ಅನಿವಾಸಿ ಭಾರತೀಯರು ದೇಶದ ಅಭಿವೃದ್ಧಿಯ ಪಾಲುದಾರರು : ಪ್ರಧಾನಿ ಮೋದಿ

ಕಳೆದ 3-4 ವರ್ಷಗಳಲ್ಲಿ, ಭಾರತದ ಬಗ್ಗೆ ಪ್ರಪಂಚದ ಗ್ರಹಿಕೆ ಬದಲಾಗಿದೆ, ಭಾರತವನ್ನು ಜಾಗತಿಕವಾಗಿ ಕೇಂದ್ರೀಕರಿಸಲಾಗಿದೆ, ಭಾರತವು ಬದಲಾವಣೆಯನ್ನು ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

Last Updated : Jan 9, 2018, 12:26 PM IST

Trending Photos

ಅನಿವಾಸಿ ಭಾರತೀಯರು ದೇಶದ ಅಭಿವೃದ್ಧಿಯ ಪಾಲುದಾರರು : ಪ್ರಧಾನಿ ಮೋದಿ title=

ನವದೆಹಲಿ : ಭಾರತವು ಹೇಗೆ ರೂಪಾಂತರಗೊಳ್ಳುತ್ತಿದೆ ಎಂಬುದರ ಬಗ್ಗೆ ಒಂದು ಒಳನೋಟವನ್ನು ನೀಡುತ್ತಾ, ಮಂಗಳವಾರ ನಡೆದ ಭಾರತೀಯ ಮೂಲದ (ಪಿಐಒ) ಪಾರ್ಲಿಮೆಂಟರಿ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾರತ ಗುಣಾತ್ಮಕ ಬದಲಾವಣೆ ಕಂಡಿದೆ ಎಂದಿದ್ದಾರೆ. 

"ನೀವು ಪ್ರಪಂಚದ ವಿಭಿನ್ನ ಸ್ಥಳಗಳಲ್ಲಿ ವಾಸಿಸುತ್ತಿದ್ದೀರಿ, ಕಳೆದ 3-4 ವರ್ಷಗಳಲ್ಲಿ, ಭಾರತದ ಬಗ್ಗೆ ಪ್ರಪಂಚದ ಗ್ರಹಿಕೆ ಬದಲಾಗಿದೆ, ಭಾರತವನ್ನು ಜಾಗತಿಕವಾಗಿ ಕೇಂದ್ರೀಕರಿಸಲಾಗಿದೆ, ಭಾರತವು ಬದಲಾವಣೆಯನ್ನು ಕಾಣುತ್ತಿದೆ" ಎಂದು ಅವರು ಹೇಳಿದ್ದಾರೆ. 

ಭಾರತೀಯ ಮೂಲದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿ, ಇತರ ರಾಷ್ಟ್ರಗಳಿಗೆ ಅವರು ನೀಡಿದ ಕೊಡುಗೆಗಾಗಿ ಅವರನ್ನು ಶ್ಲಾಘಿಸಿದರು. "ನಾನು ಇಲ್ಲಿ ಭಾರತೀಯ ಮೂಲದ ನಾಗರಿಕರ ಮಿನಿ ವರ್ಲ್ಡ್ ಪಾರ್ಲಿಮೆಂಟ್ ಅನ್ನು ನೋಡುತ್ತಿದ್ದೇನೆ. ಈಗಿನ ಭಾರತೀಯ ಮೂಲದ ಜನರು ಮಾರಿಷಸ್, ಪೋರ್ಚುಗಲ್ ಮತ್ತು ಐರ್ಲೆಂಡ್ನಲ್ಲಿ PM ಗಳು. ಅನೇಕ ಮಂದಿ ಇತರ ಹಲವು ರಾಷ್ಟ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ" ಅವರು ಹೆಮ್ಮೆ ವ್ಯಕ್ತಪಡಿಸಿದರು. 

ಭಾರತದ ಅಭಿವೃದ್ಧಿಗೆ ಎನ್ನಾರೈಗಳು ಮತ್ತು ಪಿಐಒಗಳು ಹೇಗೆ ಕೊಡುಗೆ ನೀಡಬಹುದು ಎಂದು ತಿಳಿಸಿದರಲ್ಲದೆ, ಆ ಕಾರ್ಯಕ್ಕೆ ಕರೆ ನೀಡಿದರು. "ಭಾರತಕ್ಕೆ ವಿಶೇಷತೆಗಳನ್ನು ತಂದುಕೊಡುವ ಸಾಮರ್ಥ್ಯವನ್ನು ನೀವು ಹೊಂದಿದ್ದು, ದೇಶದ ಅಗತ್ಯತೆಗಳ ಬಗ್ಗೆ ಗಮನಹರಿಸಬೇಕು ಮತ್ತು ಭಾರತದ ಮೌಲ್ಯಗಳು ಅನಿಶ್ಚಿತತೆಯ ಈ ಪ್ರಪಂಚಕ್ಕೆ ಸ್ಥಿರತೆಯನ್ನು ತರುವಲ್ಲಿ ಭಾರೀ ಪಾತ್ರವನ್ನು ವಹಿಸಬಲ್ಲವು" ಎಂದು ಮೋದಿ ಹೇಳಿದರು. 

ಭಾರತದಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬದಲಾವಣೆಗಳನ್ನು ಎಲ್ಲ ವಲಯಗಳಲ್ಲಿಯೂ ಕಾಣಬಹುದು ಎಂದು ಹೇಳಿದ ಪ್ರಧಾನಿ, "ಭಾರತವು ಗುಣಾತ್ಮಕವಾಗಿ ಬದಲಾಗಿದ್ದು, 'ಎಂದೂ ಬದಲಾಗುವುದಿಲ್ಲ' ಎಂಬ ಮನಸ್ಥಿತಿಯ್ಯನು ಜನರಲ್ಲಿ ಬದಲಾಯಿಸಿದೆ. ದೇಶದ ಜನರ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಇಂದು ತಮ್ಮ ಉತ್ತುಂಗದಲ್ಲಿದೆ. ಸಂಸ್ಥೆಗಳು ಉತ್ತಮ ಅಭಿವೃದ್ಧಿಯನ್ನು ಕಾಣುತ್ತಿವೆ. ಇದರ ಧನಾತ್ಮಕ  ಪರಿಣಾಮವು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಅವರು ಹೇಳಿದರು.

Trending News