PAN Card ಧಾರಕರಿಗೊಂದು ಎಚ್ಚರಿಕೆ...! ನಿಮ್ಮ ಈ ಒಂದು ತಪ್ಪ್ಪು ...₹10,000 ದಂಡಕ್ಕೆ ಕಾರಣ

ಆದಾಯ ತೆರಿಗೆ ಇಲಾಖೆ ನಿಮಗೆ ದೊಡ್ಡ ದಂಡ ವಿಧಿಸುವುದರ  ಜೊತೆಗೆ ನಿಮ್ಮ PAN ಕಾರ್ಡ್ ಕೂಡ ರದ್ದುಗೊಳಿಸಬಹುದು. PAN ಇಲ್ಲದೆ ಹೋದಲ್ಲಿ ನಿಮ್ಮ ಬ್ಯಾಂಕ್ ಖಾತೆ ಕೂಡ ಫ್ರೀಜ್ ಆಗಲಿದೆ.

Last Updated : Jun 12, 2020, 01:49 PM IST
PAN Card ಧಾರಕರಿಗೊಂದು ಎಚ್ಚರಿಕೆ...! ನಿಮ್ಮ ಈ ಒಂದು ತಪ್ಪ್ಪು ...₹10,000 ದಂಡಕ್ಕೆ ಕಾರಣ title=

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪರ್ಮನೆಂಟ್ ಅಕೌಂಟ್ ನಂಬರ್ ಅಂದರೆ PAN ಕಾರ್ಡ್ ಅತಿ ಹೆಚ್ಚು ಬಳಕೆಯಾಗುತ್ತಿದೆ. ಇಂತಹುಯ್ದರಲ್ಲಿ ನೀವು ಅದರ ಮಾಹಿತಿ ಅವಶ್ಯಕ ಎನೆಸಿದಲ್ಲಿ ಹಂಚಿಕೊಳ್ಳುತ್ತಿರಿ. ಆದರೆ, ಒಂದು ವೇಳೆ PAN ಕಾರ್ಡ್ ಮಾಹಿತಿ ನೀಡುವಾಗ ನೀವು ತಪ್ಪಾದ ಮಾಹಿತಿ ನೀಡಿದಲ್ಲಿ ನಿಮಗೆ ರೂ.10,000 ವರೆಗೆ ದಂಡ ಬೀಳುತ್ತದೆ. ಹೀಗಾಗಿ ನಿಮ್ಮ 10 ಅಂಕಗಳ PAN ಸಂಖ್ಯೆಯನ್ನು ಸರಿಯಾಗಿ ನಮೂದಿಸಿ. ಇದರಲ್ಲಾಗುವ ಸ್ಪೆಲ್ಲಿಂಗ್ ಮಿಸ್ಟೇಕ್ ಭಾರಿ ಪೆನಾಲ್ಟಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ PAN ಕಾರ್ಡ್ ಹೊಂದಿದ್ದರೂ ಕೂಡ ನಿಮಗೆ ದಂಡ ಬೀಳುತ್ತದೆ.

ಆದಾಯ ತೆರಿಗೆ ಇಲಾಖೆ ನಿಮಗೆ ದೊಡ್ಡ ದಂಡ ವಿಧಿಸುವುದರ ಜೊತೆಗೆ ನಿಮ್ಮ PAN ಕಾರ್ಡ್ ಕೂಡ ರದ್ದುಗೊಳಿಸಬಹುದು. PAN ಇಲ್ಲದೆ ಹೋದಲ್ಲಿ ನಿಮ್ಮ ಬ್ಯಾಂಕ್ ಖಾತೆ ಕೂಡ ಫ್ರೀಜ್ ಆಗಲಿದೆ.

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 272 ಬಿ ಅಡಿ ಆದಾಯ ತೆರಿಗೆ ಇಲಾಖೆ ತಪ್ಪು ಮಾಹಿತಿ ನೀಡಿದವರಿಗೆ 10 ಸಾವಿರ ರೂ. ವರೆಗೆ ದಂಡ ವಿಧಿಸುತ್ತದೆ, ಅದರಲ್ಲೂ ವಿಶೇಷವಾಗಿ ITR ಫಾರ್ಮ್ ಭರ್ತಿ ಮಾಡುವ ವೇಳೆ ಹಾಗೂ PAN ಕಾರ್ಡ್ ಮಾಹಿತಿ ನಮೂದಿಸುವ ಅಗತ್ಯವಿರುವ ಇತರೆ ಪ್ರಕರಣಗಳಲ್ಲಿ  ಈ ಪ್ರಾವಧಾನ ವಿಶೇಷವಾಗಿ ಮಾಡಲಾಗಿದೆ. 

2 PAN ಕಾರ್ಡ್ ಜಾರಿಯಾಗಲು ಕಾರಣವೇನು?
ಸಾಮಾನ್ಯವಾಗಿ ಜನರು PAN ಕಾರ್ಡ್ ಗೆ ಅಪ್ಲೈ ಮಾಡಿದಾಗ. ಅದು ಸೈಯಾದ ಸಮಯಕ್ಕೆ ಬಂದು ತಲುಪುವುದಿಲ್ಲ. ಇಂತಹುದರಲ್ಲಿ ಜನರು ಎರಡನೆ ಬಾರಿಗೆ ಅರ್ಜಿ ಸಲ್ಲಿಸುತ್ತಾರೆ. ಇದರಿಂದ ಅವರ ಹೆಸರ ಎಲೆ ವಿವಿಧ ಪ್ಯಾನ್ ಸಂಖ್ಯೆ ಇರುವ ಎರಡು ಪ್ಯಾನ್ ಕಾರ್ಡ್ ಗಳು ಬರುತ್ತವೆ. ಆದರೆ ಇದೊಂದು ಅಪರಾಧವಾಗಿದೆ.

10 ಸಾವಿರ ದಂಡ ವಿಧಿಸಲಾಗುತ್ತದೆ
ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 272/ಬಿ ಅಡಿ ಇದೊಂದು ದಂಡನೀಯ ಅಪರಾಧವಾಗಿದ್ದು, ನಿಮ್ಮ ಮೇಲೆ 10 ಸಾವಿರ ರೂ ದಂಡ ಕೂಡ ವಿಧಿಸಲಾಗುತ್ತದೆ. ಹೀಗಾಗಿ ಯಾರೊಬ್ಬರ ಬಳಿ ಎರಡು ಪ್ಯಾನ್ ಕಾರ್ಡ್ ಗಳು ಬಂದರೆ, ಅದರಲ್ಲಿ ಒಂದು ಕಾರ್ಡ್ ಅನ್ನು ಅವರು ಇಲಾಖೆಗೆ ಸಬ್ಮಿಟ್ ಮಾಡಬೇಕು.

ಪ್ಯಾನ್ ಕಾರ್ಡ್ ಅನ್ನು ಹೇಗೆ ಹಿಂದಿರುಗಿಸಬೇಕು?
ಎರಡನೆಯ ಪ್ಯಾನ್ ಕಾರ್ಡ್ ಅನ್ನು ಹಿಂದಿರುಗಿಸಲು ಆನ್ಲೈನ್ ಹಾಗೂ ಒಫ್ಲೈನ್ ಎರಡೂ ಪದ್ಧತಿಗಳನ್ನು ಅನುಸರಿಸಬಹುದು. ಪ್ಯಾನ್ ಸರೇಂಡರ್ ಒಂದು ಕಾಮನ್ ಅರ್ಜಿ ಇರುತ್ತದೆ. ಈ ಅರ್ಜಿಯನ್ನು ನೀವು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿಂದ ಡೌನ್ಲೋಡ್ ಮಾಡಬೇಕು. ವೆಬ್ ಸೈಟ್ ನಲ್ಲಿರುವ Request For New PAN Card Or/ And Changes Or Correction in PAN Data ಲಿಂಕ್ ಮೇಲೆ ಕ್ಲಿಕ್ಕಿಸಿ ಈ ಫಾರ್ಮ್ ಅನ್ನುಡೌನ್ಲೋಡ್ ಮಾಡಬೇಕು. ನಂತರ ಫಾರ್ಮ್ ಅನ್ನು ಭರ್ತಿ ಮಾಡಿ NSDL ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಎರಡನೇ ಪ್ಯಾನ್ ಕಾರ್ಡ್ ಸರೇಂಡರ್ ಮಾಡುವುದರ ಜೊತೆಗೆ ಎರಡನೇ ಪ್ಯಾನ್ ಕಾರ್ಡ್ ಕೂಡ ನೀಡಬೇಕು.ಇದನ್ನು ನೀವೋ ಆನ್ಲೈನ್ ನಲ್ಲಿಯೂ ಕೂಡ ಸಲ್ಲಿಸ್ಸಬಹುದು.

Trending News