Holi 2021ರ ಬಳಿಕ 11 ಕೋಟಿ 74 ಲಕ್ಷ ರೈತರಿಗೆ ಸಿಗಲಿದೆ ಈ ಸಂತಸದ ಸುದ್ದಿ!

 PM Kisan Samman Nidhi - ಹೋಳಿ ಹಬ್ಬ ಮುಗಿದ ತಕ್ಷಣ 11.74 ಮಿಲಿಯನ್ ರೈತರಿಗೊಂದು ಸಂತಸದ ಸುದ್ದಿ  ಸಿಗಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಎಂಟನೇ ಕಂತಿಗಾಗಿ ಕಾಯುತ್ತಿರುವ ರೈತರ ಖಾತೆಗಳಲ್ಲಿ 2000 ರೂ. ಬರಲಿದೆ. 

Written by - Nitin Tabib | Last Updated : Mar 28, 2021, 11:28 AM IST
  • ಹೋಳಿ ಹಬ್ಬದ ಬಳಿಕ ರೈತರಿಗೆ ಸಿಗಲಿದೆ ಈ ಸಂತಸದ ಸುದ್ದಿ.
  • ಪಿಎಂ ಕಿಸಾನ್ ಸಮ್ಮಾನ್ ನಿಧಿಯ 8ನೆ ಕಂತು ರೈತರ ಖಾತೆಗೆ ವರ್ಗಾವಣೆಯಾಗುವ ಸಾಧ್ಯತೆ.
  • ದೇಶದ 11 ಕೋಟಿ 74 ಲಕ್ಷ ರೈತರ ಖಾತೆಗೆ ರೂ.2000 ನೇರ ವರ್ಗಾವಣೆಯಾಗಲಿದೆ.
Holi 2021ರ ಬಳಿಕ 11 ಕೋಟಿ 74 ಲಕ್ಷ ರೈತರಿಗೆ ಸಿಗಲಿದೆ ಈ ಸಂತಸದ ಸುದ್ದಿ! title=
PM Kisan Samman Nidhi 2021 (File Photo)

ನವದೆಹಲಿ: PM Kisan Samman Nidhi - ಹೋಳಿ ಹಬ್ಬ ಮುಗಿದ ತಕ್ಷಣ 11.74 ಮಿಲಿಯನ್ ರೈತರಿಗೊಂದು ಸಂತಸದ ಸುದ್ದಿ  ಸಿಗಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಎಂಟನೇ ಕಂತಿಗಾಗಿ ಕಾಯುತ್ತಿರುವ ರೈತರ ಖಾತೆಗಳಲ್ಲಿ 2000 ರೂ. ಬರಲಿದೆ. ಆದರೆ ಹಲವು  ನೋಂದಾಯಿತ ರೈತರ ಖಾತೆಗೆ ಇದುವರೆಗೆ ಯಾವುದೇ ಕಂತು ಬಂದಿಲ್ಲ. ಇನ್ನೊಂದೆಡೆ ಕೆಲವರ ಕಂತುಗಳನ್ನು ನಿಲ್ಲಿಸಲಾಗಿದೆ. ನಿಮಗೂ ನಿಮ್ಮ  ಮುಂದಿನ ಕಂತು ಬರಲಿದೆ ಅಥವಾ ಇಲ್ಲ ಎಂಬುದನ್ನು ತಿಳಿಯಲು ಮೊದಲು ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಮತ್ತು ನಿಮ್ಮ ಸ್ಟೇಟಸ್ ಚೆಕ್ ಮಾಡಲು ಮರೆಯದಿರಿ. ಮುಂದಿನ ಕೆಲವು ದಿನಗಳಲ್ಲಿ ಒಂದು ವೇಳೆ ನಿಮ್ಮ ಸ್ಟೇಟಸ್ ನಲ್ಲಿ ರಾಜ್ಯದಿಂದ Rft Signed by state ದೊರೆತಿದ್ದರೆ, ನಿಮ್ಮ ಖಾತೆಯಲ್ಲಿ ಏಪ್ರಿಲ್ ಕಂತು ಬರಲಿದೆ ಎಂದು ತಿಳಿಯಿರಿ.

ಇದನ್ನೂ ಓದಿ- PM-KISAN ಯೋಜನೆಯ ಪ್ರಮಾಣ ಹೆಚ್ಚಾಗುವುದೇ? ಸರ್ಕಾರ ಹೇಳಿದ್ದೇನು?

Rft Signed By State ಅರ್ಥ ಏನು?
ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿಯ (PM Kisan Samman Nidhi) ವೆಬ್ಸೈಟ್ (https://pmkisan.gov.in/) ಮೇಲೆ ಹೋಗಿ ನಿಮ್ಮ ಪೇಮೆಂಟ್ ಸ್ಟೇಟಸ್ ಪರಿಶೀಲಿಸಿದಾಗ ಒಂದು ವೇಳೆ ನಿಮಗೆ Rft Signed by State for 1st, 2nd, 3rd, 4th, 5th, 6th ಅಥವಾ 7th instalment ಬರೆದಿದ್ದು ಕಾಣಿಸಲಿದೆ. RFT ಎಂದರೆ  Request For Transfer ಎಂದರ್ಥ. ಇದರರ್ಥ ರಾಜ್ಯ ಸರ್ಕಾರದ ವತಿಯಿಂದ ಲಾಭಾರ್ಥಿಯ ದತ್ತಾಂಶ ಪರಿಶೀಲಿಸಲಾಗಿದೆ ಮತ್ತು ಅದು ಸರಿಯಾಗಿದೆ ಎಂದರ್ಥ. ಇದಾದ ಬಳಿಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಆ ಲಾಭಾರ್ಥಿಯ ಖಾತೆಗೆ ಹಣ ಹಾಕಲು ಕೋರುತ್ತದೆ.

ಇದನ್ನೂ ಓದಿ- Kisan Samman Nidhi : ಶೀಘ್ರವೇ ಸಿಗಲಿದೆ 8 ನೇ ಕಂತು, ನಿಮ್ಮ ಹೆಸರು ಲಿಸ್ಟ್ ನಲ್ಲಿದೆಯಾ ಚೆಕ್ ಮಾಡಿಕೊಳ್ಳಿ

ಎಂಟನೆ ಕಂತು ಯಾವಾಗ ಬರಲಿದೆ?
ಮೋದಿ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಫೆಬ್ರುವರಿ 24, 2019ಕ್ಕೆ ಜಾರಿಗೆ ತಂದಿದೆ ಹಾಗೂ ಈ ಯೋಜನೆ ಡಿಸೆಂಬರ್ 1, 2018ರಿಂದಲೇ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಅಡಿ ಕೇಂದ್ರ ಸರ್ಕಾರ ಸಣ್ಣ ಹಿಡುವಳಿದಾರರ ಖಾತೆಗೆ ವಾರ್ಷಿಕವಾಗಿ ಮೂರು ಕಂತುಗಳಲ್ಲಿ 6000 ರೂ, ಸಹಾಯ ಧನ ನೀಡುತ್ತದೆ. ಪ್ರತಿಯೊಂದು ಆರ್ಥಿಕ ವರ್ಷದಲ್ಲಿ ಏಪ್ರಿಲ್ 1 ರಿಂದ ಜುಲೈ 31ರವರೆಗೆ ಮೊದಲ ಕಂತು, ಆಗಸ್ಟ್ 1 ರಿಂದ ನವೆಂಬರ್ 30ರ ಮಧ್ಯೆ ಎರಡನೇ ಕಂತು ಹಾಗೂ ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ಮೂರನೇ ಕಂತು ಪಾವತಿಸಲಾಗುತದೆ. ಈ ಕಂತುಗಳನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಅಂದರೆ, ಈಗ 8ನೇ ಕಂತು ಅಂದರೆ ಏಪ್ರಿಲ್ ನಿಂದ ಜುಲೈ ವರೆಗಿನ ಕಂತು ಹೋಳಿ ಹಬ್ಬದ ಬಳಿಕ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ-PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News