SBIನಲ್ಲಿ ಈಗ ನೀವು ಬೇರೆಯವರ ಬ್ಯಾಂಕ್ ಖಾತೆಯಲ್ಲಿ ಹಣ ಠೇವಣಿ ಮಾಡುವುದು ಕಷ್ಟ

ಎಸ್ಬಿಐ ಈ ನಿಯಮ ಅನುಷ್ಠಾನಗೊಳಿಸಲು ಕಾರಣ ಏನು ಗೊತ್ತಾ?  

Last Updated : Sep 10, 2018, 09:30 AM IST
  • ಎಸ್ಬಿಐನಲ್ಲಿ ನಗದು ಠೇವಣಿ ಮಾಡುವ ನಿಯಮದಲ್ಲಿ ಬದಲಾವಣೆ.
  • ಖಾತೆದಾರರು ಮಾತ್ರ ತಮ್ಮ ಖಾತೆಯಲ್ಲಿ ಹಣ ಠೇವಣಿ ಸಾಧ್ಯ.
SBIನಲ್ಲಿ ಈಗ ನೀವು ಬೇರೆಯವರ ಬ್ಯಾಂಕ್ ಖಾತೆಯಲ್ಲಿ ಹಣ ಠೇವಣಿ ಮಾಡುವುದು ಕಷ್ಟ title=

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಜನರ ಬ್ಯಾಂಕ್ ಖಾತೆಯನ್ನು ಭದ್ರಪಡಿಸುವ ಸಲುವಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನೋಟು ಅಮಾನೀಕರಣದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ವಹಿವಾಟನ್ನು ಪರಿಗಣಿಸಿರುವ ಎಸ್ಬಿಐ ಒಬ್ಬ ವ್ಯಕ್ತಿಯ ಖಾತೆಯಲ್ಲಿ ಬೇರೆ ವ್ಯಕ್ತಿಯು ಹಣ ಠೇವಣಿ ಮಾಡಲು ಸಾಧ್ಯವಿಲ್ಲ ಎಂಬ ನಿಯಮವನ್ನು ಅನುಷ್ಠಾನಗೊಳಿಸಿದೆ. ಅಂದರೆ, ಒಬ್ಬ 'A' ಎಂಬ ವ್ಯಕ್ತಿ ಎಸ್ಬಿಐನಲ್ಲಿ  ಖಾತೆಯನ್ನು ಹೊಂದಿದ್ದರೆ, ನಂತರ ಅವರು ಒಂದೇ ನಗದು ಕೌಂಟರ್ಗೆ ಭೇಟಿ ನೀಡುವ ಮೂಲಕ ಹಣವನ್ನು ಠೇವಣಿ ಮಾಡಬಹುದು. ಒಬ್ಬ ವ್ಯಕ್ತಿ(ತಂದೆ) ತನ್ನ ಮಗನ ಎಸ್ಬಿಐ ಖಾತೆಯಲ್ಲಿ ಕೂಡ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ.

ಈ ನಿಯಮವನ್ನು ತರುವ ಹಿಂದಿನ ಕಾರಣ?
ಎಸ್ಬಿಐ ಈ ನಿಯಮವನ್ನು ಅನುಷ್ಠಾನಗೊಳಿಸುವುದರ ಹಿಂದಿನ ಕಾರಣ ಕೇಳಿದಾಗ, ನೋಟು ಅಮಾನೀಕರಣದ ಸಮಯದಲ್ಲಿ ಹಲವಾರು ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಸಂಖ್ಯೆಯ ಸಾವಿರ ಮತ್ತು ಐನೂರು ರೂಪಾಯಿ ನೋಟುಗಳನ್ನು ಠೇವಣಿ ಮಾಡಲಾಗಿತ್ತು. 
ಈ ಜಮಾ ಆಗಿರುವ ಹಣದ ಬಗ್ಗೆ ತನಿಖೆ ನಡೆಸಿದಾಗ, ಅನೇಕ ಜನರು ಅಪರಿಚಿತ ವ್ಯಕ್ತಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಠೇವಣಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 
 
ಇದರ ನಂತರ, ಆದಾಯ ತೆರಿಗೆ ಇಲಾಖೆ ಅಂತಹ ನಿಯಮಗಳನ್ನು ಮಾಡಲು ಸರ್ಕಾರಿ ಬ್ಯಾಂಕುಗಳಿಗೆ ವಿನಂತಿಸಿದೆ. ಯಾವುದೇ ಬ್ಯಾಂಕ್ ಖಾತೆಯಲ್ಲಿ ಯಾವುದೇ ಬೇರೆ ವ್ಯಕ್ತಿ ಹಣವನ್ನು ಹೂಡಬಾರದು. ಅವರ ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆ ಯಾವುದೇ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಯಾರೂ ತಪ್ಪಿಸಬಾರದು. ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ ನಂತರ, ಭಯೋತ್ಪಾದಕ ನಿಧಿಯನ್ನು ಬಲಪಡಿಸಲಾಗುವುದು ಎಂದು ಬ್ಯಾಂಕ್ ಹೇಳುತ್ತದೆ.

ಬೇರೊಬ್ಬರ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಲು ಈಗ ಈ ಪ್ರಕ್ರಿಯೆ ಅನುಸರಿಸಿ:
ಈ ಹೊಸ ನಿಯಮದ ಅನುಷ್ಠಾನದೊಂದಿಗೆ, ಬ್ಯಾಂಕ್ ಅದರ ವಿಶೇಷ ಕ್ರಮವನ್ನು ತೆಗೆದುಕೊಂಡಿದೆ. ಉದಾಹರಣೆಗೆ, ಮಿಸ್ಟರ್ 'A' ಮಿಸ್ಟರ್ 'B' ನ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಬಯಸಿದರೆ 'A' ಎಂಬ ವ್ಯಕ್ತಿ 'B' ಎಂಬ ವ್ಯಕ್ತಿಗೆ ಅನುಮತಿ ಪತ್ರವನ್ನು ಬರೆಯಬೇಕು. ಇದರಲ್ಲಿ 'B' ವ್ಯಕ್ತಿಯ ಸಹಿಯೂ ಅಗತ್ಯವಾಗಿರುತ್ತದೆ. ಇದಲ್ಲದೆ, ಬ್ಯಾಂಕಿನ ಖಾತೆದಾರರು ಬ್ಯಾಂಕ್ ಠೇವಣಿಯ ಹಣದೊಂದಿಗೆ ಠೇವಣಿ ಫಾರ್ಮ್ ನಲ್ಲಿ   ಸಹಿ ಮಾಡಬೇಕು. ಈ ಎರಡು ಸಂದರ್ಭಗಳಲ್ಲಿ, ಒಬ್ಬರ ಬ್ಯಾಂಕ್ ಖಾತೆಯಲ್ಲಿ ಮತ್ತೊಬ್ಬರು ನಗದು ಹಣವನ್ನು ಪಾವತಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಬ್ಯಾಂಕ್ ಆನ್ಲೈನ್ ಮೂಲಕ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಬಯಸಿದರೆ, ಅದು ಅದಕ್ಕೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. 

ಇದಲ್ಲದೆ, ಗ್ರೀನ್ ಕಾರ್ಡ್ ಮತ್ತು ಇನ್ಸ್ಟನ್ಸ್ ಠೇವಣಿ ಕಾರ್ಡ್ ಇದ್ದರೆ, ಯಾವುದೇ ವ್ಯಕ್ತಿಯು ಖಾತೆಯಲ್ಲಿ ಕಾರ್ಡ್ ಅಥವಾ ನಗದು ಠೇವಣಿ ಮೂಲಕ ಹಣವನ್ನು ಠೇವಣಿ ಮಾಡಬಹುದು.
 

Trending News