ನವದೆಹಲಿ : ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಬೆಂಬಲಿಸಿದ್ದಾರೆ. ಹಾಗೆ, ಕಾಂಗ್ರೆಸ್ ಹೈಕಮಾಂಡ್ಗೂ ಬೆಂಬಲ ಸೂಚಿಸುವಂತೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಬುಧವಾರ ರಾತ್ರಿ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಧ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ. ಅವರ ಟ್ವೀಟ್ ನಲ್ಲಿ, 'ಪಂಡಿತ್ ಮೋತಿಲಾಲ್ ನೆಹರೂ ಅವರಿಂದ ಹಿಡಿದು ಇಂದಿನವರೆಗೆ, ಕಾಂಗ್ರೆಸ್ ಯಾವಾಗಲೂ ಶೋಷಿತ, ವಂಚಿತ ಮತ್ತು ಬುಡಕಟ್ಟು ಜನಾಂಗದವರ ಜೊತೆಗೆ ನಿಂತಿದೆ, ರಾಷ್ಟ್ರಪತಿ ಚುನಾವಣೆಯಲ್ಲಿ ಬುಡಕಟ್ಟು ಮಹಿಳಾ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ವಿರೋಧಿಸುತ್ತದೆ. ನನ್ನ ದೃಷ್ಟಿಯಲ್ಲಿ ಇದು ಸೂಕ್ತವಲ್ಲ, ಪಕ್ಷದ ಹೈಕಮಾಂಡ್ ಇದನ್ನು ಮರುಪರಿಶೀಲಿಸಬೇಕು ಎಂದು ಬರೆದುಕೊಂಡಿದ್ದಾರೆ.
प.मोतीलाल नेहरु से लेकर आज तक कांग्रेस हमेशा “शोषित” वंचित और “आदिवासियों”
के साथ खड़ी रही है,राष्ट्रपति चुनाव में एक आदिवासी महिला उम्मीदवार द्रोपदी मुर्मू का विरोध करना मेरे “विचार” से बिलकुल उचित नहीं है,पार्टी हाई कमान को इस पर “पुनर्विचार”
करना चाहिये.— Acharya Pramod (@AcharyaPramodk) July 13, 2022
ಇದನ್ನೂ ಓದಿ : Viral Video: ಲುಲು ಮಾಲ್ನಲ್ಲಿ ನಮಾಜ್ ವಿಡಿಯೋ ವೈರಲ್, ಹಿಂದೂ ಸಂಘಟನೆಗಳ ಪ್ರಶ್ನೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು 10 ಜನಪಥ್ನಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ. ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಹೊರತಾಗಿ ಇನ್ನೂ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರಮೋದ್ ಕೃಷ್ಣಂ ಅವರ ಈ ಟ್ವೀಟ್ ಕಾಂಗ್ರೆಸ್ ಸಭೆಗೂ ಮುನ್ನ ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದೆಡೆ, ಯುಪಿಎಯ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬುಧವಾರ ಭೋಪಾಲ್ನಲ್ಲಿರುವ ಕಮಲ್ ನಾಥ್ ಅವರ ನಿವಾಸದಲ್ಲಿ ಸ್ವಾಗತಿಸಲಾಯಿತು. ಈ ಬಗ್ಗೆಯೂ ಆಚಾರ್ಯ ಪ್ರಮೋದ್ ಕೃಷ್ಣಂ ಟ್ವೀಟ್ ಮಾಡಿ "ಯೇ ನೌಬತ್ ಆ ಗಯಿ ಆಬ್.. ಕಿಸಿ 'ಕಾಂಗ್ರೆಸಿ' ಕೊ ಹಿ ಲಾರ್ವಾ ದೇತೆ" ಎಂದು ಬರೆದಿದ್ದಾರೆ.
ये “नौबत” आ गयी अब, किसी “कांग्रेसी”
को ही लड़ा देते. https://t.co/3hKzeax2Xv— Acharya Pramod (@AcharyaPramodk) July 13, 2022
ಇದಕ್ಕೂ ಮುನ್ನ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಇಂತಹ ಹಲವು ಹೇಳಿಕೆಗಳನ್ನು ನೀಡಿದ್ದು ಅದು ಕಾಂಗ್ರೆಸ್ಗಿಂತ ಸಂಪೂರ್ಣ ಭಿನ್ನವಾಗಿದೆ. ಜುಲೈ 12 ರಂದು ಅವರು ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಹೀಯಾಳಿಸಿದ್ದರು. ವಾಸ್ತವವಾಗಿ, ಯಶ್ವಂತ್ ಸಿನ್ಹಾ ಅವರು ರಾಷ್ಟಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ, ನಾನು ಸಂವಿಧಾನದ ರಕ್ಷಕನಾಗಿ ಕಾರ್ಯನಿರ್ವಹಿಸುತ್ತೇನೆ ಮತ್ತು ರಾಜ್ಯದಲ್ಲಿ ಚುನಾಯಿತ ಸರ್ಕಾರವನ್ನು ಉರುಳಿಸುವಂತಹ ಪ್ರಜಾಪ್ರಭುತ್ವವನ್ನು ಉಲ್ಲಂಘಿಸುವಂತಹ ಯಾವುದೇ ಕೆಲಸವನ್ನು ಮಾಡದಂತೆ ಸರ್ಕಾರವನ್ನು ತಡೆಯುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ : ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜೀಗೆ ಈ ಭಾಷೆ ಕಲಿಯಬೇಕಂತೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ