Pralhad Joshi : ರಾಹುಲ್ ಗಾಂಧಿಯನ್ನ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಈ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಲಖಿಂಪುರ ಹಿಂಸಾಚಾರದ ಕುರಿತು ಮುಂದೂಡಿಕೆ ನಿರ್ಣಯವನ್ನು ನೀಡಿದ್ದು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.

Written by - Channabasava A Kashinakunti | Last Updated : Dec 15, 2021, 01:07 PM IST
  • ಲಖೀಂಪುರ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ
  • ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಮಂಡಿಸಿದ ರಾಹುಲ್ ಗಾಂಧಿ
  • ರಾಹುಲ್ ಗಾಂಧಿ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ
Pralhad Joshi : ರಾಹುಲ್ ಗಾಂಧಿಯನ್ನ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ title=

ನವದೆಹಲಿ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ವಿಶೇಷ ತನಿಖಾ ತಂಡದ (SIT) ವರದಿ ಹೊರಬಿದ್ದ ಬೆನ್ನಲ್ಲೇ ರಾಜಕೀಯ ಕೆಸರೆಚಾಟ ಶುರುವಾಗಿದೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಈ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಲಖಿಂಪುರ ಹಿಂಸಾಚಾರದ ಕುರಿತು ಮುಂದೂಡಿಕೆ ನಿರ್ಣಯವನ್ನು ನೀಡಿದ್ದು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿಯನ್ನ ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಅವರು ರಾಹುಲ್ ಗಾಂಧಿಯವರ ಗಮನಕ್ಕೆ ತರಲು ಮತ್ತು ಲಿಖಿತ ಸೂಚನೆಗಳನ್ನು ನೀಡುವಷ್ಟು ಸುಧಾರಿಸಿದ್ದಾರೆ ಎಂದು ಹೇಳಿದರು. 'ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಯು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಕನಿಷ್ಠ ರಾಹುಲ್ ಗಾಂಧಿಯವರು ಲಿಖಿತ ಸೂಚನೆಗಳನ್ನು ನೀಡುವಷ್ಟು ಸುಧಾರಿಸಿದ್ದಾರೆ. ಈ ಹಿಂದೆ ಸಂಸತ್ತು ಕೂಡ ಅವರ ಮುಂದೆ ಏನೂ ಅಲ್ಲ, ಅವರು ನೋಟಿಸ್ ನೀಡಲಿಲ್ಲ. ಕನಿಷ್ಠ ನೋಟಿಸ್ ಕೊಡಲು ಆರಂಭಿಸಿದ್ದು ಒಳಿತು.

ಇದನ್ನೂ ಓದಿ : ತಪ್ಪಿದ ಭಾರೀ ಅನಾಹುತ, 2 ಸೆಕೆಂಡ್‌ ತಡವಾಗುತ್ತಿದ್ದರೂ ಸುಟ್ಟು ಕರಕಲಾಗುತ್ತಿದ್ದ ವರ, ಬೆಚ್ಚಿ ಬೀಳಿಸುವ ವಿಡಿಯೋ

ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲ

ಲಖಿಂಪುರ ಖೇರಿ ಹಿಂಸಾಚಾರಕ್ಕೆ(Lakhimpur Violence) ಸಂಬಂಧಿಸಿದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವು ಮತ್ತು ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲವನ್ನು ಸೃಷ್ಟಿಸಿದರು, ನಂತರ ಉಭಯ ಸದನಗಳ ಕಲಾಪವನ್ನು ಮುಂದೂಡಲಾಯಿತು. ಪ್ರತಿಪಕ್ಷಗಳು ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿ ಸದನದ ಬಾವಿಗಿಳಿದು ಘೋಷಣೆಗಳನ್ನು ಮತ್ತು ಫಲಕಗಳನ್ನು ಎತ್ತಿ ಹಿಡಿದು ಹೋರಾಟಕ್ಕೆ ಮುಂದಾದರು. ಅದೇ ಸಮಯದಲ್ಲಿ, ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿದವು, ನಂತರ ರಾಜ್ಯಸಭೆಯ ಕಲಾಪವನ್ನೂ ಮುಂದೂಡಬೇಕಾಯಿತು.

SIT ವರದಿಯಲ್ಲಿ ಮೂರು ಗಂಭೀರ ವಿಷಯಗಳನ್ನು ತಿಳಿಸಲಾಗಿದೆ

ಮೊದಲನೆಯದು - ವಾಹನಗಳಿಂದ ರೈತರನ್ನು ಪುಡಿಮಾಡುವುದು ಅಪಘಾತವಲ್ಲ.
ಎರಡನೆಯದಾಗಿ, ಅಂದು ರಸ್ತೆಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಉದ್ದೇಶಪೂರ್ವಕವಾಗಿ ವಾಹನಗಳನ್ನು ಅತಿವೇಗದಲ್ಲಿ ಓಡಿಸಲಾಗಿದೆ.
ಮೂರನೆಯ ವಿಷಯ- ಈ ದಾಳಿಯನ್ನು ಮೊದಲೇ ಯೋಜಿಸಲಾಗಿತ್ತು.

ಇದನ್ನೂ ಓದಿ : "Fundamental Rights": ಲೈಂಗಿಕ ಕಾರ್ಯಕರ್ತರಿಗೆ ಆಧಾರ್, ವೋಟರ್ ಐಡಿ ಬಗ್ಗೆ ಸುಪ್ರೀಂ ಮಹತ್ವದ ಆದೇಶ

ಇಡೀ ವಿಷಯ ಏನು?

ಈ ವರ್ಷದ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿ(Lakhimpur Kheri)ಯಲ್ಲಿ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತರು ಕಾರುಗಳಿಗೆ ತುತ್ತಾಗಿ ಸಾವನ್ನಪ್ಪಿದ್ದರೆ, ಕಾರಿನಲ್ಲಿದ್ದ ಮೂವರನ್ನು ಸ್ಥಳದಲ್ಲಿದ್ದ ಗುಂಪೊಂದು ಥಳಿಸಿ ಕೊಂದಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News