ನಿಪಾ ವೈರಸ್'ಗೆ ಕೇರಳದಲ್ಲಿ 11 ಬಲಿ

ಕೇರಳದ ಕೋಝಿಕೋಡ್ ನಲ್ಲಿ ನಿಪಾ ವೈರಸ್‌ಗೆ ಇದುವರೆಗೂ 11 ಜನ ಬಲಿಯಾಗಿದ್ದಾರೆ. 

Last Updated : May 21, 2018, 03:43 PM IST
ನಿಪಾ ವೈರಸ್'ಗೆ  ಕೇರಳದಲ್ಲಿ  11 ಬಲಿ title=

ತಿರುವನಂತಪುರ: ಕೇರಳದ ಕೋಝಿಕೋಡ್ ನಲ್ಲಿ ನಿಪಾ ವೈರಸ್‌ಗೆ ಇದುವರೆಗೂ 11 ಜನ ಬಲಿಯಾಗಿದ್ದಾರೆ. ಪೆರಂಬ್ರ ತಾಲೂಕಿನ ಆಸ್ಪತ್ರೆಯಲ್ಲಿ ಈ ಸೋಂಕಿಗೆ ತುತ್ತಾಗಿದ್ದವರಿಗೆ ಚಿಕಿತ್ಸೆ ನೀಡಿದ್ದ ನರ್ಸ್ ಒಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.  'ಸದ್ಯ ಈ ವೈರಸ್‌ ತಗುಲಿರುವ 12 ಜನರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇನ್ನು 20 ಜನರ ಮೇಲೆ ನಾವು ನಿಗ ಇರಿಸಿದ್ದೇವೆ. ವೈರಸ್‌ ಪೀಡಿದ ಪ್ರದೇಶದ ಸುತ್ತಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದೇವೆ’ ಎಂದು ಕೇರಳದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕೇರಳದ ಕೊಯಿಕ್ಕೋಡ್‌ ಜಿಲ್ಲೆಯ ಪೆರಂಬಾರಾದಲ್ಲಿ ಕೇವಲ ಎರಡು ವಾರದಲ್ಲಿ ಒಂದೇ ಕುಟುಂಬದ ಮೂವರು ಸೇರಿ 9 ಜನ ನಿಗೂಢ ವೈರಸ್‌ ನಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೇರಳದಾದ್ಯಂತ ಮುಂಜಾಗ್ರತಾ ಕ್ರಮವಾಗಿ ಹೈಅಲರ್ಟ್ ಘೋಷಿಸಲಾಗಿದೆ. ಈ ವೈರಸ್‌ ಸೋಂಕು ಹರಡದಂತೆ ತಡೆಯಲು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಸಹ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿದೆ. 

ಸಂಸದ ರಾಮಚಂದ್ರನ್ ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡ ಅವರಿಗೆ ಬರೆದ ಪತ್ರವೊಂದರಲ್ಲಿ, ತಮ್ಮ ಲೋಕಸಭಾ ಕ್ಷೇತ್ರದ ಕಟಿಯಡಿ ಮತ್ತು ಪೆರಂಬ್ರಾ ಸೇರಿದಂತೆ ಕೆಲವು ಪಂಚಾಯತ್ ಪ್ರದೇಶಗಳು 'ಮಾರಣಾಂತಿಕ ವೈರಸ್' ಹಿಡಿತದಲ್ಲಿದೆ ಎಂದು ಹೇಳಿದರು. ಕೆಲವು ವೈದ್ಯರು ಇದನ್ನು ನಿಪಾ ಎಂಬ ಹೆಸರಿನ ವೈರಸ್ ಎಂದು ಕರೆದರು, ಆದರೆ ಇತರರು ಅದನ್ನು ಝೂನೋಟಿಕ್ ವೈರಸ್ ಎಂದು ವಿವರಿಸಿದ್ದಾರೆ, ಇದು ವೇಗವಾಗಿ ಹರಡುತ್ತಿದೆ ಎಂದು ಅವರು ಬರೆದಿದ್ದಾರೆ. 

Trending News