ಮತ ಎಣಿಕೆ ದಿನ ದೇಶದೆಲ್ಲೆಡೆ ಹಿಂಸಾಚಾರ ಸಾಧ್ಯತೆ- ಗೃಹ ಸಚಿವಾಲಯ ಎಚ್ಚರಿಕೆ

 ನಾಳೆ ದಿನ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು , ಇದಕ್ಕೂ ಮುನ್ನ ಗೃಹ ಸಚಿವಾಲಯ ದೇಶದೆಲ್ಲೆಡೆ ಹಿಂಸಾಚಾರದ ಘಟನೆಗಳು ನಡೆಯುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ.

Last Updated : May 22, 2019, 06:34 PM IST
ಮತ ಎಣಿಕೆ ದಿನ ದೇಶದೆಲ್ಲೆಡೆ ಹಿಂಸಾಚಾರ ಸಾಧ್ಯತೆ-  ಗೃಹ ಸಚಿವಾಲಯ ಎಚ್ಚರಿಕೆ  title=
ಸಾಂದರ್ಭಿಕ ಚಿತ್ರ

ನವದೆಹಲಿ:  ನಾಳೆ ದಿನ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು , ಇದಕ್ಕೂ ಮುನ್ನ ಗೃಹ ಸಚಿವಾಲಯ ದೇಶದೆಲ್ಲೆಡೆ ಹಿಂಸಾಚಾರದ ಘಟನೆಗಳು ನಡೆಯುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ.

ಈಗಾಗಲೇ ಕೇಂದ್ರ ಗೃಹ ಸಚಿವಾಲಯವು ಬುಧವಾರದಂದು ರಾಜ್ಯ ಮುಖ್ಯ ಕಾರ್ಯದರ್ಶಿಗಳು ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಗೃಹ ವ್ಯವಹಾರ ಸಚಿವಾಲಯ ಎಚ್ಚರಿಸಿದೆ. ರಾಜ್ಯದ ಎಲ್ಲ ಭಾಗಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದೆ.

ಮತ ಎಣಿಕೆ ಸ್ಥಳಗಳು ಹಾಗೂ ಮತ್ತು ಸ್ಟ್ರಾಂಗ್ ರೂಂ ಗಳಿಗೆ ಭದ್ರತೆಯನ್ನು ಬಲಪಡಿಸಬೇಕು ಎಂದು ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಅಂತಿಮ ಫಲಿತಾಂಶಕ್ಕೂ ಹಲವು ರಾಜಕೀಯ ನಾಯಕರು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಹೇಳಿಕೆಯನ್ನು ನೀಡಿದ ಹಿನ್ನಲೆಯಲ್ಲಿ ಈಗ ಗೃಹ ಇಲಾಖೆ ಯಾವುದೇ ರೀತಿಯ ಹಿಂಸಾಚಾರಕ್ಕೆ ಆಸ್ಪದ ನೀಡದಂತೆ ಸೂಚನೆ ನೀಡಿದೆ. 

ಈ ಹಿಂದೆ ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ಮಂಗಳವಾರದಂದು ಹಿಂಸಾಚಾರ ಮತ್ತು ರಕ್ತಪಾತದ ಬಗ್ಗೆ ಹೇಳಿಕೆ ನೀಡಿದ್ದರು. 

Trending News