Padma Awards 2022: Congress ಪಕ್ಷದ ಈ ಹಿರಿಯ ನಾಯಕನಿಗೆ BJP ನೇತೃತ್ವದ ಕೇಂದ್ರ ಸರ್ಕಾರದ ಪದ್ಮ ಭೂಷಣ, ಕಾರಣ ಗೊತ್ತಾ?

Padma Awards 2022 - ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ (Buddhadeb Bhattaacharjee), ನಟ ವಿಕ್ಟರ್ ಬ್ಯಾನರ್ಜಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇದಲ್ಲದೇ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (Kalyan Singh), ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ (CDS Bipin Rawat) ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

Written by - Nitin Tabib | Last Updated : Jan 25, 2022, 10:23 PM IST
  • ಗುಲಾಮ್ ನಬಿ ಆಜಾದ್ ಪದ್ಮ ಗೌರವ ನೀಡಿದ ಕೇಂದ್ರ ಸರ್ಕಾರ
  • ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ ಗುಲಾಮ್ ನಬಿ ಆಜಾದ್.
  • ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರೂ ಆಗಿದ್ದರು.
Padma Awards 2022: Congress ಪಕ್ಷದ ಈ ಹಿರಿಯ ನಾಯಕನಿಗೆ BJP ನೇತೃತ್ವದ ಕೇಂದ್ರ ಸರ್ಕಾರದ ಪದ್ಮ ಭೂಷಣ, ಕಾರಣ ಗೊತ್ತಾ? title=
Padma Awards 2022 (File Photo)

ನವದೆಹಲಿ: Padma Awards 2022 - ಗಣರಾಜ್ಯೋತ್ಸವದ (Republic Day 2022) ದಿನವಾದ ಇಂದು ಪದ್ಮ ಪ್ರಶಸ್ತಿಗಳನ್ನು (Padma Awardees List) ಪ್ರಕಟಿಸಲಾಗಿದೆ. ದೇಶದ ಗಣ್ಯ ವ್ಯಕ್ತಿಗಳಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ 128 ಮಂದಿಯ ಈ ಪಟ್ಟಿಯಲ್ಲಿ ಕಾಂಗ್ರೆಸ್ ನ (Congress) ಹಿರಿಯ ನಾಯಕರೊಬ್ಬರ ಹೆಸರೂ ಕೂಡ ಶಾಮೀಲಾಗಿದ್ದು ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಗುಲಾಂ ನಬಿ ಆಜಾದ್ ಅವರಿಗೆ ಪದ್ಮಭೂಷಣ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ವರಿಷ್ಠ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಅವರಿಗೆ ಪದ್ಮಭೂಷಣ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆಜಾದ್ ಅವರು ಕಳೆದ ಕೆಲವು ದಿನಗಳ ಕಾಲ ರಾಜ್ಯಸಭೆಯಲ್ಲಿ (Rajya Sabha) ವಿರೋಧ ಪಕ್ಷದ ನಾಯಕರಾಗಿದ್ದರು (Opposition Leader) ಮತ್ತು ಮೇಲ್ಮನೆಯಲ್ಲಿ ಸರ್ಕಾರದ ನೀತಿಗಳನ್ನು ಕಟುವಾಗಿ ಟೀಕಿಸುವಲ್ಲಿ ಹೆಸರುವಾಸಿಯಾಗಿದ್ದಾರೆ.

ರಾಜ್ಯಸಭೆಯ ತಮ್ಮ ವಿದಾಯ ಭಾಷಣದಲ್ಲಿ ಮಾತನಾಡಿದ್ದ ಆಜಾದ್ ಅವರು ಘಟನೆಯೊಂದನ್ನು ಪ್ರಸ್ತಾಪಿಸಿ  ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕುರಿತು ಹೊಗಳಿಕೆಯ ಮಾತುಗಳನ್ನು ಆಡಿದ್ದರು ಇದಾದ ನಂತರ ಪ್ರಧಾನಿ ಮೋದಿ ಕೂಡ ಆಜಾದ್ ಅವರನ್ನು ಪ್ರಶಂಸಿಸಿದ್ದರು. ಈ ಘಟನೆಯ ನಂತರ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಆದರೆ, ಆಜಾದ್ ಅವುಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ.

ಕಾಂಗ್ರೆಸ್ ಪಕ್ಷದ G-23 ಮುಖಂಡರಲ್ಲಿ ಆಜಾದ್ ಕೂಡ ಒಬ್ಬರು
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಿಟ್ಟಿಗೆದ್ದ ನಾಯಕರ ಪಟ್ಟಿಯಲ್ಲಿ ಆಜಾದ್ ಹೆಸರೂ ಕೂಡ ಶಾಮೀಲಾಗಿದೆ, ಈ ಮುಖಂಡರನ್ನು ಜಿ-23 ಗ್ರೂಪ್ ಎಂದು ಕರೆಯಲಾಗುತ್ತದೆ. ಈ 23 ನಾಯಕರು ಪಕ್ಷದ ಹೈ ಕಮಾಂಡ್ ಮೇಲೆಯೇ ಪ್ರಶ್ನೆಗಳನ್ನು ಎತ್ತಿದ್ದರು.

ಇದನ್ನೂ ಓದಿ-Omicron ರೂಪಾಂತರಿಯ ಹೊಸ ಲಕ್ಷಣ ಪತ್ತೆ, ಇದೀಗ ಶರೀರದ ಈ ಭಾಗದ ಮೇಲೆ ದಾಳಿ ಇಡುತ್ತಿದೆ ವೈರಸ್

ಅತೃಪ್ತ ಕಾಂಗ್ರೆಸ್ ನಾಯಕರು ಆಂತರಿಕ ಚುನಾವಣೆಗೆ ಪದೇ ಪದೇ ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ, ಹಲವು ಬಾರಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಕೆಲ ನಿಷ್ಠಾವಂತ ನಾಯಕರು ಈ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡಿರುವುದು  ಇಲ್ಲಿ ಗಮನಾರ್ಹ.

ಇದನ್ನೂ ಓದಿ-UP Election: ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಗೆ ನೀಡಿಲ್ಲವೆಂದ ಬಿಜೆಪಿ

ಆಜಾದ್‌ಗೂ ಮುನ್ನ ಕೇಂದ್ರದ ಮೋದಿ ಸರ್ಕಾರ 2019ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಮುಖರ್ಜಿ ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರು ಮತ್ತು ಹಲವಾರು ಬಾರಿ ಸಚಿವರಾಗಿದ್ದರು.

ಇದನ್ನೂ ಓದಿ-ಸಿದ್ದರಾಮಯ್ಯ ಹಾಗೂ ಡಿಕೆಶಿ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುತ್ತಿದ್ದಾರೆ: ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News