PM Modi Big Announcement: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ಪರಿಹಾರ ಧನ

PM Modi Big Announcement: ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾದಿಂದ (Coronavirus) ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ (Free Education)ನೀಡುವುದರ ಜೊತೆಗೆ ಅವರಿಗೆ 23 ವರ್ಷ ತುಂಬಿದ ಬಳಿಕ 10 ಲಕ್ಷ ಪರಿಹಾರ ಧನ (10 Lakh Compensation) ನೀಡುವುದಾಗಿ ಘೋಷಿಸಿದ್ದಾರೆ. PM Cares For Children ನಿಧಿಯಿಂದ ವೆಚ್ಚ ಮಾಡಲಾಗುವುದು ಎಂದು ಹೇಳಿದ್ದಾರೆ.

Written by - Nitin Tabib | Last Updated : May 29, 2021, 09:12 PM IST
  • ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಪ್ರಧಾನಿ ಮೋದಿಯಿಂದ ದೊಡ್ಡ ಘೋಷಣೆ.
  • ಉಚಿತ ಶಿಕ್ಷಣ, ಉಚಿತ ಆರೋಗ್ಯ ವಿಮೆ ಜೊತೆಗೆ ಶಿಕ್ಷಣ ಸಾಲದ ಬಡ್ಡಿ ಪಾವತಿ.
  • 23 ವರ್ಷದ ಬಳಿಕ 10 ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ.
PM Modi Big Announcement: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ಪರಿಹಾರ ಧನ title=
PM Modi Big Announcement (File Photo)

ನವದೆಹಲಿ: PM Modi Big Announcement ಕೊರೊನಾ ಮಹಾಮಾರಿಯ (Corona Pandemic) ಕಾರಣ ಅನಾಥರಾಗಿರುವ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Modi), 'ಕೊರೊನಾದಲ್ಲಿ (Covid-19) ತಮ್ಮ ತಾಯಿ-ತಂದೆಯರನ್ನು ಕಳೆದುಕೊಂಡ ಎಲ್ಲ ಮಕ್ಕಳಿಗೆ 'PM Cares For Children' ಯೋಜನೆಯ ಅಡಿ ನೆರವು ನೀಡಲಾಗುವುದು. ಈ ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ ಮಾಸಿಕ ಸ್ಟೈಪೆಂಡ್  (Monthly Stipend)  ಹಾಗೂ 23 ವರ್ಷ ತುಂಬಿದ ಬಳಿಕ ಪಿಎಂ ಕೆಯರ್ಸ್ ನಿಧಿಯಿಂದ 10 ಲಕ್ಷ ಫಂಡ್ ಸಿಗಲಿದೆ' ಎಂದು ಹೇಳಿದ್ದಾರೆ. 

ಇದನ್ನೂ ಓದಿ- 5 ರೂ.ಗಳ ಈ ನೋಟು ನಿಮಗೆ ದೊಡ್ಡ ಆದಾಯ ನೀಡಲಿದೆ, ಇದರಲ್ಲಡಗಿವೆ ವಿಶೇಷ ಸಂಗತಿಗಳು

ಇದನ್ನೂ ಓದಿ-EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ

5 ಲಕ್ಷ ರೂ.ಗಳ ಉಚಿತ ವಿಮಾ ಹಾಗೂ ಬಡ್ಡಿರಹಿತ ಸಾಲ
ಈ ಕುರಿತು PMO ನೀಡಿರುವ ಮಾಹಿತಿ ಪ್ರಕಾರ, ಕೊರೊನಾ ಕಾರಣ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಅಷ್ಟೇ ಅಲ್ಲ ಉನ್ನತ ಶಿಕ್ಷಣ ಪಡೆಯಲು ಬಯಸುವ ಮಕ್ಕಳಿಗೆ ಅವರ ಪಡೆಯುವ ಸಾಲದಲ್ಲಿ (Education Loan) ಸರ್ಕಾರ ಅವರಿಗೆ ಸಹಾಯ ಮಾಡಲಿದೆ. ಹೇಳಿಕೆಯ ಪ್ರಕಾರ ಈ ಸಾಲದ ಬಡ್ಡಿಯನ್ನು ಪಿಎಂ ಕೆಯರ್ಸ್ ಫಂಡ್ ನಿಂದ ಪಾವತಿಸಲಾಗುವುದು ಎನ್ನಲಾಗಿದೆ. ಇದಲ್ಲದೆ ಆಯುಷ್ಮಾನ್ ಭಾರತ್ ಯೋಜನೆಯ  (Ayushman Bharat Yojana) ಅಡಿ 18 ವರ್ಷಗಳವರೆಗೆ ಮಕ್ಕಳಿಗೆ 5 ಲಕ್ಷ ರೂ.ಗಳ ವರೆಗೆ ಉಚಿತ ಆರೋಗ್ಯ ವಿಮಾ ಕೂಡ ಸಿಗಲಿದೆ ಹಾಗೂ ಪಿಎಂ ಕೆಯರ್ಸ್ ಫಂಡ್ (PM Cares Fund) ನಿಂದ ಅದರ ಪ್ರಿಮಿಯಂ ಪಾವತಿಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News