ಜೂನ್ 1 ರಿಂದ ಆರಂಭವಾಗುವ ವಿಶೇಷ ರೈಲುಗಳಲ್ಲಿ 2.37 ಲಕ್ಷ ಟಿಕೆಟ್‌ಗಳು ರಿಸರ್ವ್ ..!

ಜೂನ್ 1 ರಿಂದ ಭಾರತೀಯ ರೈಲ್ವೆ ಓಡಿಸಲಿರುವ 200 ಹೆಚ್ಚುವರಿ ವಿಶೇಷ ರೈಲುಗಳಿಗೆ ಗುರುವಾರ ಸಂಜೆ 4 ಗಂಟೆಯವರೆಗೆ 2.37 ಲಕ್ಷ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Last Updated : May 21, 2020, 11:54 PM IST
ಜೂನ್ 1 ರಿಂದ ಆರಂಭವಾಗುವ ವಿಶೇಷ ರೈಲುಗಳಲ್ಲಿ  2.37 ಲಕ್ಷ ಟಿಕೆಟ್‌ಗಳು ರಿಸರ್ವ್ ..! title=
ಸಾಂದರ್ಭಿಕ ಚಿತ್ರ

ನವದೆಹಲಿ: ಜೂನ್ 1 ರಿಂದ ಭಾರತೀಯ ರೈಲ್ವೆ ಓಡಿಸಲಿರುವ 200 ಹೆಚ್ಚುವರಿ ವಿಶೇಷ ರೈಲುಗಳಿಗೆ ಗುರುವಾರ ಸಂಜೆ 4 ಗಂಟೆಯವರೆಗೆ 2.37 ಲಕ್ಷ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲುಗಳ ಬುಕಿಂಗ್ ಬೆಳಿಗ್ಗೆ 10 ಗಂಟೆಗೆ ರೈಲ್ವೆ ಟಿಕೆಟಿಂಗ್ ಆರ್ಮ್ ಐಆರ್ಸಿಟಿಸಿ ಮೂಲಕ ಪ್ರಾರಂಭವಾಯಿತು. ಐಆರ್ಸಿಟಿಸಿ ವೆಬ್‌ಸೈಟ್ ಮೂಲಕ ಅಥವಾ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್ ಇ-ಟಿಕೆಟಿಂಗ್ ಮಾತ್ರ ಮಾಡಲಾಗುತ್ತದೆ.

ರೈಲ್ವೆ ಅಂಕಿ-ಅಂಶಗಳ ಪ್ರಕಾರ, ಈ ರೈಲುಗಳಲ್ಲಿ 5,51,724 ಪ್ರಯಾಣಿಕರಿಗೆ 2,37,751 ಟಿಕೆಟ್ ಕಾಯ್ದಿರಿಸಲಾಗಿದೆ ಮತ್ತು ಸಂಜೆ 4 ಗಂಟೆಗೆ 101 ರೈಲುಗಳು ಬುಕಿಂಗ್ಗಾಗಿ ಲಭ್ಯಇವೆ. ರೈಲುಗಳ ಪಟ್ಟಿಯಲ್ಲಿ ಜನಪ್ರಿಯ ರೈಲುಗಳಾದ ಡುರೊಂಟೋ, ಸಂಪರ್ಕ ಕ್ರಾಂತಿ, ಜನ ಶತಾಬ್ದಿ ಮತ್ತು ಪೂರ್ವಾ ಎಕ್ಸ್‌ಪ್ರೆಸ್ ಸೇರಿವೆ.

ಮಧ್ಯಾಹ್ನ 1 ಗಂಟೆಗೆ 76 ರೈಲುಗಳಿಗಾಗಿ ಬುಕಿಂಗ್ ಲಭ್ಯ ಇದ್ದವು. ಮಧ್ಯಾಹ್ನ 1 ಗಂಟೆಗೆ 4,23,538 ಪ್ರಯಾಣಿಕರನ್ನು ಹೊಂದಿರುವ 1,78,990 ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ರೈಲ್ವೆ ನಿಲ್ದಾಣದ ರಿಸರ್ವ್ ಕೌಂಟರ್, ಬುಕಿಂಗ್ ಏಜೆಂಟರ ಮೂಲಕ ಬುಕಿಂಗ್ ಅನುಮತಿಸಲಾಗುವುದಿಲ್ಲ. ಈ ವಿಶೇಷ ರೈಲುಗಳಲ್ಲಿ ಮುಂಗಡ ಕಾಯ್ದಿರಿಸುವ ಅವಧಿ 30 ದಿನಗಳು ಎನ್ನಲಾಗಿದೆ.

ಈ ರೈಲುಗಳು ಹವಾನಿಯಂತ್ರಿತ ಮತ್ತು ಹವಾನಿಯಂತ್ರಿತವಲ್ಲದ ವರ್ಗಗಳನ್ನು ಹೊಂದಿರುತ್ತವೆ. ಯಾವುದೇ ಅಡುಗೆ ಶುಲ್ಕವನ್ನು ಟಿಕೆಟ್ ದರದಲ್ಲಿ ಸೇರಿಸಿರುವುದಿಲ್ಲ. ಪೂರ್ವ-ಪಾವತಿಸಿದ ಊಟದ ಬುಕಿಂಗ್, ಇ-ಕ್ಯಾಟರಿಂಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದಾಗ್ಯೂ, ಐಆರ್ಸಿಟಿಸಿ ಸೀಮಿತ ರೈಲುಗಳಲ್ಲಿ ಊಟ ಮತ್ತು ಕುಡಿಯುವ ನೀರನ್ನು ಪಾವತಿ ಆಧಾರದ ಮೇಲೆ ಒದಗಿಸಲಾಗುತ್ತದೆ' ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Trending News