RBI ಆರಂಭಿಸಿರುವ ಈ ನೂತನ ಸೇವೆ ಬಳಸಿ ಆಫ್ ಲೈನ್ ಮೂಲಕವೂ ಮಾಡಬಹುದು Digital Transaction

ಡಿಜಿಟಲ್ ವಹಿವಾಟು ಪ್ರಕ್ರಿಯೆಗೆ ನೀಡುವ ಉದ್ದೇಶದಿಂದ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೈಲಟ್ ಆಧಾರದ ಮೇಲೆ ಇಂಟರ್ನೆಟ್ ಇಲ್ಲದೆ ವಹಿವಾಟು ನಡೆಸುವ ಸೌಲಭ್ಯ ಪ್ರಾರಂಭಿಸಿದೆ.  

Last Updated : Aug 9, 2020, 07:22 PM IST
RBI ಆರಂಭಿಸಿರುವ ಈ ನೂತನ ಸೇವೆ ಬಳಸಿ ಆಫ್ ಲೈನ್ ಮೂಲಕವೂ ಮಾಡಬಹುದು Digital Transaction title=

ನವದೆಹಲಿ: ಡಿಜಿಟಲ್ ವಹಿವಾಟು ಪ್ರಕ್ರಿಯೆಗೆ ನೀಡುವ ಉದ್ದೇಶದಿಂದ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಪೈಲಟ್ ಆಧಾರದ ಮೇಲೆ ಇಂಟರ್ನೆಟ್ ಇಲ್ಲದೆ ವಹಿವಾಟು ನಡೆಸುವ ಸೌಲಭ್ಯ ಪ್ರಾರಂಭಿಸಿದೆ. ಆದರೆ, ಪ್ರಸ್ತುತ ಕೇವಲ 200 ರೂ. ವ್ಯವಹಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಈ ಲಿಮಿಟ್ ಅನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ.

ಇತ್ತೀಚೆಗಷ್ಟೇ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ, ಇಂಟರ್ನೆಟ್ ರಹಿತ ಕಾರ್ಡ್‌ ಹಾಗೂ ಮೊಬೈಲ್‌ ಹಣ ಪಾವತಿಗೆ ಅನುಮತಿ ನೀಡಲಾಗಿದೆ. ಬ್ಯಾಂಕಿನ ಅಧಿಸೂಚನೆಯಡಿಯಲ್ಲಿ, ಈ ಪೈಲಟ್ ಯೋಜನೆಯಡಿ ಡೆಬಿಟ್ ಕಾರ್ಡ್, ವ್ಯಾಲೆಟ್ ಅಥವಾ ಮೊಬೈಲ್ ಮೂಲಕ ಈ ಹಣ ಪಾವತಿ ಮಾಡಬಹುದು. ಇದಕ್ಕಾಗಿ ಯಾವುದೇ ಪರಿಶೀಲನೆ ಅಗತ್ಯವಿಲ್ಲ. ಈ ಯೋಜನೆ 31 ಮಾರ್ಚ್ 2021 ರವರೆಗೆ ಮುಂದುವರೆಯಲಿದೆ.

ದೇಶಾದ್ಯಂತ ಇಂದಿಗೂ ಕೂಡ ಅಂತರ್ಜಾಲದ ಸಂಪರ್ಕ ಇರದೇ ಇರುವ ಅನೇಕ ಪ್ರದೇಶಗಳಿವೆ. ಇದರಿಂದ ಡಿಜಿಟಲ್ ಹಣ ಪಾವತಿಗೆ ತೊಂದರೆಯಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಹೀಗಾಗಿ ಕಾರ್ಡ್, ವ್ಯಾಲೆಟ್ ಮತ್ತು ಮೊಬೈಲ್ ಸಾಧನಗಳ ಮೂಲಕ ಆಫ್‌ಲೈನ್ ಹಣ ಪಾವತಿ ಆಯ್ಕೆಯನ್ನು ಒದಗಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ.

ಈ ಕುರಿತು ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ "ಪ್ರಾಯೋಗಿಕ ಯೋಜನೆಯಡಿಯಲ್ಲಿ, ಬಳಕೆದಾರರ ಹಿತಾಸಕ್ತಿಗಳು ಮತ್ತು ಹೊಣೆಗಾರಿಕೆ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು 'ಆಫ್‌ಲೈನ್' ಮೂಲಕ ಅಂತರ್ನಿರ್ಮಿತ ಸೌಲಭ್ಯಗಳೊಂದಿಗೆ ಸಣ್ಣ ಮೊತ್ತವನ್ನು ಪಾವತಿಸಲು ಅನುಮತಿಸಲು ಉದ್ದೇಶಿಸಲಾಗಿದೆ. ಈ ಸಂದರ್ಭದಲ್ಲಿ ಶೀಘ್ರದಲ್ಲೇ ಸೂಚನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.  ಪ್ರಾಯೋಗಿಕ ಯೋಜನೆಯಿಂದ ಪಡೆದ ಅನುಭವದ ಆಧಾರದ ಮೇಲೆ ಯೋಜನೆಯನ್ನು ಕಾರ್ಯಗತಗೊಳಿಸಲು ವಿವರವಾದ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

ಇದಕ್ಕಾಗಿ 'ಪಾವತಿ ವ್ಯವಸ್ಥೆ ಆಪರೇಟರ್' (ಪಿಎಸ್‌ಒ) ಆನ್‌ಲೈನ್ ವಿವಾದ ಪರಿಹಾರವನ್ನು (ಒಡಿಆರ್) ಜಾರಿಗೆ ತರಬೇಕಾಗುವ ಅವಶ್ಯಕತೆ ಇದೆ. ಡಿಜಿಟಲ್ ವಹಿವಾಟು ಹೆಚ್ಚಾದಂತೆ ವಿವಾದಗಳು ಮತ್ತು ದೂರುಗಳು ಕೂಡ ಹೆಚ್ಚಿವೆ. ಕುಂದುಕೊರತೆಗಳ ಪರಿಹಾರದ ಈ ವ್ಯವಸ್ಥೆಯು ನಿಯಮ ಆಧಾರಿತ ಮತ್ತು ಪಾರದರ್ಶಕವಾಗಿರುತ್ತದೆ. ಅದರಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಇರುವುದಿಲ್ಲ ಅಥವಾ ಅದು ತುಂಬಾ ಕಡಿಮೆ ಇದ್ದರೂ ಸಹ. ವಿವಾದಗಳು ಮತ್ತು ದೂರುಗಳನ್ನು ಸಮಯೋಚಿತವಾಗಿ ಮತ್ತು ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ.

Trending News