ಇಂದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ದೆಹಲಿ-ವಾರಣಾಸಿ ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು 160 ಕಿ.ಮೀ. ವೇಗದಲ್ಲಿ ಚಲಿಸಲಿದ್ದು, ಶತಾಬ್ದಿ ರೈಲಿಗಿಂತಲೂ ಉತ್ತಮ ಸೌಲಭ್ಯಗಳನ್ನು ಒಳಗೊಂಡಿದೆ. 

Last Updated : Feb 15, 2019, 10:45 AM IST
ಇಂದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ title=

ನವದೆಹಲಿ: ಬಹುಕೋಟಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ಅಥವಾ ಟ್ರೈನ್ 18 ಸೆಮಿ ಹೈಸ್ಪೀಡ್ ರೈಲಿಗೆ ಶುಕ್ರವಾರ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ.

ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಮತ್ತು ರೈಲ್ವೆ ಮಂಡಳಿ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ದೆಹಲಿ-ವಾರಣಾಸಿ ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು 160 ಕಿ.ಮೀ. ವೇಗದಲ್ಲಿ ಚಲಿಸಲಿದ್ದು, ಶತಾಬ್ದಿ ರೈಲಿಗಿಂತಲೂ ಉತ್ತಮ ಸೌಲಭ್ಯಗಳನ್ನು ಒಳಗೊಂಡಿದೆ. ಹೀಗಾಗಿ ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿದೆ ಎನ್ನಲಾಗಿದೆ. 

ಈಗಾಗಲೇ ಈ ರೈಲಿನ ಟಿಕೆಟ್ ದರಗಳನ್ನು ಬಹಿರಂಗಪಡಿಸಲಾಗಿದ್ದು ದೆಹಲಿ ಹಾಗೂ ವಾರಣಾಸಿ ನಡುವಿನ ಎಸಿ ಚೇರ್‌ ಕಾರ್‌ ಟಿಕೆಟ್‌ ದರ 1,850 ರೂ. ಹಾಗೂ ಎಕ್ಸಿಕ್ಯುಟಿವ್‌ ಕ್ಲಾಸ್‌ ಟಿಕೆಟ್‌ ದರ 3,520 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಶುಲ್ಕದಲ್ಲಿ ಕ್ಯಾಟರಿಂಗ್‌ ಸೇವಾ ಶುಲ್ಕ ಸಹ ಸೇರಿದೆ. ರಿಟರ್ನ್ ಟಿಕೆಟ್ ದರ ಎಸಿ ಚೇರ್‌ ಕಾರ್‌ ಗೆ 1,795 ರೂ. ಮತ್ತು ಎಕ್ಸಿಕ್ಯುಟಿವ್‌ ಕಾರ್‌ ದರ 3,470 ರೂ. ನಿಗದಿಪಡಿಸಲಾಗಿದೆ. 

ಈ ರೈಲಿನಲ್ಲಿ ಪ್ರಯಾಣಿಸಲು ಸಾರ್ವಜನಿಕರು ಫೆ.17 ರಿಂದ ರೈಲ್ವೆ ಕೌಂಟರ್ ನಲ್ಲಿ ಹಾಗೂ ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.
 

Trending News