ಪದ್ಮಾವತ್ ವಿವಾದ: ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಮತ್ತೆ ವಿಚಾರಣೆಗೆ ಮುಂದಾದ ಸುಪ್ರಿಂಕೋರ್ಟ್

     

Last Updated : Jan 25, 2018, 06:46 PM IST
ಪದ್ಮಾವತ್ ವಿವಾದ: ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಮತ್ತೆ ವಿಚಾರಣೆಗೆ ಮುಂದಾದ ಸುಪ್ರಿಂಕೋರ್ಟ್  title=
Photo Courtesy:ANI

ನವದೆಹಲಿ : ಪದ್ಮಾವತ್' ಚಿತ್ರದ ಬಿಡುಗಡೆಯ ನಂತರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾದ ಗುಜರಾತ್, ರಾಜಸ್ತಾನ್,ಮಧ್ಯಪ್ರದೇಶ,ಮತ್ತು ಹರ್ಯಾಣ ರಾಜ್ಯಗಳ ವಿರುದ್ದ ವಿಚಾರಣೆ ನಡೆಸಲು ತಮ್ಮ ಅರ್ಜಿಗೆ  ಸುಪ್ರಿಂ ಕೋರ್ಟ್ ಒಪ್ಪಿಗೆ ನೀಡಿದೆ ಎಂದು ಕಾಂಗ್ರೆಸ್ ನಾಯಕ ತಹಶೀನ್ ಪೂನವಾಲ್ ಗುರುವಾರದಂದು ತಿಳಿಸಿದ್ದಾರೆ. 

ಈ ಕುರಿತಾಗಿ ಎಎನ್ಐಗೆ ಪ್ರತಿಕ್ರಯಿಸಿರುವ ಅವರು ಜನವರಿ 18 ರಂದು ಪದ್ಮಾವತ್ಗೆ ಸಂಬಂಧಿಸಿದಂತೆ ನೀಡಿದ ಕೋರ್ಟ್ ನ ಆದೇಶವನ್ನು ಈ ನಾಲ್ಕು ರಾಜ್ಯಗಳು ಪಾಲಿಸಿಲ್ಲ, ಅಲ್ಲದೆ ಕೋರ್ಟ್ ನ ನಿರ್ದೇಶನವಾದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಕೂಡಾ ಅವು ವಿಫಲವಾಗಿವೆ ಎಂದು ಪೂನವಾಲಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 

ಗುರಗ್ರಾಮದಲ್ಲಿ ಮಕ್ಕಳ ಶಾಲಾ ವಾಹನದ ಮೇಲೆ ನಡೆದ ಕಲ್ಲು ತೂರಾಟದ ಘಟನೆಯ ಕುರಿತು ಮಾತನಾಡಿದ ಅವರು, ಇಂತಹ ಘಟನೆಗಳನ್ನು ತಡೆಗಟ್ಟುವುದು ರಾಜ್ಯದ ಸರ್ಕಾರದ ಜವಾಬ್ದಾರಿಯಾಗಿದೆ ಆದರೆ ರಾಜ್ಯಗಳು ಇವುಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿವೆ ಎಂದು ತಿಳಿಸಿದರು.

ಪದ್ಮಾವತ್ ವಿಚಾರವಾಗಿ ಸುಪ್ರಿಂಕೋರ್ಟ್ ತನ್ನ ಅಂತಿಮ ತೀರ್ಪನ್ನು ನೀಡಿದೆ. ಅದರ ಆದೇಶವನ್ನು  ಪಾಲಿಸಬೇಕಾಗಿರುವುದು ರಾಜ್ಯಗಳ ಕರ್ತವ್ಯ ಎಂದು ತಿಳಿಸಿದರು. ಆದರೆ ಈ ನಾಲ್ಕು ರಾಜ್ಯಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ತಮ್ಮ ಅರ್ಜಿಯಲ್ಲಿ ದೂರಿದ್ದಾರೆ. 

ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತ್' ಚಿತ್ರ ಬಿಡುಗಡೆಯಾದ ನಂತರ  ರಜಪೂತ ಸಮುದಾಯಗಳ ನೇತೃತ್ವದಲ್ಲಿನ ಪ್ರತಿಭಟನೆಗಳು ದೇಶದ ಹಲವು ಭಾಗಗಳಲ್ಲಿ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿರುವ ನಿಟ್ಟಿನಲ್ಲಿ ಈ ಅರ್ಜಿಯನ್ನು ಮತ್ತೆ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. 

Trending News