ಹೊಸ ವರ್ಷದಲ್ಲಿ Omicron ವೈರಸ್ ಅಂತ್ಯವಾಗಲಿದೆ!: ವೈದ್ಯಕೀಯ ತಜ್ಞರ ಭರವಸೆ

ಕೊರೊನಾದ 3ನೇ ಅಲೆ ಬರುತ್ತಿದೆ. ಆದರೆ ಜನರಿಗೆ ಆಸ್ಪತ್ರೆ ಮತ್ತು ಆಮ್ಲಜನಕದ ಬೆಂಬಲದ ಅಗತ್ಯವಿರುವ ಸಾಧ್ಯತೆಗಳು ತುಂಬಾ ಕಡಿಮೆ ಅಂತಾ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.  

Written by - Zee Kannada News Desk | Last Updated : Jan 2, 2022, 06:35 AM IST
  • ಒಮಿಕ್ರಾನ್ ಸೋಂಕಿಗೆ ಒಳಗಾದ ಹೆಚ್ಚಿನ ರೋಗಿಗಳು ಮನೆಯಲ್ಲಿಯೇ ಗುಣಮುಖರಾಗುತ್ತಿದ್ದಾರೆ
  • ಹಿಂದಿನ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ವೈದ್ಯಕೀಯ ತಜ್ಞರ ಸಲಹೆ
  • ದೆಹಲಿಯಲ್ಲಿ ಮಕ್ಕಳ ಚಿಕಿತ್ಸೆಗಾಗಿ 3 ಸಾವಿರ ಬೆಡ್ ಗಳನ್ನು ಸಿದ್ಧಪಡಿಸಲಾಗಿದೆ
ಹೊಸ ವರ್ಷದಲ್ಲಿ Omicron ವೈರಸ್ ಅಂತ್ಯವಾಗಲಿದೆ!: ವೈದ್ಯಕೀಯ ತಜ್ಞರ ಭರವಸೆ title=
ಒಮಿಕ್ರಾನ್ ವೈರಸ್ ಬಗ್ಗೆ ಭಯ ಬೇಡ

ನವದೆಹಲಿ: 2022ರ ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷವೂ ಹಲವಾರು ಹೊಸ ಭರವಸೆಗಳನ್ನು ತಂದಿದೆ. ದೇಶದಲ್ಲಿ ಕೊರೊನಾ 3ನೇ ಅಲೆಯ ಸಾಧ್ಯತೆಯು ಸ್ಥಿರವಾಗಿದೆ ಮತ್ತು ಕೋವಿಡ್-19(COVID-19) ಪ್ರಕರಣಗಳು ಸಹ ಹೆಚ್ಚಾಗಿದೆ. ಆದರೆ ಈ ನಡುವೆ ರಿಲೀಫ್ ನೀಡುವ ಹಲವು ಸುದ್ದಿಗಳೂ ಹೊರ ಬರುತ್ತಿವೆ.

Omicron ವಿದಾಯ ಹೇಳಲಿದೆ!

ದೇಶದಲ್ಲಿ ಓಮಿಕ್ರಾನ್(Omicron Variant) ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಆದರೆ ಅವುಗಳಲ್ಲಿ ಹೆಚ್ಚಿನವುಗಳಲ್ಲಿ ರೋಗಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ. ಒಮಿಕ್ರಾನ್ ಸೋಂಕಿಗೆ ಒಳಗಾದ ಹೆಚ್ಚಿನ ರೋಗಿಗಳು ಮನೆಯಲ್ಲಿಯೇ ಗುಣಮುಖರಾಗುತ್ತಿರುವುದು ಉತ್ತಮ ಸಂಗತಿ. ಇದನ್ನು ಸ್ವತಃ ಏಮ್ಸ್ ನಿರ್ದೇಶಕರೇ ಹೇಳುತ್ತಿದ್ದಾರೆ.

ಇದನ್ನೂ ಓದಿ: ಎಸ್ಪಿ ಅಧಿಕಾರಕ್ಕೆ ಬಂದಲ್ಲಿ 300 ಯೂನಿಟ್ ವಿದ್ಯುತ್ ಉಚಿತ- ಅಖಿಲೇಶ್ ಯಾದವ್

ಡಾ.ರಂದೀಪ್ ಗುಲೇರಿಯಾ ಪ್ರಕಾರ, ‘ಕೊರೊನಾದ 3ನೇ ಅಲೆ(Corona 3rd Wave) ಬರುತ್ತಿದೆ. ಆದರೆ ಜನರಿಗೆ ಆಸ್ಪತ್ರೆ ಮತ್ತು ಆಮ್ಲಜನಕದ ಬೆಂಬಲದ ಅಗತ್ಯವಿರುವ ಸಾಧ್ಯತೆಗಳು ತುಂಬಾ ಕಡಿಮೆ. ಹಿಂದಿನ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು’ ಅಂತಾ ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲೂ ಇದೇ ರೀತಿಯ ದೃಶ್ಯ ಕಂಡು ಬರುತ್ತಿದೆ. ನಗರದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ, ಆದರೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಕಳೆದ ಬಾರಿಗಿಂತ ಕಡಿಮೆಯಾಗಿದೆ.

ದೆಹಲಿಯಲ್ಲಿ ಮಕ್ಕಳಿಗಾಗಿ 3 ಸಾವಿರ ಹಾಸಿಗೆಗಳು ಸಿದ್ಧ

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾತನಾಡಿ, ‘ಇದೀಗ ಆಸ್ಪತ್ರೆಗಳಲ್ಲಿ ಕಡಿಮೆ ಪ್ರಕರಣಗಳು ಬರುತ್ತಿವೆ. ಓಮಿಕ್ರಾನ್(Coronavirus) ಪ್ರಕರಣವು ಗಂಭೀರವಾಗಿಲ್ಲ. ಇದೀಗ ವಿದೇಶದಿಂದ ಬರುವವರನ್ನು ಪಂಚತಾರಾ ಹೋಟೆಲ್‌ಗಳಲ್ಲಿ ಇರಿಸಲಾಗುತ್ತಿದೆ. ಮಕ್ಕಳ ಚಿಕಿತ್ಸೆಗಾಗಿ ತಯಾರಿ ಕೂಡ ಪೂರ್ಣಗೊಂಡಿದೆ. ಇದಕ್ಕಾಗಿ ನಗರದಲ್ಲಿ 3 ಸಾವಿರ ಬೆಡ್ ಗಳನ್ನು ಸಿದ್ಧವಾಗಿ ಇರಿಸಲಾಗಿದೆ’ ಅಂತಾ ಹೇಳಿದ್ದಾರೆ.  

ದೆಹಲಿಯಂತೆಯೇ ಉತ್ತರಪ್ರದೇಶದಲ್ಲಿಯೂ ಕೊರೊನಾದ 3ನೇ ಅಲೆ(Corona 3rd Wave)ಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಕೊರೊನಾ ಪರೀಕ್ಷೆಯನ್ನು ಹೆಚ್ಚಿಸುವುದರ ಜೊತೆಗೆ ಚಿಕಿತ್ಸಾ ವ್ಯವಸ್ಥೆಗಳನ್ನು ಸುಧಾರಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಹೊಸ ವರ್ಷದಂದು ಶೇ 50 ರಷ್ಟು ಕೊರೊನಾ ಪ್ರಕರಣಗಳು ಹೆಚ್ಚಳ

ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಆಗುವುದಿಲ್ಲ!

ಮಹಾರಾಷ್ಟ್ರ ಮತ್ತು ಮುಂಬೈ ಬಗ್ಗೆ ಮಾತನಾಡುತ್ತಾ, ‘ಅಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಹೆಚ್ಚಿನ ರೋಗಿಗಳು ಹೋಮ್ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಲಾಕ್‌ಡೌನ್ ಇರುವುದಿಲ್ಲ ಮತ್ತು ಅದರ ಭಯವನ್ನು ಜನರಿಗೆ ತೋರಿಸಬಾರದು’ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಆದಾಗ್ಯೂ, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ವಿಧಿಸಲಾದ ನಿರ್ಬಂಧಗಳನ್ನು ಬಿಗಿಗೊಳಿಸಬಹುದು.

ಪ್ರಪಂಚದಾದ್ಯಂತ ನಡೆಯುತ್ತಿರುವ ಅಧ್ಯಯನದ ಪ್ರಕಾರ, ಓಮಿಕ್ರಾನ್ ರೂಪಾಂತರಿ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ವಿಜ್ಞಾನಿಗಳ ಪ್ರಕಾರ, ಈ ರೂಪಾಂತರವು ಡೆಲ್ಟಾದಷ್ಟು ಮಾರಣಾಂತಿಕವಾಗಿಲ್ಲ. ಆದರೆ ಪ್ರಪಂಚದಲ್ಲಿ ಕೊರೊನಾವನ್ನು ತೊಡೆದುಹಾಕುವ ಮೊದಲ ಹೆಜ್ಜೆಯಾಗಿದೆ.

ಸಾಂಕ್ರಾಮಿಕ ರೋಗದ ಅಂತ್ಯದ ಆರಂಭದ ಮೊದಲ ಹಂತ

ಪ್ರಪಂಚದಾದ್ಯಂತದ ಅನೇಕ ವಿಜ್ಞಾನಿಗಳು ಓಮಿಕ್ರಾನ್ ಅನ್ನು ಸಾಂಕ್ರಾಮಿಕ ರೋಗ(India Coronavirus)ದ ಅಂತ್ಯದ ಆರಂಭದ ಮೊದಲ ಹಂತವೆಂದು ಪರಿಗಣಿಸಿದ್ದಾರೆ. ತಜ್ಞರ ಪ್ರಕಾರ, ದೇಶದಲ್ಲಿ ಶೇ.60 ರಿಂದ ಶೇ.70 ರಷ್ಟು ಜನರು ಸೋಂಕು ಅಥವಾ ಲಸಿಕೆಯಿಂದ ಪ್ರತಿಕಾಯಗಳನ್ನು ಪಡೆದಾಗ ಹೊಸದಾಗಿ ರೂಪಾಂತರಗೊಂಡ ವೈರಸ್ ತನ್ನನ್ನು ದುರ್ಬಲಗೊಳಿಸಲು ಪ್ರಾರಂಭಿಸುತ್ತದೆ ಮತ್ತು ದೇಹಕ್ಕೆ ಕಡಿಮೆ ಮಾರಕವಾಗುತ್ತದೆ. ಆದಾಗ್ಯೂ ಇದು ವೇಗವಾಗಿ ಹರಡುತ್ತಿದೆ. ಇದರಿಂದ ಅದು ಹೆಚ್ಚು ಹೆಚ್ಚು ಮಾನವರ ದೇಹದಲ್ಲಿಯೇ ಉಳಿಯಬಹುದು. ಚಿಕಿತ್ಸೆ ಬಳಿಕ ಅದರ ಅಂತ್ಯವಾಗುತ್ತದೆ. ಡೆಲ್ಟಾ ವೇರಿಯಂಟ್‌ ಬಗ್ಗೆ ಭಯವಿದ್ದಂತೆ ಓಮಿಕ್ರಾನ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಅದೇನೇ ಇದ್ದರೂ ಓಮಿಕ್ರಾನ್ ವಿರುದ್ಧ ರಕ್ಷಿಸಲು ಎಚ್ಚರಿಕೆ ಅತ್ಯಗತ್ಯ. 2 ಗಜಗಳ ಅಂತರ ಮತ್ತು ಕಡ್ಡಾಯ ಮಾಸ್ಕ್ ಧರಿಸುವುದು ಬಹಳ ಮುಖ್ಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News