Sudarshan Setu: ಗುಜರಾತ್‌ನಲ್ಲಿ ಪ್ರಧಾನಿ ಮೊದಿಯಿಂದ ಸುದರ್ಶನ್‌ ಸೇತುವೆ ಉದ್ಘಾಟನೆ!

Sudarshan Setu Inauguration: ಪ್ರಧಾನ ಮಂತ್ರಿ ನರೇಂದ್ರ ಮೋದಿ  ಫೆಬ್ರವರಿ 25 2024 ಭಾನುವಾರದಂದು ಓಖಾ ಮುಖ್ಯ ಭೂಭಾಗದಿಂದ ಬೇಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುವ 'ಸುದರ್ಶನ ಸೇತು' ಸೇತುವೆಯನ್ನು ಉದ್ಘಾಟನೆ ಮಾಡಿದರು. ಇದರ ಕುರಿತು ಮಾಹಿತಿ ಇಲಿದೆ.   

Written by - Zee Kannada News Desk | Last Updated : Feb 25, 2024, 12:20 PM IST
  • 'ಸುದರ್ಶನ ಸೇತು' 2.5 ಕಿಮೀ ಕೇಬಲ್ ತಂಗುವ ಸೇತುವೆಯಾಗಿದ್ದು, ಇದು ಭಾರತದಲ್ಲೇ ಅತಿ ಉದ್ದವಾದ ಸೇತುವೆಯಗಿದೆ.
  • ಬೇಟ್ ದ್ವಾರಕಾದಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ್ ದೇವಸ್ತಾನವಿದೆ. ಅಲ್ಲಿಯ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಹಗಲಿನಲ್ಲಿ ಮಾತ್ರ ದೋಣಿಯಲ್ಲಿ ಪ್ರಯಾಣಿಸಬಹುದಾಗಿತ್ತು.
  • ಪ್ರಧಾನಿ ಮೋದಿ ದೇವಾಲಯಕ್ಕೆ ಭೇಟಿ ನೀಡುವ ಯೋಚನೆ ಮಾಡಿದ್ದು ಮತ್ತು ಮುಂಬರುವ ದಿನಗಳಲ್ಲಿ ಅಲ್ಲಿಯ ಜನರ ಜೊತೆಗೆ ಮಾತುಕಥೆ ನಡೆಸಲಿದ್ದಾರೆ.
Sudarshan Setu: ಗುಜರಾತ್‌ನಲ್ಲಿ ಪ್ರಧಾನಿ ಮೊದಿಯಿಂದ ಸುದರ್ಶನ್‌ ಸೇತುವೆ ಉದ್ಘಾಟನೆ! title=

PM Narendra Modi Inaugurates ʻSudarshan Setuʼ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವರು ಓಖಾ ಮುಖ್ಯ ಭೂಭಾಗದಿಂದ ಬೇಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುವ 'ಸುದರ್ಶನ ಸೇತು' ಸೇತುವೆಯನ್ನು ಫೆಬ್ರವರಿ 25 2024 ಭಾನುವಾರದಂದು ಉದ್ಘಾಟಿಸಿದರು . 

'ಸುದರ್ಶನ ಸೇತು'  2.5 ಕಿಮೀ ಕೇಬಲ್ ತಂಗುವ ಸೇತುವೆಯಾಗಿದ್ದು,  ಇದು ಭಾರತದಲ್ಲೇ ಅತಿ ಉದ್ದವಾದ ಸೇತುವೆಯಗಿದೆ. ಇದನ್ನು ಸರಿಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೇಟ್ ದ್ವಾರಕಾ ಓಖಾ ಪೋರ್ಟ್‌ ಸಮೀಪವಿರುವ ಒಂದು ದ್ವೀಪವಾಗಿದ್ದು, ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.  

ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನ ಕಬ್ಬು ರೈತರಿಗೆ ಪರಿಹಾರ..!ಎಫ್‌ಆರ್‌ಪಿ 25 ರಿಂದ 340 ರೂ.ಗೆ ಹೆಚ್ಚಳ..!

ಬೇಟ್ ದ್ವಾರಕಾದಲ್ಲಿ  ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ್ ದೇವಸ್ತಾನವಿದೆ.  ಅಲ್ಲಿಯ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಹಗಲಿನಲ್ಲಿ ಮಾತ್ರ ದೋಣಿಯಲ್ಲಿ ಪ್ರಯಾಣಿಸಬಹುದಾಗಿತ್ತು. ಆದರೆ ಇದೀಗ ಹೊಸ ಸೇತುವೆಯ ನಿರ್ಮಾಣದ ನಂತರ ಸದಾ ಸಂಚರಿಸಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಧಾನಿ ಮೋದಿ ದೇವಾಲಯಕ್ಕೆ ಭೇಟಿ ನೀಡುವ ಯೋಚನೆ ಮಾಡಿದ್ದು ಮತ್ತು ಮುಂಬರುವ ದಿನಗಳಲ್ಲಿ ಅಲ್ಲಿಯ ಜನರ ಜೊತೆಗೆ ಮಾತುಕಥೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 2017 ರಲ್ಲಿ ಸೇತುವೆಗೆ ಅಡಿಪಾಯ ಹಾಕಿದರು. ಓಖಾ-ಬೇಟ್ ದ್ವಾರಕಾ ಸಿಗ್ನೇಚರ್ ಸೇತುವೆಯು ಪ್ರವಾಸಿ ಆಕರ್ಷಣೆಯ ಸ್ಥಳವಾಗಿ ಕಾರ್ಯನಿರ್ವಹಿಸುಲಿದೆ.

ಇದನ್ನೂ ಓದಿ: ವರ್ಷದಲ್ಲಿ ಕೇರಳಕ್ಕೆ ಮೂರನೇ ಭೇಟಿ : ಫೆ.27ರಂದು ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ

'ಸಿಗ್ನೇಚರ್ ಸೇತುವೆ' ಎಂದು ಕರೆಯಲ್ಪಡುವ ಈ ಸೇತುವೆಯನ್ನು  'ಸುದರ್ಶನ ಸೇತು' ಅಥವಾ ಸುದರ್ಶನ ಸೇತುವೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಜಿಟಿ ಪಾಂಡ್ಯ ಸುದ್ದಿ ತಿಳಿಸಿದರು. ಈ ಸೇತುವೆಯು ಭಗವದ್ಗೀತೆಯ ಶ್ಲೋಕಗಳು ಮತ್ತು ಭಗವಾನ್ ಕೃಷ್ಣನ ಚಿತ್ರಣಗಳಿಂದ ಅಲಂಕರಿಸಲ್ಪಟ್ಟ ಪಾದಚಾರಿ ಮಾರ್ಗವನ್ನು ಒಳಗೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News