ಕಳೆದ ಎರಡು ವಾರಗಳಲ್ಲಿ ದೇಶದ 15 ರಾಜ್ಯಗಳ 25 ಜಿಲ್ಲೆಗಳಲ್ಲಿ Coronavirusನ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ

ಒಂದೆಡೆ ದೇಶದ ಹಲವು ಕಡೆಗಳಿಂದ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೆ, ಇಂದು ಕೇಂದ್ರ ಆರೋಗ್ಯ ಸಚಿವಾಲಯ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ.

Last Updated : Apr 13, 2020, 07:43 PM IST
ಕಳೆದ ಎರಡು ವಾರಗಳಲ್ಲಿ ದೇಶದ 15 ರಾಜ್ಯಗಳ 25 ಜಿಲ್ಲೆಗಳಲ್ಲಿ Coronavirusನ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ title=

ನವದೆಹಲಿ: ಒಂದೆಡೆ ದೇಶದ ಹಲವು ಕಡೆಗಳಿಂದ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೆ, ಇಂದು ಕೇಂದ್ರ ಆರೋಗ್ಯ ಸಚಿವಾಲಯ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು ಕಳೆದ ಎರಡು ವಾರಗಳಲ್ಲಿ 25 ಜಿಲ್ಲೆಗಳಲ್ಲಿ ಕೋವಿಡ್ -19ಗೆ ಸಂಬಂಧಿಸಿದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಸಚಿವಾಲಯ ಹೇಳಿದೆ.

ಈ ಅವಧಿಯಲ್ಲಿ 'ಕೋರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಎರಡು ಲಕ್ಷಕ್ಕೂ ಹೆಚ್ಚು (2,06,213) ಪರೀಕ್ಷೆಗಳು ನಡೆದಿವೆ, ಮುಂದಿನ ಆರು (ಆರು) ವಾರಗಳವರೆಗೆ ಟೆಸ್ಟ್ ಗಳನ್ನೂ ಮುಂದುವರಿಸಲು ನಮ್ಮ ಬಳಿ ಸಾಕಷ್ಟು ಕಿಟ್ ಗಳು ಇವೆ' ಎಂದು ಸಚಿವಾಲಯ ಹೇಳಿದೆ. ನಮ್ಮ ಬಳಿ ಇರುವ ಟೆಸ್ಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು, 14 ಮಾರ್ಗದರ್ಶಿ ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಈ ಸಂಸ್ಥೆಗಳು ಇತರೆ  ಕಾಲೇಜುಗಳಿಗೆ ತರಬೇತಿ ನೀಡಲಿವೆ ಹಾಗೂ ಹೊಸ ಪ್ರಯೋಗಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಿವೆ ಎಂದು ಸಚಿವಾಲಯ ಹೇಳಿದೆ.

ಕಳೆದ ಭಾನುವಾರದಿಂದ ದೇಶಾದ್ಯಂತ ಒಟ್ಟು 796 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ  ಸುಮಾರು 35 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ಭಾರತದಲ್ಲಿ ಒಟ್ಟು ಕೊರೊನೊವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 9352 ತಲುಪಿದೆ. ಇವುಗಳಲ್ಲಿ 8048 ಸಕ್ರಿಯ ಪ್ರಕರಣಗಳಿದ್ದು, 980 ಸೊಂಕಿತರು ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇದೇ ವೇಳೆ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 324 ಕ್ಕೆ ತಲುಪಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ಆರೋಗ್ಯ ಸಚಿವಾಲಯದ ಸಂಯುಕ್ತ ಕಾರ್ಯದರ್ಶಿ ಲವ್ ಅಗರವಾಲ್ ಈ ಮಾಹಿತಿಯನ್ನು ನೀಡಿದ್ದಾರೆ. ಈ ವೇಳೆ ದೇಶದ ಒಟ್ಟು 15 ರಾಜ್ಯಗಳ 25 ಜಿಲ್ಲೆಗಳಲ್ಲಿ ಸದ್ಯ ಕೊರೊನಾ ವೈರಸ್ ನ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Trending News