Viral News: ರೈಲು ಬರ್ತಿದ್ದಂತೆ ಪ್ರತ್ಯಕ್ಷ, ನಿಲ್ದಾಣ ತಲುಪುತ್ತಿದ್ದಂತೆ ಮಾಯ! ಈ ಸ್ಟೇಷನ್ 42 ವರ್ಷ ಮುಚ್ಚಲು ಈಕೆಯೆ ಕಾರಣ!

Haunted Railway Station in West Bengal: ಪಶ್ವಿಮ ಬಂಗಾಳದ ಬೇಗಂಕೋಡರ್ ಎಂಬಲ್ಲಿ ಒಂದು ರೈಲು ನಿಲ್ದಾಣವಿದೆ. ಇದನ್ನು ಸುಮಾರು 42 ವರ್ಷಗಳ ಹಿಂದೆಯೇ ಮುಚ್ಚಲಾಗಿತ್ತು. ಇದಕ್ಕೆ ಕಾರಣ ಅಲ್ಲಿ ಆಗಾಗ ಕಾಣಿಸಿಕೊಳ್ಳುವ ಒಂದು ಮಹಿಳೆಯ ಆತ್ಮ. ಆದರೆ ಆ ಬಳಿಕ ಅನೇಕ ತನಿಖೆಯನ್ನು ಕೈಗೊಂಡು, ಆಗಿನ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಅವರು ಪುನಾರಂಭ ಮಾಡಿದರು.

Written by - Bhavishya Shetty | Last Updated : Mar 19, 2023, 03:43 PM IST
    • ಭಾರತದಲ್ಲಿ ಕೆಲವು ರೈಲು ನಿಲ್ದಾಣಗಳಲ್ಲಿ ದೆವ್ವಗಳಿವೆ ಎಂದು ಹೇಳಲಾಗುತ್ತಿದೆ
    • ಪಶ್ಚಿಮ ಬಂಗಾಳದ ಬೇಗಂಕೋಡರ್ ರೈಲು ನಿಲ್ದಾಣದಲ್ಲಿರುವ ನಿಗೂಢತೆ ಭಯಾನಕವಾಗಿದೆ.
    • ಬೇಗಂಕೋಡರ್ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ.
Viral News: ರೈಲು ಬರ್ತಿದ್ದಂತೆ ಪ್ರತ್ಯಕ್ಷ, ನಿಲ್ದಾಣ ತಲುಪುತ್ತಿದ್ದಂತೆ ಮಾಯ! ಈ ಸ್ಟೇಷನ್ 42 ವರ್ಷ ಮುಚ್ಚಲು ಈಕೆಯೆ ಕಾರಣ! title=
begunkodor railway station

Haunted Railway Station in West Bengal: ಭಾರತೀಯ ರೈಲ್ವೆ ಬಗ್ಗೆ ಅನೇಕರಿಗೆ ತಿಳಿದೇ ಇದೆ. ಭಾರತದಲ್ಲಿ ಅತೀ ಹೆಚ್ಚು ಬಳಕೆ ಮಾಡುವ ಸಾರಿಗೆ ಎಂದರೆ ರೈಲ್ವೆ. ಜನಸಾಮಾನ್ಯರು ದೂರದೂರುಗಳಿಗೆ ಪ್ರಯಾಣ ಬೆಳಸಲು ಹೆಚ್ಚಾಗಿ ರೈಲುಗಳನ್ನೇ ಅನುಸರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತೀ ಸಣ್ಣ ಸಣ್ಣ ಹಳ್ಳಿಗಳಲ್ಲೂ ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಭಾರತೀಯ ರೈಲ್ವೆ ಇಲಾಖೆಯು ಈ ಸಂಬಂಧ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇಂದು ನಾವು ಹೇಳಹೊರಟಿರುವುದು ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣದ ಭಯಾನಕತೆ ಬಗ್ಗೆ.

ಭಾರತದಲ್ಲಿ ಕೆಲವು ರೈಲು ನಿಲ್ದಾಣಗಳಲ್ಲಿ ದೆವ್ವಗಳಿವೆ ಎಂದು ಹೇಳಲಾಗುತ್ತಿದೆಯಾದರು ಅದರ ಬಗ್ಗೆ ಮಾಹಿತಿಗಳು ಅಂತೆ ಕಂತೆ ಎಂಬಂತೆ ಉಳಿದಿದೆ. ಆದರೆ ಪಶ್ಚಿಮ ಬಂಗಾಳದ ಬೇಗಂಕೋಡರ್ ರೈಲು ನಿಲ್ದಾಣದಲ್ಲಿರುವ ನಿಗೂಢತೆ ಭಯಾನಕವಾಗಿದೆ.

ಇದನ್ನೂ ಓದಿ: Shocking: ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 10ರೂ. ನೀಡಿದ 60 ವರ್ಷದ ಅಜ್ಜ!

ಬೇಗಂಕೋಡರ್ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಇಲ್ಲಿ ರೈಲ್ವೇ ನಿಲ್ದಾಣವನ್ನು ಮೊದಲ ಬಾರಿಗೆ 1960 ರಲ್ಲಿ ಅಂದಿನ ಸಂತಾಲ್ಸ್, ಲಚನ್ ಕುಮಾರಿ ಮತ್ತು ಭಾರತೀಯ ರೈಲ್ವೇಸ್ ಜಂಟಿಯಾಗಿ ನಿರ್ಮಿಸಿದರು. ಆರು ವರ್ಷಗಳ ಕಾಲ, ಬೇಗಂಕೋಡು ರೈಲು ನಿಲ್ದಾಣದಲ್ಲಿ ಎಲ್ಲವೂ ಸಾಮಾನ್ಯವಾಗಿ ಮತ್ತು ಸುಗಮವಾಗಿ ನಡೆಯುತ್ತಿತ್ತು.

ಆದರೆ 1967 ರಲ್ಲಿ ಒಂದು ಘಟನೆ ವರದಿಯಾಯಿತು. ಆ ನಂತರ ಅವರು ಬೇಗಂಕೋಡರ್ ರೈಲು ನಿಲ್ದಾಣವನ್ನು 'ದೆವ್ವದ ಕೂಪ' ಎಂದು ಕರೆಯಲು ಪ್ರಾರಂಭಿಸಿದರು ಇಲ್ಲಿನ ಜನರು. ಗ್ರಾಮಸ್ಥರ ಪ್ರಕಾರ, ರೈಲ್ವೆ ಉದ್ಯೋಗಿಯೊಬ್ಬರು ಇಲ್ಲಿ ಮಹಿಳೆಯ ಪ್ರೇತವನ್ನು ಕಂಡಿದ್ದಾರೆ. ರೈಲು ಬರುತ್ತಿದ್ದಂತೆ ಅದರ ಜೊತೆಯೆ ಓಡೋಡಿ ಬರುವ ಆಕೆ, ನಿಲ್ದಾಣ ತಲುಪುತ್ತಿದ್ದಂತೆ ಮಾಯವಾಗುತ್ತಾಳಂತೆ.

ಮೊದಲು ಈ ಬಗ್ಗೆ ಆ ಉದ್ಯೋಗಿ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದ್ದಂತೆ ಅವರೆಲ್ಲರೂ ನಕ್ಕರಂತೆ. ಆದರೆ, ಕೆಲವು ದಿನಗಳ ನಂತರ ಆ ಸ್ಟೇಷನ್ ಮಾಸ್ಟರ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಕ್ವಾರ್ಟರ್ಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯ ಗ್ರಾಮಸ್ಥರು ನಿಲ್ದಾಣದಲ್ಲಿ ನಡೆದ ವಿದ್ಯಮಾನಗಳನ್ನು ನಂಬುವಂತೆ ಆಯಿತು.

ಈ ಘಟನೆಯ ನಂತರ, ಜನರು ನಿಲ್ದಾಣಕ್ಕೆ ಭೇಟಿ ನೀಡುವುದನ್ನೇ ನಿಲ್ಲಿಸಿದರು. ಸಂಜೆಯಾಗುತ್ತಿದ್ದಂತೆ ಆ ನಿಲ್ದಾಣದಲ್ಲಿ ಅನೇಕ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿತ್ತಂತೆ. ಅಲ್ಲಿಗೆ ಯಾವುದೇ ಸ್ಟೇಷನ್ ಮಾಸ್ಟರ್ ಬಂದರೂ ಸಹ ಅವರಿಗೆ ಈ ಆತ್ಮದಿಂದ ತೊಂದರೆಯಾಗುತ್ತಿತ್ತು. ಇದರಿಂದ ಇಲ್ಲಿ ಯಾರೂ ಕೆಲಸ ಮಾಡುತ್ತಿರಲಿಲ್ಲ. ಇದೇ ಕಾರಣದಿಂದ ಸುಮಾರು 42 ವರ್ಷಗಳ ಕಾಲ ಈ ನಿಲ್ದಾಣವನ್ನು ಮುಚ್ಚಲಾಯಿತು.

ನಂತರ 1990 ರ ದಶಕದಲ್ಲಿ ಗ್ರಾಮಸ್ಥರು ನಿಲ್ದಾಣವನ್ನು ಪುನರಾರಂಭಿಸುವಂತೆ ಒತ್ತಾಯಿಸಿದರು. ಸಮಿತಿ ರಚಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಆಗ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಅವರಿಗೂ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ಮನವಿ ಮಾಡಲಾಗಿತ್ತು. 42 ವರ್ಷಗಳ ನಂತರ ನಿಲ್ದಾಣವನ್ನು ಆಗಸ್ಟ್ 2009 ರಲ್ಲಿ ಪುನಃ ತೆರೆಯಲಾಯಿತು.

ಇದನ್ನೂ ಓದಿ: Viral Video: ಸ್ಟೈಲ್ ಆಗಿ ಬಂದು ಬಾಲಕಿಗೆ ಪ್ರಪೋಸ್ ಮಾಡಿದ ಹುಡುಗನಿಗೆ ಇಂಥಾ ಸ್ಥಿತಿ ಬರಬಾರದಿತ್ತು…! ವಿಡಿಯೋ ನೋಡಿ

ಆದರೆ ಅನೇಕ ವಿದೇಶಿ ತಜ್ಞರನ್ನು ಕರೆಸಿ ಮೊದಲು ನಿಲ್ದಾಣದಲ್ಲಿ ಅಂತಹ ಯಾವುದಾದರೂ ಅಗೋಚರ ಶಕ್ತಿ ಇದೆಯೇ ಎಂದು ಪರಿಶೀಲನೆ ನಡೆಸಲಾಯಿತು. ಈ ನಿಲ್ದಾಣದಲ್ಲಿ ಇಂದಿಗೂ “ಹಾಂಟೆಡ್ ಪ್ಲೇಸ್” ಎಂದು ಬರೆದಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ಸಂಜೆ 5 ಗಂಟೆ ಬಳಿಕ ಈ ನಿಲ್ದಾಣದಲ್ಲಿ ಯಾರೂ ಸಹ ಕಾಣಿಸಿಕೊಳ್ಳುವುದಿಲ್ಲ, ರೈಲು ಕೂಡ ನಿಲ್ಲುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News