=
file photo

ನವದೆಹಲಿ: ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಬೀಸಿದ್ದ ರಾಜಸ್ತಾನದ ರಾಜ್ಯಪಾಲ್ ಕಲ್ಯಾಣ ಸಿಂಗ್ ರ ಮೇಲೆ ಈಗ ಶಿಸ್ತುಕ್ರಮ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯಪಾಲರೊಬ್ಬರು ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಚುನಾವಣಾ ನೀತಿ ಸಂಹಿತೆ ವೇಳೆಯಲ್ಲಿ ಪ್ರಧಾನಿ ಮೋದಿ ಪರ ಮಾತುಗಳನ್ನು ಆಡುವ ಮೂಲಕ ನಿಯಮವನ್ನು ಉಲ್ಲಂಘಿಸಿದ್ದರು.ಆ ಮೂಲಕ ಸಾಂವಿಧಾನಿಕ ರಾಜ್ಯಪಾಲರ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದರು. ನಂತರ ಇದರ ಬಗ್ಗೆ ಚುನಾವಣಾ ಆಯೋಗವು ಪರಿಶೀಲಿಸಿದಾಗ ರಾಜ್ಯಪಾಲರು ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ರಾಷ್ಟ್ರಪತಿಗೆ ಈ ಕುರಿತಾಗಿ ಶಿಸ್ತು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪತ್ರವನ್ನು ಬರೆದಿತ್ತು. ಈಗ ಇದಕ್ಕೆ ಸ್ಪಂಧಿಸಿರುವ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ರಾಜ್ಯಪಾಲ ಕಲ್ಯಾಣಸಿಂಗ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಗೃಹ ಸಚಿವಾಲಯಕ್ಕೆ ಪತ್ರವನ್ನು ಬರೆದಿದ್ದಾರೆ.

ಈಗ ಮೂಲಗಳು ಹೇಳುವಂತೆ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯಪಾಲರನ್ನು ಪದಚ್ಯುತಿಗೊಳಿಸುವ ವಿಚಾರವಾಗಿ ಮೋದಿ ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಿದ್ದಾರೆ ಎನ್ನಲಾಗಿದೆ.ಕಳೆದ ತಿಂಗಳು ಕಲ್ಯಾಣ ಸಿಂಗ್ ಅಲಿಗಡ್ ನಲ್ಲಿ  ದೇಶದ ಹಿತಕ್ಕಾಗಿ ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಹೇಳುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹೊತ್ತಿದ್ದರು.

Trending News