Mann Ki Baat : ಮಹಿಳೆಯರಿಂದಲೇ 'Oxygen Express' ನಿರ್ವಹಣೆ: ಹಾಡಿಹೊಗಳಿದ ಪಿಎಂ ಮೋದಿ!

ದೇಶದ ಮೂಲೆ ಮೂಲೆಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ತಲುಪಿಸುವ 'ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಟ್ರೈನ್' ಗಳನ್ನ ಮಹಿಳೆಯರೇ ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರನ್ನ ಹಾಡಿಹೊಗಳಿದ್ದಾರೆ.

Last Updated : May 30, 2021, 01:57 PM IST
  • ದೇಶದ ಮೂಲೆ ಮೂಲೆಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ತಲುಪಿಸುವ
  • 'ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಟ್ರೈನ್' ಗಳನ್ನ ಮಹಿಳೆಯರೇ ಮುನ್ನಡೆಸುತ್ತಿದ್ದಾರೆ
  • ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರನ್ನ ಹಾಡಿಹೊಗಳಿದ್ದಾರೆ
Mann Ki Baat : ಮಹಿಳೆಯರಿಂದಲೇ 'Oxygen Express' ನಿರ್ವಹಣೆ: ಹಾಡಿಹೊಗಳಿದ ಪಿಎಂ ಮೋದಿ! title=

ನವದೆಹಲಿ : ದೇಶದ ಮೂಲೆ ಮೂಲೆಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ತಲುಪಿಸುವ 'ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಟ್ರೈನ್' ಗಳನ್ನ ಮಹಿಳೆಯರೇ ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರನ್ನ ಹಾಡಿಹೊಗಳಿದ್ದಾರೆ.

ಇಂದು ದೇಶವನ್ನ ಉದ್ದೇಶಿಸಿ 'ಮನ್‌ ಕಿ ಬಾತ್‌'(Mann Ki Baat)ನಲ್ಲಿ ಮಾತನಾಡಿದ ಪಿಎಂ ಮೋದಿ, ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಟ್ರೈನ್ ಗಳನ್ನ ಸಂಪೂರ್ಣವಾಗಿ ಮಹಿಳೆಯರೇ ನಿಭಾಯಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಮಹಿಳೆಗೂ ಇದು ಹೆಮ್ಮೆಯ ವಿಚಾರ. ರಾಷ್ಟ್ರದ ಎಲ್ಲ ತಾಯಂದಿರು, ಸೋದರಿಯರು ಸಂತೋಷ ಪಡುವಂತ ವಿಷಯ. ಕೇವಲ ಮಹಿಳೆಯರಿಗೆ ಮಾತ್ರವಲ್ಲ ಭಾರತದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.

ಇದನ್ನೂ ಓದಿ : ಹರಿಯಾಣದಲ್ಲಿ ಜೂನ್ 7ರವರೆಗೆ ಲಾಕ್ ಡೌನ್ ವಿಸ್ತರಣೆ; odd -even ಮಾದರಿಯಲ್ಲಿ ಅಂಗಡಿ ತೆರೆಯಲು ಅವಕಾಶ

ದೇಶದಲ್ಲೆಡೆ ಆಕ್ಸಿಜನ್ ಕೊರತೆ(Oxygen Short) ಎದುರಾದಾಗ ರಸ್ತೆ ಮೂಲಕ ಸಾಗುವ ಆಕ್ಸಿಜನ್‌ ಟ್ಯಾಂಕರ್‌ಗಳಿಂತ ಅಧಿಕ ವೇಗವಾಗಿ ಮತ್ತು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಕ್ಸಿಜನ್ ಅನ್ನು ದೇಶದ ಮೂಲೆ ಮೂಲೆಗೆ ತಲುಪಿಸುವಲ್ಲಿ ಭಾರತೀಯ ರೈಲ್ವೆ ಸಹಕರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಜೂನ್ 25ರೊಳಗೆ ಈ ಕೆಲಸ ಮಾಡಿದರೆ 5 ಲಕ್ಷ ರೂ. ಗೆಲ್ಲುವ ಅವಕಾಶ ; ಕೇಂದ್ರ ಸರ್ಕಾರದಿಂದ ಹೀಗೊಂದು ಚಾಲೆಂಜ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News