#HappybirthdayPMModi; ಮಂದಿರದಲ್ಲಿ 1.25 ಕೆಜಿ ಚಿನ್ನದ ಕಿರೀಟ ಅರ್ಪಿಸಿದ ಅಭಿಮಾನಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿಮಾನಿ ಅರವಿಂದ್ ಸಿಂಗ್ ಅವರು ಮೋದಿ ಮತ್ತೆ ಪ್ರಧಾನಿಯಾಗುವಂತೆ ದೇವರಲ್ಲಿ ಹರಕೆ ಹೊತ್ತಿದ್ದರು. ಅವರ ಹರಕೆ ಈಡೇರಿದ ಹಿನ್ನೆಲೆಯಲ್ಲಿ ಅರವಿಂದ್ ಸಿಂಗ್ ದೇವರಿಗೆ 1.25 ಕೆಜಿ ಚಿನ್ನದ ಕಿರೀಟವನ್ನು ಅರ್ಪಿಸಿದರು.

Last Updated : Sep 17, 2019, 09:55 AM IST
#HappybirthdayPMModi; ಮಂದಿರದಲ್ಲಿ 1.25 ಕೆಜಿ ಚಿನ್ನದ ಕಿರೀಟ ಅರ್ಪಿಸಿದ ಅಭಿಮಾನಿ title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 69 ನೇ ಹುಟ್ಟುಹಬ್ಬವನ್ನು ದೇಶಾದ್ಯಂತ ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ಪಿಎಂ ಮೋದಿ ಅವರ ಅಭಿಮಾನಿಗಳು ಅವರ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಿಎಂ ಮೋದಿಯ ಅಭಿಮಾನಿಯೊಬ್ಬರು ವಾರಣಾಸಿಯ ಸಂಕತ್ ಮೋಚನ್ ದೇವಸ್ಥಾನದಲ್ಲಿ ಚಿನ್ನದ ಕಿರೀಟವನ್ನು ಅರ್ಪಿಸಿದರು. ಈ ಚಿನ್ನದ ಕಿರೀಟದ ತೂಕ 1.25 ಕೆ.ಜಿ. ಈ ಕಿರೀಟವನ್ನು ಪ್ರಧಾನಿ ಮೋದಿ ಅವರ ಅಭಿಮಾನಿ ಅರವಿಂದ್ ಸಿಂಗ್ ನೀಡಿದ್ದಾರೆ.

ವಾಸ್ತವವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿಮಾನಿ ಅರವಿಂದ್ ಸಿಂಗ್ ಅವರು ಮೋದಿ ಮತ್ತೆ ಪ್ರಧಾನಿಯಾಗುವಂತೆ ದೇವರಲ್ಲಿ ಹರಕೆ ಹೊತ್ತಿದ್ದರು. ಅವರ ಹರಕೆ ಈಡೇರಿದ ಹಿನ್ನೆಲೆಯಲ್ಲಿ ಅರವಿಂದ್ ಸಿಂಗ್ ದೇವರಿಗೆ 1.25 ಕೆಜಿ ಚಿನ್ನದ ಕಿರೀಟವನ್ನು ಅರ್ಪಿಸಿದರು. ಅರವಿಂದ್ ಸಿಂಗ್ ವಾರಣಾಸಿ ಉದ್ಯಮಿ.

ಅರವಿಂದ್ ಸಿಂಗ್ ಜುಲೈ 29 ರಂದು ಅವರು ಈ ಕಿರೀಟದೊಂದಿಗೆ ಪಿಎಂಒ ತಲುಪಿ, ಪ್ರಧಾನಿ ಮೋದಿ ಈ ಕಿರೀಟವನ್ನು ಸ್ಪರ್ಶಿಸುವಂತೆ ಕೇಳಿದರು.

ಪ್ರಧಾನಮಂತ್ರಿಯವರ ಜನ್ಮದಿನದ ಒಂದು ದಿನ ಮೊದಲು ಈ ಕಿರೀಟವನ್ನು ಅರ್ಪಿಸಲಾಯಿತು. ಹನುಮಾಂಜಿಗೆ ಕಿರೀಟವನ್ನು ಅರ್ಪಿಸುವ ಮೊದಲು ಸೋಮವಾರ ಸಂಜೆ ದುರ್ಗಾಕುಂಡ್‌ನ ಧರ್ಮ ಸಂಘ ಭವನದಲ್ಲಿ ಕಾಶಿವಾಸಿಗಳು ಚಿನ್ನದ ಕಿರೀಟಕ್ಕೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ಹಸ್ತಾಂತರಿಸಿದರು.

Trending News