Terrorist Arrested : ಪಾಕ್ ಭಯೋತ್ಪಾದಕನ ಹೆಡೆ ಮುರಿ ಕಟ್ಟಿದ ದೆಹಲಿ ಪೊಲೀಸರು : ಈ ಹಬ್ಬದ ಸಂದರ್ಭದಲ್ಲಿ ದಾಳಿಗೆ ಪ್ಲಾನ್

ಭೂಮಾಲೀಕ ಉಜೈಬ್, ಸುದ್ದಿ ಸಂಸ್ಥೆ ANI ಯೊಂದಿಗೆ ಈ ಕುರಿತು ಮಾತನಾಡಿದ, ತನ್ನ ತಂದೆ ಅಸ್ರಾಫ್‌ನಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Written by - Channabasava A Kashinakunti | Last Updated : Oct 13, 2021, 12:22 PM IST
  • ಪಾಕ್ ಭಯೋತ್ಪಾದಕನನ್ನು ಹೆಡೆ ಮುರಿ ಕಟ್ಟಿದ ದೆಹಲಿ ಪೊಲೀಸರು
  • ಭಯೋತ್ಪಾದಕ ಮೊಹಮ್ಮದ್ ಅಸ್ರಾಫ್ ಎಂಬುವವನನ್ನು ಬಂಧಿಸಿದ್ದಾರೆ
  • ಅಸ್ರಫ್ ಭಾರತದ ಸ್ಲೀಪರ್ ಸೆಲ್‌ನ ಮುಖ್ಯಸ್ಥನಾಗಿದ್ದು
Terrorist Arrested : ಪಾಕ್ ಭಯೋತ್ಪಾದಕನ ಹೆಡೆ ಮುರಿ ಕಟ್ಟಿದ ದೆಹಲಿ ಪೊಲೀಸರು : ಈ ಹಬ್ಬದ ಸಂದರ್ಭದಲ್ಲಿ ದಾಳಿಗೆ ಪ್ಲಾನ್ title=

ನವದೆಹಲಿ : ರಾಷ್ಟ್ರ ರಾಜಧಾನಿಯ ಲಕ್ಷ್ಮಿ ನಗರದಲ್ಲಿ ದೆಹಲಿ ಪೊಲೀಸರು ಪಾಕಿಸ್ತಾನದ ಭಯೋತ್ಪಾದಕನನ್ನು ಹೆಡೆ ಮುರಿ ಕಟ್ಟಿದ್ದಾರೆ.

ಭಯೋತ್ಪಾದಕ ಮೊಹಮ್ಮದ್ ಅಸ್ರಾಫ್(Mohammed Asraf) ಎಂಬುವವನನ್ನು ಬಂಧಿಸಿದ್ದಾರೆ. ಇವನು ಇಲ್ಲಿ ಮನೆ ಬಾಡಿಗೆ ಇದ್ದ ಮಾಲೀಕನೊಂದಿಗೆ ಆರು ತಿಂಗಳು ಸಂಪರ್ಕದಲ್ಲಿರಲಿಲ್ಲ ಎಂದು ಭೂಮಾಲೀಕ ಮಂಗಳವಾರ ಹೇಳಿದ್ದಾರೆ. ಭೂಮಾಲೀಕ ಉಜೈಬ್, ಸುದ್ದಿ ಸಂಸ್ಥೆ ANI ಯೊಂದಿಗೆ ಈ ಕುರಿತು ಮಾತನಾಡಿದ, ತನ್ನ ತಂದೆ ಅಸ್ರಾಫ್‌ನಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : PM GatiShakti Mastrplanಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಉಣ್ಣು ಮುಂದುವರೆದು ಮಾತಂದಿದ ಅವರು, ಇವನು ನಮ್ಮ ಮನೆಯಲ್ಲಿ 6 ತಿಂಗಳಿಂದ ವಾಸಿಸುತ್ತಿದ್ದರು. ನನ್ನ ತಂದೆ ಅವನ ಆಧಾರ್ ಕಾರ್ಡ್(Aadhar Card) ಅನ್ನು ದಾಖಲೆಗಾಗಿ ಮಾಡಿಸಿದ್ದರು. ಅವನು ಹೋದ ನಂತರ, ನಾವು ಅವನೊಂದಿಗೆ ಸಂಪರ್ಕದಲ್ಲಿರಲಿಲ್ಲ. ಅಗತ್ಯವಿದ್ದರೆ, ನಾವು ಪೊಲೀಸರೊಂದಿಗೆ ಸಹಕರಿಸುತ್ತೇವೆ ಎಂದು ಹೇಳಿದರೆ.

ದೆಹಲಿ ಪೊಲೀಸರು ಮಂಗಳವಾರ 40 ವರ್ಷದ ಅಸ್ರಫ್‌ನನ್ನು ಬಂಧಿಸಿದ್ದಾರೆ, ಇವನು ಹಬ್ಬದ ಸಮಯದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಪ್ಲಾನ್(Major Terror Attack) ಮಾಡಿದ್ದ ಎಂದು ವರದಿಯಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಲ್ ನಿವಾಸಿ ಪಾಕಿಸ್ತಾನಿ ಭಯೋತ್ಪಾದಕ ನಕಲಿ ಗುರುತಿನ ಚೀಟಿ ಅಡಿಯಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಭಾರತದಲ್ಲಿ ವಾಸಿಸುತ್ತಿದ್ದ ಮತ್ತು ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಎಂದು ಮಾಹಿತಿ ಲಭ್ಯವಾಗಿದೆ.

ಪ್ರಾಥಮಿಕ ವಿಚಾರಣೆಯ ಪ್ರಕಾರ, ಅಸ್ರಫ್ ಭಾರತದ ಸ್ಲೀಪರ್ ಸೆಲ್‌ನ ಮುಖ್ಯಸ್ಥನಾಗಿದ್ದು(Head of a sleeper cell in India), ಪಾಕಿಸ್ತಾನದ ಐಎಸ್‌ಐ ಆದೇಶಿಸಿದ ಮೇರೆಗೆ ಹಬ್ಬದ ಸಮಯದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇವನ ಬಳಿಯಿಂದ ಪೊಲೀಸರು(Delhi Police) ಒಂದು AK -47 ರೈಫಲ್, ಒಂದು ಹ್ಯಾಂಡ್ ಗ್ರೆನೇಡ್, AK -47 ರ 60 ಸುತ್ತಿನ ಎರಡು ಮ್ಯಾಗಜೀನ್ ಗಳು, ಎರಡು ಅತ್ಯಾಧುನಿಕ 50 ಸುತ್ತಿನ ಚೀನಾ ನಿರ್ಮಿತ ಪಿಸ್ತೂಲ್ ಗಳನ್ನು ಮತ್ತು ಒಂದು ಭಾರತೀಯ ಪಾಸ್ ಪೋರ್ಟ್ ಮತ್ತು ಇತರ ಭಾರತೀಯ ಐಡಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : EPF Contribution : ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ : ಡಬಲ್ ಆಗಲಿದೆ ನಿಮ್ಮ ಪಿಂಚಣಿ!

ಈ ಕುರಿತು ಮಾತನಾಡಿದ ಉಪ ಪೊಲೀಸ್ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹ(Pramod Singh Kushwaha), "ಅಶ್ರಫ್ ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಬಂದು ಮತ್ತು ಅಲಿ ಅಹ್ಮದ್ ನೂರಿಯಂತೆ ಒಂದು ದಶಕದಿಂದ ದೇಶದಲ್ಲಿನೆಲೆಸಿ ದ್ದಾನೆ. ಸೋಮವಾರ, ಅಶ್ರಫ್ ಲಕ್ಷ್ಮಿ ನಗರದ ಪ್ರದೇಶದಲ್ಲಿ ತಂಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಅದರ ನಂತರ, ಲಕ್ಷ್ಮಿ ನಗರ ಪ್ರದೇಶದಲ್ಲಿ ಒಂದು ತಂಡವನ್ನು ನಿಯೋಜಿಸಲಾಯಿತು ಮತ್ತು ಅದು ಅಶ್ರಫ್‌ಗೆ ಅನುಮೋದನೆ ನೀಡಿತು ”ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News