Padma Awards 2022: ಜ.ಬಿಪಿನ್ ರಾವತ್, ಕಲ್ಯಾಣ್ ಸಿಂಗ್ ಗೆ ಮರಣೋತ್ತರ ಪದ್ಮ ವಿಭೂಷಣ, ಗುಲಾಮ್ ನಬಿ ಆಜಾದ್ ಗೆ ಪದ್ಮ ಭೂಷಣ

Padma Awards 2022: ಕೇಂದ್ರ ಸರ್ಕಾರ (Central Government) 2022ನೇ ಸಾಲಿನ ಪದ್ಮ ಪುರಸ್ಕಾರಗಳನ್ನು ಪ್ರಕಟಿಸಿದೆ. ಇದರಲ್ಲಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಯುಪಿ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರಿಗೆ ಮರಣೋತ್ತರ ಪದ್ಮವಿಭೂಷಣ (Padma Vibhushan) ಪ್ರಶಸ್ತಿ ಲಭಿಸಲಿದೆ. ಇನ್ನೊಂದೆಡ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಅವರಿಗೂ ಕೂಡ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Written by - Nitin Tabib | Last Updated : Jan 25, 2022, 08:50 PM IST
  • ವರ್ಷ 2022ರ ಪದ್ಮ ಪ್ರಶಸ್ತಿಗಳು ಪ್ರಕಟ
  • ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿಯ ಗರಿ
  • ಸಾಹಿತಿ ಸಿದ್ಧಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಕಟ
Padma Awards 2022: ಜ.ಬಿಪಿನ್ ರಾವತ್, ಕಲ್ಯಾಣ್ ಸಿಂಗ್ ಗೆ ಮರಣೋತ್ತರ ಪದ್ಮ ವಿಭೂಷಣ, ಗುಲಾಮ್ ನಬಿ ಆಜಾದ್ ಗೆ ಪದ್ಮ ಭೂಷಣ title=
Padma Awards 2022 (File Photo)

Padma Awards 2022: ಕೇಂದ್ರ ಸರ್ಕಾರ (Central Government) 2022ನೇ ಸಾಲಿನ ಪದ್ಮ ಪುರಸ್ಕಾರಗಳನ್ನು ಪ್ರಕಟಿಸಿದೆ. ಇದರಲ್ಲಿ ಸಿಡಿಎಸ್ ಬಿಪಿನ್ ರಾವತ್ (CDS Bipin Rawat) ಮತ್ತು ಯುಪಿ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರಿಗೆ ಮರಣೋತ್ತರ ಪದ್ಮವಿಭೂಷಣ (Padma Vibhushan) ಪ್ರಶಸ್ತಿ ಲಭಿಸಲಿದೆ. ಇನ್ನೊಂದೆಡ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಅವರಿಗೂ ಕೂಡ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಈ ಬಾರಿ ಒಟ್ಟು ನಾಲ್ವರಿಗೆ ಪದ್ಮ ವಿಭೂಷಣ 17 ಜನರಿಗೆ ಪದ್ಮಭೂಷಣ (Padma Bhushan) ಹಾಗೂ 107 ಮಂದಿಗೆ ಪದ್ಮಶ್ರೀ (Padma Shri) ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದರಲ್ಲಿ ಕರ್ನಾಟಕದ ಒಟ್ಟು ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ವಿಜ್ಞಾನ ಮತ್ತು ಇಂಜಿನೀರಿಂಗ್ ವಿಭಾಗದಲ್ಲಿ ಕರ್ನಾಟಕದ ಶ್ರೀ ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಎಚ್. ಆರ್ ಕೇಶವಮೂರ್ತಿ ಅವರಿಗೆ ಕಲಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದರೆ, ಗ್ರಾಸ್ ರೂಟ್ ಇನ್ನೋವೆಶನ್ಸ್ ನ ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಇತರೆ ವಿಭಾಗದಲ್ಲಿ, ಅಮಾಯಿ ಮಹಾಲಿಂಗ್ ನಾಯಿಕ್ ಅವರಿಗೆ ಕೃಷಿ ಕ್ಷೇತ್ರದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಸಾಹಿತಿ ಶ್ರೀ ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ

ಇನ್ನೊಂದೆಡೆ ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯಾ ನಾಡೆಲ್ಲಾ, ಅಲ್ಫಾಬೆಟ್ ಸಂಸ್ಥೆಯ ಸಿಇಓ ಆಗಿರುವ ಸುಂದರ್ ಪಿಚೈ, ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ MD ಸೈರಸ್ ಪೂನಾವಾಲಾ ಅವರಿಗೂ ಕೂಡ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ತಾಚಾರ್ಯ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಸಿಗಲಿದ. 

ಕೊವ್ಯಾಕ್ಸಿನ್ ಉತ್ಪಾದಕ ಕಂಪನಿ ಭಾರತ್ ಬಯೋಟೆಕ್ ಚೇರ್ಮನ್ ಕೃಷ್ಣಾ ಎಲ್ಲಾ, ಕಂಪನಿಯ ಸಹ ಸಂಸ್ಥಾಪಕಿ ಹಾಗೂ ಕೃಷ್ಣಾ ಪತ್ನಿ ಸುಚಿತ್ರಾ ಎಲ್ಲಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ-ನಾಯಕತ್ವ ಬದಲಾವಣೆ ಇಲ್ಲ, ಪೂರ್ಣಾವಧಿಗೆ ಬೊಮ್ಮಾಯಿ ಸಿಎಂ: ನಳೀನ್ ಕುಮಾರ್ ಕಟೀಲ್

ಒಲಂಪಿಯನ್ ನೀರಜ್ ಚೋಪ್ರಾ, ಪ್ರಮೋದ್ ಭಗತ್ ಮತ್ತು ವಂದನಾ ಕಟಾರಿಯಾ ಹಾಗೂ ಗಾಯಕ ಸೋನು ನಿಗಮ್ ಅವರಿಗೂ ಕೂಡ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.

ಇದನ್ನೂ ಓದಿ-SSLC Final Exam 2022 Time Table: ಎಸ್ಎಸ್ಎಲ್ ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ವಿಜ್ಞಾನ ಮತ್ತು ಇಂಜಿನೀರಿಂಗ್ ವಿಭಾಗದಲ್ಲಿ ಕರ್ನಾಟಕದ ಶ್ರೀ ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಎಚ್. ಆರ್ ಕೇಶವಮೂರ್ತಿ ಅವರಿಗೆ ಕಲಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದರೆ, ಗ್ರಾಸ್ ರೂಟ್ ಇನ್ನೋವೆಶನ್ಸ್ ನ ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಇತರೆ ವಿಭಾಗದಲ್ಲಿ, ಅಮಾಯಿ ಮಹಾಲಿಂಗ್ ನಾಯಿಕ್ ಅವರಿಗೆ ಕೃಷಿ ಕ್ಷೇತ್ರದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ಸಾಹಿತಿ ಶ್ರೀ ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ- Aadhaar Cardಗೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದ UIDAI

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News