PM Kisan ಲಾಭಾರ್ಥಿಗಳಿಗೊಂದು ಸಂತಸದ ಸುದ್ದಿ!

PM Kisan Yojana ಅಡಿ ನೋಂದಾಯಿತ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು ಕಡಿಮೆ ಬಡ್ಡಿಗೆ ಸಾಲ ಪಡೆಯಬಹುದು. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Jan 29, 2022, 04:58 PM IST
  • PM Kisan ಲಾಭಾರ್ಥಿಗಳು ಇನ್ಮುಂದೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೂಡ ಪಡೆಯಬಹುದು.
  • ಈ ರೀತಿ ಸುಲಭವಾಗಿ ಅರ್ಜಿ ಸಲ್ಲಿಸಿ.
  • ಇದರಲ್ಲಿ ಬಡ್ಡಿ ದರವೂ ಕೂಡ ತುಂಬಾ ಕಡಿಮೆಯಾಗಿದೆ
PM Kisan ಲಾಭಾರ್ಥಿಗಳಿಗೊಂದು ಸಂತಸದ ಸುದ್ದಿ! title=
PM Kisan Latest Update (File Photo)

ನವದೆಹಲಿ: PM Kisan Latest Update  - ಪ್ರಧಾನಮಂತ್ರಿ (PM Modi) ಕಿಸಾನ್ ಯೋಜನೆಯ (PM Kisan Samman Nidhi) 10ನೇ ಕಂತನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರದ ಈ ಯೋಜನೆಯ ಲಾಭವನ್ನು ದೇಶದ ಕೋಟ್ಯಂತರ ರೈತರು ಪಡೆಯುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ, ಸರ್ಕಾರವು (Modi Govt) ಇದೀಗ  ರೈತರಿಗೆ ಕೈಗೆಟುಕುವ ದರದಲ್ಲಿ ಸಾಲವನ್ನು ಸಹ ನೀಡುತ್ತಿದೆ. ಹೌದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆಗಳು  ಆತ್ಮ ನಿರ್ಭರ್ ಭಾರತ್  ಯೋಜನೆಯಡಿಯಲ್ಲಿ ಲಿಂಕ್ ಆಗಿವೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ, ಸರ್ಕಾರವು ರೈತರಿಗೆ ಕೈಗೆಟುಕುವ ದರದಲ್ಲಿ ಸಾಲವನ್ನು ನೀಡುತ್ತಿದೆ.

ಇದನ್ನೂ  ಓದಿ-ಪರಿಕ್ಕರ್ ಪುತ್ರನಿಗೆ ಬಿಜೆಪಿ ಟಿಕೆಟ್ ನಿರಾಕರಣೆ, ಕೇಜ್ರಿವಾಲ್ ರಿಂದ ಆಪ್ ಗೆ ವೆಲ್ ಕಮ್ ಆಫರ್...!

ಬಡ್ಡಿ ದರ ತುಂಬಾ ಕಡಿಮೆ
ರೈತರು ಬಿತ್ತನೆ ಬೆಳೆಗಳಿಗೆ ಬ್ಯಾಂಕ್‌ಗಳಿಂದ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಈ ಸಾಲವನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಮಾತ್ರ ನೀಡಲಾಗುತ್ತದೆ. ಈ ಯೋಜನೆಯಡಿ ರೈತರಿಗೆ ಯಾವುದೇ ಖಾತರಿಯಿಲ್ಲದೆ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಇದೇ ವೇಳೆ 5-3 ಲಕ್ಷ ರೂಪಾಯಿಗಳ ಅಲ್ಪಾವಧಿ ಸಾಲಗಳನ್ನು ಕೇವಲ ಶೇ.4ರ ಬಡ್ಡಿದರದಲ್ಲಿ ನೀಡಲಾಗುತ್ತದೆ. ಈ ಸಾಲಕ್ಕೆ ಸರಕಾರ ಶೇ.2ರಷ್ಟು ಸಹಾಯಧನ ನೀಡುತ್ತದೆ. ಅಷ್ಟೇ ಅಲ್ಲ ರೈತರು ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ ಶೇ.3 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಈ ರೀತಿಯಾಗಿ, ಈ ಸಾಲವು ಕೇವಲ ಶೇ. 4 ರಷ್ಟು ಬಡ್ಡಿ ದರದಲ್ಲಿ ರೈತರಿಗೆ ಸಿಗುತ್ತದೆ. ಆದರೆ ಸಾಲದ ಮರುಪಾವತಿಯಲ್ಲಿ ವಿಳಂಬವಾದರೆ, ಈ ಸಾಲದ ಬಡ್ಡಿದರವು ಶೇಕಡಾ 7 ರಷ್ಟೇ ಮುಂದುವರೆಯಲಿದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ-viral video :ತನ್ನ ಮೇಲೆ ಸವಾರಿ ಮಾಡುವವರಿಗೆ ಹೆದ್ದಾರಿ ಮಧ್ಯೆಯೇ ಸರಿಯಾಗಿ ಪಾಠ ಕಲಿಸಿದ ಎತ್ತು

ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬೇಕು?
1. ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು, ಮೊದಲು ನೀವು ತಹಸಿಲ್‌ಗೆ ಹೋಗಿ ಲೆಖ್ಪಾಲ್ ಅವರನ್ನು ಭೇಟಿ ಮಾಡಬೇಕು.
2. ಅವರಿಂದ ನಿಮ್ಮ ಜಮೀನಿನ ಉತಾರ್ ಪಡೆಯಬೇಕು.
3. ಇದರ ನಂತರ, ಯಾವುದೇ ಬ್ಯಾಂಕ್‌ಗೆ ಹೋಗಿ ಮತ್ತು ವ್ಯವಸ್ಥಾಪಕರನ್ನು ಭೇಟಿ ಮಾಡಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಹೇಗೆ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಿ
4. ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಗ್ರಾಮೀಣ ಬ್ಯಾಂಕ್‌ನಿಂದ ತಯಾರಿಸಿದರೆ, ಸರ್ಕಾರದಿಂದ ಪ್ರೋತ್ಸಾಹ ಕೂಡ ಸಿಗುತ್ತದೆ, ಅದು ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಇಲ್ಲಿ ನೆನಪಿನಲ್ಲಿಡಿ.
5. ಇದರ ನಂತರ ಬ್ಯಾಂಕ್ ಮ್ಯಾನೇಜರ್ ನಿಮ್ಮನ್ನು ವಕೀಲರ ಬಳಿ ಕಳುಹಿಸಿ, ಅಗತ್ಯ ಮಾಹಿತಿಯನ್ನು ಪಡೆಯುತ್ತಾರೆ. 
6. ಇದರ ನಂತರ ನೀವು ಬ್ಯಾಂಕ್‌ಗೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಬೇಕು.
7. ಇದರೊಂದಿಗೆ ಕೆಲವು ದಾಖಲೆಗಳನ್ನು ಸಲ್ಲಿಸಬೇಕು. ಅದರ ನಂತರ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಸಿದ್ಧವಾಗುತ್ತದೆ.
8. ಇದರಲ್ಲಿ ಎಷ್ಟು ಸಾಲ ಸೌಲಭ್ಯ ದೊರೆಯುತ್ತದೆ, ಅದು ನಿಮ್ಮ ಬಳಿ ಎಷ್ಟು ಜಮೀನಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ-ಸಿಎಂ ಯೋಗಿ ಭದ್ರಕೋಟೆ ಗೋರಖ್ ಪುರ್ ಗೆ ಲಗ್ಗೆ ಇಡಲಿರುವ ಅಭ್ಯರ್ಥಿ ಯಾರು ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News