ಭಾರತದ ವಿರುದ್ಧ ಸಂಚು ರೂಪಿಸುತ್ತಿರುವ ಪಾಕಿಸ್ತಾನ, ಗುಪ್ತಚರ ಸಂಸ್ಥೆಗಳಿಂದ ಎಚ್ಚರಿಕೆ

ಭಯೋತ್ಪಾದಕರು ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ . 

Written by - Ranjitha R K | Last Updated : Jan 20, 2022, 05:41 PM IST
  • ಭಾರತದೊಳಗೆ ನುಸುಳಲು ಭಯೋತ್ಪಾದಕರ ಯತ್ನ
  • ಗುಪ್ತಚರ ಸಂಸ್ಥೆಗಳು ನೀಡಿವೆ ಎಚ್ಚರಿಕೆ
  • ಪಿಒಕೆಯಿಂದ ಕಾಶ್ಮೀರದೊಳಗೆ ನುಸುಳುವ ಅಪಾಯ
ಭಾರತದ ವಿರುದ್ಧ  ಸಂಚು ರೂಪಿಸುತ್ತಿರುವ ಪಾಕಿಸ್ತಾನ, ಗುಪ್ತಚರ ಸಂಸ್ಥೆಗಳಿಂದ  ಎಚ್ಚರಿಕೆ  title=
ಭಾರತದೊಳಗೆ ನುಸುಳಲು ಭಯೋತ್ಪಾದಕರ ಯತ್ನ (photo zee news)

ನವದೆಹಲಿ : ಭಾರತದೊಂದಿಗೆ ಸೌಹಾರ್ದದ ಬಯಕೆ ವ್ಯಕ್ತಪಡಿಸಿರುವ ಪಾಕಿಸ್ತಾನ (Pakistan) ತನ್ನ ನರಿ ಬುದ್ದಿ ಮಾತ್ರ ಬಿಡುತ್ತಿಲ್ಲ. ಗಣರಾಜ್ಯೋತ್ಸವಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಉಗ್ರರ ದಾಳಿ ನಡೆಸಲು ಪಾಕಿಸ್ತಾನ ದೊಡ್ಡ ಸಂಚು ರೂಪಿಸುತ್ತಿದೆ ಎಂದು ಗುಪ್ತಚರ ವರದಿ ಬಹಿರಂಗಪಡಿಸಿದೆ. 

ಭಯೋತ್ಪಾದಕರು ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ .  ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ (Lashkar-e-Taiba) ಲಾಂಚಿಂಗ್ ಕಮಾಂಡರ್ ಸೇರಿದಂತೆ 7 ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಭಯೋತ್ಪಾದಕ ಸಂಘಟನೆ ಅಲ್ ಬದರ್‌ನ ಐವರು ಉಗ್ರರು ಕೂಡ ಪಿಒಕೆಯಿಂದ ( PoK) ನುಸುಳಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ :   "ನಾನು ನನ್ನ ಮಕ್ಕಳ ಜೊತೆಗೆ ಬೆಳಗ್ಗೆ 3-4 ಗಂಟೆಗಳವರೆಗೆ ಕುಳಿತುಕೊಳ್ಳಬೇಕು"

ಗುಪ್ತಚರ ಸಂಸ್ಥೆಗಳು  ವರದಿ :
ಜೀ ನ್ಯೂಸ್‌ಗೆ ಬಂದಿರುವ ವಿಶೇಷ ಮಾಹಿತಿಯ ಪ್ರಕಾರ, ಗುಪ್ತಚರ ಸಂಸ್ಥೆಗಳು ಜನವರಿ 19 ರಂದು ನಡೆದ ಭಯೋತ್ಪಾದಕ ದಾಳಿಯ ಬಗ್ಗೆ 2 ವಿಭಿನ್ನ ಇನ್‌ಪುಟ್‌ಗಳನ್ನು ಹಂಚಿಕೊಂಡಿವೆ. ಏಜೆನ್ಸಿಯ ಇನ್‌ಪುಟ್‌ನ ಪ್ರಕಾರ, ಅಲ್ ಬದ್ರ್‌ನ 5 ಭಯೋತ್ಪಾದಕರು ಪಿಒಕೆಯ ಡಾಟೋಟ್‌ನ ನಿಕ್ಯಾಲ್ ಪ್ರದೇಶದಲ್ಲಿ ಗೈಡ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಭಯೋತ್ಪಾದಕರು ತಾರ್ಕುಂಡಿ (Tarkundi)ಅಥವಾ ಕಂಗಾಗ್ಲಿ (Kangagali) ಪ್ರದೇಶದಿಂದ ಕಾಶ್ಮೀರವನ್ನು ಪ್ರವೇಶಿಸುವ ಮೂಲಕ ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಪಿಒಕೆಯಿಂದ ಕಾಶ್ಮೀರದೊಳಗೆ ನುಸುಳುವ ಸಂಭವ : 
ಇತರ ಮಾಹಿತಿಗಳ ಪ್ರಕಾರ, ಲಷ್ಕರ್-ಎ-ತೊಯ್ಬಾದ (Lashkar-e-Taiba) 7 ಭಯೋತ್ಪಾದಕರು ಸಹ ಭಾರತದಲ್ಲಿ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರಲ್ಲಿ ಲಷ್ಕರ್‌ನ ಲಾಂಚಿಂಗ್ ಕಮಾಂಡರ್ ಕೂಡಾ ಸೇರಿದ್ದಾರೆ. ಈ ಭಯೋತ್ಪಾದಕರು ಪಿಒಕೆಯ  Kalu-de-Dheri ಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಈ ಭಯೋತ್ಪಾದಕರು (Terrorist) ಕಾಶ್ಮೀರದ ಕಿನಾರಿ ಪ್ರದೇಶಕ್ಕೆ ನುಸುಳಬಹುದು ಮತ್ತು ಪಿಒಕೆಯಿಂದ ದೊಡ್ಡ ದಾಳಿ ನಡೆಸಬಹುದು ಎಂದು ಅಂದಾಜಿಸಲಾಗಿದೆ. 

ಇದನ್ನೂ ಓದಿ :  ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲಿನ ನಿಷೇಧ ವಿಸ್ತರಣೆ

ಭದ್ರತೆಯನ್ನು ಹೆಚ್ಚಿಸಿದ ಭದ್ರತಾಪಡೆಗಳು : 
ಗಣರಾಜ್ಯೋತ್ಸವದ ಪರೇಡ್‌ನ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ,  ಪೊಲೀಸ್ ಪಡೆಗಳು ಮತ್ತು ಪ್ಯಾರಾ ಮಿಲಿಟರಿ ಪಡೆಗಳಿಗೆ  ಗುಪ್ತಚರ ಸಂಸ್ಥೆಗಳು ಸೂಚಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News