ನವದೆಹಲಿ : ಇದೊಂದು ಇಂಟ್ರೆಸ್ಟಿಂಗ್ ಸ್ಟೋರಿ. ಸಿಟಿಗಳಲ್ಲಿ ಕಾರು ಕಳ್ಳರ ಸಂಖ್ಯೆ ವಿಪರೀತ. ಇವರು ಕಾರು ಕಳ್ಳರಲ್ಲ ಕಾರು ಡಕಾಯಿತರು. ನಿಮ್ಮನು ಹೆದರಿಸಿ ಬೆದರಿಸಿ ನಿಮ್ಮ ಕಾರನ್ನು ಕಿತ್ತುಕೊಂಡು ಡ್ರೈವ್ ಮಾಡಿಕೊಂಡು ಪರಾರಿಯಾಗುತ್ತಾರೆ. ಅಂಥಹ ನಾಲ್ವರು ಖತರ್ನಾಕ್ ಕಾರ್ ಜಾಕರ್ಸ್ ಗೆ (Car jackers) ಏಕೈಕ ವ್ಯಕ್ತಿಯೊಬ್ಬ ಪಾಠ ಕಲಿಸಿಬಿಟ್ಟಿದ್ದಾನೆ. ಜೀವನ ಪೂರ್ತಿ ಅವರು ಕಾರು ಡಕಾಯಿತಿ ಮಾಡಲೇ ಬಾರದು ಅಂಥಹ ಪಾಠ ಕಲಿಸಿ ಬಿಟ್ಟಿದ್ದಾನೆ. ಆ ಘಟನೆ ಸಿಸಿಟಿವಿಯೊಂದರಲ್ಲಿ (CCTV) ರೆಕಾರ್ಡ್ ಆಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗಾಗಲೆ 6 ದಶಲಕ್ಷ ಮಂದಿ ಆ ವಿಡಿಯೋ ವೀಕ್ಷಿಸಿದ್ದಾರೆ. ನೀವು ಆ ವಿಡಿಯೋ ನೋಡಲೇ ಬೇಕು. ಇಲ್ಲಿದೆ ಅದರ ಲಿಂಕ್.
ಆಗಿದ್ದೇನು..?
ಓರ್ವ ವ್ಯಕ್ತಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ (Petrol) ತುಂಬಿಸುತ್ತಿರುತ್ತಾನೆ. ಅಷ್ಟೊತ್ತಿಗೆ ವಿಪರೀತ ಸ್ಪೀಡ್ ನಲ್ಲಿ ಒಂದು ಬಿಳಿ ಬಣ್ಣದ ಕಾರು (Car) ಬಂದು ಪೆಟ್ರೋಲ್ ತುಂಬಿಸುತ್ತಿದ್ದ ಕಾರಿಗೆ ಅತಿ ಸನಿಹದಲ್ಲೇ ರುಂಯ್ಯನೇ ಬಂದು ಸ್ಟಾಪ್ ಆಗಿ ಬಿಡುತ್ತದೆ. ನಿಲ್ಲುತ್ತಿದ್ದಂತೆ ನಾಲ್ವರು ಆಗಂತುಕರು ಕಾರಿನಿಂದ ಹಾರಿ ನಾಲ್ಕು ದಿಕ್ಕನ್ನೂ ಸುತ್ತುವರಿಯಲು ಸಿದ್ದರಾಗುತ್ತಾರೆ. ಓರ್ವ ಆಗಂತುಕ ಪೆಟ್ರೋಲ್ ತುಂಬಿಸುತ್ತಿದ್ದ ಕಾರಿನ ಡ್ರೈವರ್ ಸೀಟಿನ ಬಳಿ ಧಾವಿಸುತ್ತಾನೆ. ಇವೆಲ್ಲಾ ಕ್ಷಣಾರ್ಧದಲ್ಲಿ ನಡೆದು ಹೋಗುತ್ತಿರಬೇಕಾದರೆ ಪೆಟ್ರೋಲ್ ತುಂಬಿಸುತ್ತಿದ್ದ ವ್ಯಕ್ತಿಗೆ ಅದ್ಭುತವಾದ ಐಡಿಯಾ ಫ್ಲಾಶ್ ಆಗಿ ಬಿಡುತ್ತದೆ.
ಇದನ್ನೂ ಓದಿ : ತಾಳಿ ಕಟ್ಟುವ ವೇಳೆ ಮದುವೆ ಮುರಿದ 2ರ ಮಗ್ಗಿ..! ವಿಚಿತ್ರ ಆದರೂ ಸತ್ಯ..!
ಈ ನಾಲ್ವರನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅರಿತ ಪೆಟ್ರೋಲ್ ಬಂಕ್(Petrol Bunk) ಹುಡುಗ ಮಾಡಿದ್ದು ಮಾತ್ರ ಅದ್ಭುತ ಕೆಲಸ. ಕಳ್ಳರು, ಡಕಾಯಿತರಿಗೆ ಜೀವನಪೂರ್ತಿ ಪಾಠವಾಗುವಂಥಹ ಕೆಲಸ. ಪೆಟ್ರೋಲ್ ತುಂಬಿಸುತ್ತಿದ್ದ ವ್ಯಕ್ತಿ ಡಕಾಯಿತರ ನಡೆಗೆ ಹೆದರಲಿಲ್ಲ, ಬೆದರಲಿಲ್ಲ. ಪೇಟ್ರೋಲ್ ತುಂಬಿಸುವ ಸ್ಪ್ರೇ ಎತ್ತಿಕೊಂಡವನೇ ಡಕಾಯಿತರ ಮೇಲೆ ಪೆಟ್ರೋಲ್ ಸ್ಪ್ರೇ ಮಾಡ್ತಾನೆ. ಏನು ಆಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ನಾಲ್ಕೂ ಜನ ಕಾರ್ ಜಾಕರ್ಸ್ (Car Jackers) ಪೆಟ್ರೋಲಿನಿಂದ ನೆನೆದು ಹೋಗಿದ್ದರು.
This is the BALLS. https://t.co/hur8XxjkXA
— John McNamara (@johnthemcnamara) April 30, 2021
ಅವರ ಕಾರಿನ ಮೇಲೂ ಬೇಕಾ ಬಿಟ್ಟಿ ಪೆಟ್ರೋಲ್ ಸ್ಪ್ರೇ ಮಾಡಿ ಬಿಡುತ್ತಾನೆ. ಕ್ಷಣಾರ್ಧದಲ್ಲಾದ ಘಟನೆಗೆ ಹೆದರಿ ಹೋದ ಕಾರ್ ಜಾಕರ್ಸ್ ಎದ್ದೇವೋ ಬಿದ್ದವೋ ಅಂತಾ ಕಾರ್ ಹತ್ತಿ ಓಡಿ ಬಿಡುತ್ತಾರೆ. ಅವರು ಓಡಿದ ಸ್ಟೈಲ್ ಹೇಗಿತ್ತು ಅಂದರೆ ಇನ್ನು ಮುಂದೆ ಅವರು ಖಂಡಿತಾ ಕಾರು ಡಕಾಯಿತಿಗೆ ಮುಂದಾಗಲಿಕ್ಕಿಲ್ಲ.
ಇದನ್ನೂ ಓದಿ : ಒಂದಲ್ಲ ಎರಡಲ್ಲ, ಒಂದೇ ಸಲ ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.