80ರ ದಶಕದಲ್ಲಿ ಮೇಲ್,ಡಿಜಿಟಲ್ ಕ್ಯಾಮರಾ ಬಳಸಿದ್ದೆನೆಂದು ಹೇಳಿ ಟ್ರೋಲ್ ಗೆ ಒಳಗಾದ ಪ್ರಧಾನಿ ಮೋದಿ

ಖಾಸಗಿ ಚಾನಲ್ ಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿ 1987-88ರಲ್ಲಿ ಡಿಜಿಟಲ್ ಕ್ಯಾಮೆರಾ ಮೂಲಕ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರ ಫೋಟೋವೊಂದನ್ನು ತೆಗೆದು ಅದನ್ನು ಇ-ಮೇಲ್ ಮೂಲಕ ಕಳಿಸಿರುವುದಾಗಿ ಮೋದಿ ಹೇಳಿದ್ದಾರೆ.

Last Updated : May 13, 2019, 03:38 PM IST
80ರ ದಶಕದಲ್ಲಿ ಮೇಲ್,ಡಿಜಿಟಲ್ ಕ್ಯಾಮರಾ ಬಳಸಿದ್ದೆನೆಂದು ಹೇಳಿ ಟ್ರೋಲ್ ಗೆ ಒಳಗಾದ ಪ್ರಧಾನಿ ಮೋದಿ title=
file photo

ನವದೆಹಲಿ: ಖಾಸಗಿ ಚಾನಲ್ ಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿ 1987-88ರಲ್ಲಿ ಡಿಜಿಟಲ್ ಕ್ಯಾಮೆರಾ ಮೂಲಕ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರ ಫೋಟೋವೊಂದನ್ನು ತೆಗೆದು ಅದನ್ನು ಇ-ಮೇಲ್ ಮೂಲಕ ಕಳಿಸಿರುವುದಾಗಿ ಮೋದಿ ಹೇಳಿದ್ದಾರೆ.

ಆದರೆ ಈಗ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿ ಟ್ವಿಟ್ಟರ್ ಬಳಕೆದಾರರಿಗೆ ನಗೆ ಪಾಟಲಿಗೆ ಇಡಾಗಿದೆ.1986 ರಲ್ಲಿ ಶೈಕ್ಷಣಿಕ ಸಂಶೋಧನಾ ಜಾಲವು ಪ್ರಾರಂಭವಾದರೂ, ಭಾರತದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಅಂತರ್ಜಾಲ ಸೇವೆಯನ್ನು 14 ಆಗಸ್ಟ್ 1995 ರಂದು ರಾಜ್ಯ ಸ್ವಾಮ್ಯದ ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ (ವಿಎಸ್ಎನ್ಎಲ್) ಪ್ರಾರಂಭಿಸಿತು.ಅಲ್ಲದೆ, 1976 ರಲ್ಲಿ ಈಸ್ಟ್ಮನ್ ಕೊಡಾಕ್ನಲ್ಲಿ ಸ್ಟೀವನ್ ಸ್ಯಾಸ್ಸನ್ನಿಂದ ಮೊದಲ ಡಿಜಿಟಲ್ ಕ್ಯಾಮೆರಾವನ್ನು ನಿರ್ಮಿಸಲಾಯಿತು. ಇದನ್ನು ಮಿಲಿಟರಿ ಮತ್ತು ವೈಜ್ಞಾನಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು.

1980 ರ ದಶಕದ ಉತ್ತರಾರ್ಧದಲ್ಲಿ, ಡಿಜಿಟಲ್ ಕ್ಯಾಮೆರಾಗಳನ್ನು ಉತ್ಪಾದಿಸುವ ತಂತ್ರಜ್ಞಾನ ಅಸ್ತಿತ್ವದಲ್ಲಿತ್ತು. ಮೊದಲ ಬಾರಿಗೆ ಡಿಜಿಟಲ್ ಕ್ಯಾಮರಾ 1987 ರಲ್ಲಿ ಮಾರಾಟವಾಯಿತು. ಆದರೆ ಮಾರಾಟವನ್ನು ದೃಢೀಕರಿಸಲು ಯಾವುದೇ ದಾಖಲೆಗಳು ಇಲ್ಲ. ಮೊದಲ ಪೋರ್ಟಬಲ್ ಡಿಜಿಟಲ್ ಕ್ಯಾಮೆರಾವನ್ನು ಡಿಸೆಂಬರ್ 1989 ರಲ್ಲಿ ಜಪಾನ್ ನಲ್ಲಿ ಮಾರಾಟ ಮಾಡಲಾಯಿತು. ಆದಾಗ್ಯೂ, ಮೋದಿ ಅವರು ಆಗ ಡಿಜಿಟಲ್ ಕ್ಯಾಮರಾವನ್ನು  ಹೊಂದಿರುವುದಾಗಿ ಹೇಳಿರುವ ಹೇಳಿಕೆ ಈಗ ಚರ್ಚೆಯ ವಿಷಯವಾಗಿದೆ.ಸಾಮಾಜಿಕ ಮಾಧ್ಯಮಗಳಲ್ಲಿ ಈ ಹೇಳಿಕೆಗೆ ಪ್ರಧಾನಿ ಮೋದಿ ಹೇಳಿಕೆಯನ್ನು ಗೇಲಿ ಮಾಡಲಾಗಿದೆ. 

Trending News