ತಮಿಳುನಾಡಿನ ಬಿಜೆಪಿ ನಾಯಕನ ಕಾರಿನಲ್ಲಿ ಪೆಟ್ರೋಲ್ ಬಾಂಬ್

ತಮಿಳುನಾಡಿನ ಕೊಯಮತ್ತೂರಿನಲ್ಲಿ, ಬಿಜೆಪಿ ನಾಯಕನ ಕಾರು ಮುಂಜಾನೆ ಪೆಟ್ರೋಲ್ ಬಾಂಬ್ ದಾಳಿಗೊಳಗಾಗಿದೆ. ಈ ಘಟನೆಯ ದೃಶ್ಯ ಸಿ.ಸಿ.ಟಿ.ವಿ ಯಲ್ಲಿ ಸೆರೆಯಾಗಿದೆ.

Last Updated : Mar 21, 2018, 11:05 AM IST
ತಮಿಳುನಾಡಿನ ಬಿಜೆಪಿ ನಾಯಕನ ಕಾರಿನಲ್ಲಿ ಪೆಟ್ರೋಲ್ ಬಾಂಬ್ title=
Pic: ANI

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ, ಬಿಜೆಪಿ ನಾಯಕನ ಕಾರು ಮುಂಜಾನೆ ಪೆಟ್ರೋಲ್ ಬಾಂಬ್ ದಾಳಿಗೊಳಗಾಗಿದೆ. ಪ್ರಸ್ತುತ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ. ಈ ಘಟನೆಯ ದೃಶ್ಯ ಸಿ.ಸಿ.ಟಿ.ವಿ ಯಲ್ಲಿ ಸೆರೆಯಾಗಿದೆ.

ಸುದ್ದಿ ಸಂಸ್ಥೆ ಎಎನ್ಐ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಬಿಜೆಪಿನ ಜಿಲ್ಲಾಧ್ಯಕ್ಷನ ಕಾರಿನಲ್ಲಿ ಪೆಟ್ರೋಲ್ ಬಾಂಬುಗಳನ್ನು ಎಸೆಯುವ ವ್ಯಕ್ತಿಯೊಬ್ಬನನ್ನು ಸೆರೆಹಿಡಿಯಲಾಗಿದೆ. ಆದರೆ ದೃಶ್ಯದಲ್ಲಿ ಆತನ ಮುಖ ಸ್ಪಷ್ಟವಾಗಿ ಗೋಚರಿಸುವುದಿಲ್ಲ.

ಮಾಹಿತಿಯನ್ನು ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Trending News