ಬರಿ ಮೋದಿ ಚಲನಚಿತ್ರಕ್ಕಲ್ಲ, ನಮೋ ಟಿವಿಗೂ ನಿಷೇಧದ ನಿಯಮ ಅನ್ವಯವಾಗುತ್ತೆ - ಚುನಾವಣಾಧಿಕಾರಿಗಳು

ಲೋಕಸಸಭಾ ಚುನಾವಣೆ ಮುಗಿಯುವವರೆಗೂ ನರೇಂದ್ರ ಮೋದಿ ಚಲನಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಆದೇಶಿಸಿದ್ದ ಚುನಾವಣಾ ಆಯೋಗ, ಈ ಅದೇ ನಿಯಮವನ್ನು ನಮೋ ಟಿವಿಗೂ ಅನ್ವಯಿಸುತ್ತದೆ ಎಂದು ಹೇಳಿಕೆ ನೀಡಿದೆ.

Last Updated : Apr 10, 2019, 06:19 PM IST
ಬರಿ ಮೋದಿ ಚಲನಚಿತ್ರಕ್ಕಲ್ಲ, ನಮೋ ಟಿವಿಗೂ ನಿಷೇಧದ ನಿಯಮ ಅನ್ವಯವಾಗುತ್ತೆ - ಚುನಾವಣಾಧಿಕಾರಿಗಳು  title=

ನವದೆಹಲಿ: ಲೋಕಸಸಭಾ ಚುನಾವಣೆ ಮುಗಿಯುವವರೆಗೂ ನರೇಂದ್ರ ಮೋದಿ ಚಲನಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಆದೇಶಿಸಿದ್ದ ಚುನಾವಣಾ ಆಯೋಗ, ಈ ಅದೇ ನಿಯಮವನ್ನು ನಮೋ ಟಿವಿಗೂ ಅನ್ವಯಿಸುತ್ತದೆ ಎಂದು ಹೇಳಿಕೆ ನೀಡಿದೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಕುರಿತ ಚಲನಚಿತ್ರವು ಚುನಾವಣಾ ಕಣದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ಮುಗಿಯುವವರೆಗೆ ಚಿತ್ರಕ್ಕೆ ತಡೆಯಾಜ್ಞೆ ನೀಡಿದೆ.

ಚುನಾವಣಾ ಆಯೋಗ ನೀಡಿರುವ ಆದೇಶದಲ್ಲಿ " ಯಾವುದೇ ರೀತಿಯ ಪೋಸ್ಟರ್ ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸಲ್ಪಡುವ ವಸ್ತು, ಚುನಾವಣೆಯಲ್ಲಿ ಅಭ್ಯರ್ಥಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಭಂಧಪಟ್ಟದ್ದೆ ಆದಲ್ಲಿ ಅದನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನೀತಿ ಸಂಹಿತೆ ಜಾರಿ ಇದ್ದ ಸ್ಥಳದಲ್ಲಿ ಪ್ರದರ್ಶಿಸುವಂತಿಲ್ಲ "ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.ಈ ಹಿನ್ನಲೆಯಲ್ಲಿ ಈಗ ಚುನಾವಣಾ ಅಧಿಕಾರಿಗಳು ಆದೇಶದ ಈ ಪ್ಯಾರಾವನ್ನು ಪ್ರಸ್ತಾಪಿಸಿ ಈ ನಿಯಮ ನಮೋ ಟಿವಿ ಪ್ರಸಾರಕ್ಕೂ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.

Trending News