ಪ್ರಧಾನಿ ಮೋದಿಗಾಗಿ ತನ್ನ ವಾಯುಪ್ರದೇಶ ಮುಕ್ತಗೊಳಿಸಲು ಪಾಕ್ ನಕಾರ

ಪ್ರಧಾನಿ ಮೋದಿಯವರ ಸೌದಿ ಭೇಟಿಗಾಗಿ ವಾಯುಪ್ರದೇಶವನ್ನು ತೆರೆಯುವ ಭಾರತದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ.

Last Updated : Oct 27, 2019, 06:15 PM IST
ಪ್ರಧಾನಿ ಮೋದಿಗಾಗಿ ತನ್ನ ವಾಯುಪ್ರದೇಶ ಮುಕ್ತಗೊಳಿಸಲು ಪಾಕ್ ನಕಾರ  title=
file photo

ನವದೆಹಲಿ: ಪ್ರಧಾನಿ ಮೋದಿಯವರ ಸೌದಿ ಭೇಟಿಗಾಗಿ ವಾಯುಪ್ರದೇಶವನ್ನು ತೆರೆಯುವ ಭಾರತದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ.

ಎರಡು ತಿಂಗಳಲ್ಲಿ ಸತತ ಎರಡನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ವಿಮಾನಕ್ಕೆ ತನ್ನ ಮುಂಬರುವ ಸೌದಿ ಅರೇಬಿಯಾ ಭೇಟಿಗಾಗಿ ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡುವ ಭಾರತದ ಮನವಿಯನ್ನು ಪಾಕಿಸ್ತಾನ ಭಾನುವಾರ ತಿರಸ್ಕರಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರಿಗೆ ದೇಶದ ವಾಯುಪ್ರದೇಶವನ್ನು ಬಳಸಲು ಅವಕಾಶ ನೀಡದಿರಲು ಪಾಕಿಸ್ತಾನ ನಿರ್ಧರಿಸಿದೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಖುರೇಷಿ ತಮ್ಮ ಹೇಳಿಕೆಯಲ್ಲಿ, ಭಾರತೀಯ ಹೈಕಮಿಷನ್‌ಗೆ ಲಿಖಿತ ರೂಪದಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಮೋದಿಯವರು ಸೋಮವಾರದಂದು ಸೌದಿ ಅರೇಬಿಯಾಕ್ಕೆ ತೆರಳಿ ಅಂತಾರಾಷ್ಟ್ರೀಯ ವ್ಯಾಪಾರ ವೇದಿಕೆಯಲ್ಲಿ ಪಾಲ್ಗೊಳ್ಳಲು ಮತ್ತು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಉನ್ನತ ಸೌದಿ ನಾಯಕತ್ವದೊಂದಿಗೆ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ.ಪ್ರಧಾನಿ ಮೋದಿಯವರ ರಿಯಾದ್ ಭೇಟಿಯ ಸಮಯದಲ್ಲಿ, ಭಾರತ ಮತ್ತು ಸೌದಿ ಅರೇಬಿಯಾ ಭಾರತ-ಸೌದಿ ಅರೇಬಿಯಾ ಕಾರ್ಯತಂತ್ರದ ಸಹಭಾಗಿತ್ವ ಮಂಡಳಿಯನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಲಿವೆ. ಪರಿಷತ್ತಿನ ನೇತೃತ್ವವನ್ನು ಮೋದಿ ಮತ್ತು ಸೌದಿ ರಾಜಕುಮಾರ ವಹಿಸಲಿದ್ದಾರೆ.

ಇದಕ್ಕೂ ಮೊದಲು ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧಿವೇಶನಕ್ಕಾಗಿ ಹಾಜರಾಗಲು ಪ್ರಧಾನಿ ಮೋದಿಯವರ ಯುಎಸ್ ಭೇಟಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡುವ ಭಾರತದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು. 

Trending News