ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ತಂದರೆ ಯಾವುದೇ ವಿರೋಧವಿಲ್ಲ - ಇಕ್ಬಾಲ್ ಅನ್ಸಾರಿ

 ಅಯೋಧ್ಯಾ ಭೂವಿವಾದ ಪ್ರಕರಣದಲ್ಲಿ ಒಂದು ವೇಳೆ ರಾಮಮಂದಿರವನ್ನು ನಿರ್ಮಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೆ ಅದಕ್ಕೆ ತಮ್ಮದು ಯಾವುದೇ ರೀತಿಯ ಆಕ್ಷೇಪವಿಲ್ಲ ಎಂದು ಭೂವಿವಾದದಲ್ಲಿ ಅರ್ಜಿದಾರರಲ್ಲೋಬ್ಬರಾದ ಇಕ್ಬಾಲ್ ಅನ್ಸಾರಿ ತಿಳಿಸಿದರು.

Last Updated : Nov 20, 2018, 05:45 PM IST
ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ತಂದರೆ ಯಾವುದೇ ವಿರೋಧವಿಲ್ಲ - ಇಕ್ಬಾಲ್ ಅನ್ಸಾರಿ  title=

ನವದೆಹಲಿ: ಅಯೋಧ್ಯಾ ಭೂವಿವಾದ ಪ್ರಕರಣದಲ್ಲಿ ಒಂದು ವೇಳೆ ರಾಮಮಂದಿರವನ್ನು ನಿರ್ಮಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೆ ಅದಕ್ಕೆ ತಮ್ಮದು ಯಾವುದೇ ರೀತಿಯ ಆಕ್ಷೇಪವಿಲ್ಲ ಎಂದು ಭೂವಿವಾದದಲ್ಲಿ ಅರ್ಜಿದಾರರಲ್ಲೋಬ್ಬರಾದ ಇಕ್ಬಾಲ್ ಅನ್ಸಾರಿ ತಿಳಿಸಿದರು.

ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು" ಒಂದು ವೇಳೆ ರಾಮಮಂದಿರವನ್ನು ನಿರ್ಮಿಸಲು ಸುಗ್ರೀವಾಜ್ಞೆ ಜಾರಿಗೆ ತಂದರೆ ತಮ್ಮದು ಯಾವುದೇ ವಿರೋಧವಿಲ್ಲ.ಸುಗ್ರೀವಾಜ್ಞೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದಾದಲ್ಲಿ ಅದನ್ನು ಅವರು ತರಲಿ ನಾವು ಕಾನೂನಿಗೆ ವಿಧೇಯರಾಗಿ ನಡೆಯುತ್ತೇವೆ" ಎಂದು ಸ್ಪಷ್ಟಪಡಿಸಿದರು.

ರಾಮಮಂದಿರದ ವಿಚಾರಣೆಯನ್ನು ಜನವರಿಗೆ ಮುಂದೂಡಿದ ಹಿನ್ನಲೆಯಲ್ಲಿ ಮಂದಿರದ ನಿರ್ಮಾಣದ ವಿಚಾರವಾಗಿ ಸುಗ್ರೀವಾಜ್ಞೆ ಹೊರಡಿಸುವ ವಿಚಾರಕ್ಕೆ ಪ್ರಾಮುಖ್ಯತೆ ಬಂದಿತ್ತು. ಆರೆಸೆಸ್ಸ್ ವಿಎಚ್ಪಿ ಸೇರಿದಂತೆ ಹಲವು ಸಂಘ ಪರಿವಾರದ ಸಂಘಟನೆಗಳು ಸಹಿತ  ಸುಗ್ರೀವಾಜ್ಞೆಗೆ ಆಗ್ರಹಿಸಿದ್ದವು.
 

Trending News