ದುಬೈಗೆ ಅಕ್ರಮವಾಗಿ ಯುರೋ ಕಳುಹಿಸುತ್ತಿದ್ದ ವ್ಯಕ್ತಿ ಬಂಧನ

   

Last Updated : Jan 30, 2019, 05:24 PM IST
ದುಬೈಗೆ ಅಕ್ರಮವಾಗಿ ಯುರೋ ಕಳುಹಿಸುತ್ತಿದ್ದ ವ್ಯಕ್ತಿ ಬಂಧನ title=

ಮುಂಬೈ: ಇದುವರೆಗೂ ಚಿನ್ನ, ಬೆಳ್ಳಿ, ಗಾಂಜಾಗಳ ಕಳ್ಳಸಾಗಣೆ ಬಗ್ಗೆ ಕೇಳಿದ್ದೆವು. ಆದರೀಗ ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಯುರೋಪಿಯನ್ ಯೂನಿಯನ್'ನಲ್ಲಿ ಬಳಸುವ ಯುರೋ ಕರೆನ್ಸಿಯನ್ನು ವಿದೇಶಿಗರಿಂದ ಪಡೆದು ದುಬೈಗೆ ಅಕ್ರಮವಾಗಿ ಕಳುಹಿಸುತ್ತಿದ್ದ ಜಾಲದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಜಫರ್ ಅಬ್ಬಾಸ್ ಎಂಬಾತನನ್ನು ಬಂಧಿಸಿದ್ದಾರೆ.

ಈತ ವಿದೇಶಿಗರಿಂದ ಯುರೋ ಪಡೆದು ಭಾರತೀಯ ಕರೆನ್ಸಿ ರೂಪಾಯಿ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ವಿಚಾರಣೆ ಆರಂಭಿಸಿದ ಪೊಲೀಸರಿಗೆ ಆರೋಪಿ ಈಗಾಗಲೇ 30 ಸಾವಿರಕ್ಕೂ ಅಧಿಕ ಯುರೋ ಜಮಾ ಮಾಡಿದ್ದು, ದುಬೈಗೆ ಕಳುಹಿಸಲು ತಯಾರಿ ನಡೆಸುತ್ತಿದ್ದ ಎಂಬುದು ತಿಳಿದುಬಂದಿದೆ.

Trending News