ಕೊರೊನಾ ಲಾಕ್ ಡೌನ್ ವೇಳೆ ASI ಕೈ ಕತ್ತರಿಸಿದ ನಿಹಂಗ್ ಸಿಖ್ ಸಮುದಾಯದ ಜನ

ಪಂಜಾಬ್ ನ ಪಟಿಯಾಲಾದಲ್ಲಿ ರವಿವಾರ ಜನರ ಗುಂಪೊಂದು ಪೊಲೀಸರ ಮೇಲೆ ದಾಳಿ ನಡೆಸಿ ಓರ್ವ ಪೋಲೀಸ್ ಅಧಿಕಾರಿಯ ಕೈಯನ್ನು ಕತ್ತರಿಸಿದ್ದಾರೆ. ಇದೆ ವೇಳೆ ಈ ದಾಳಿಯಲ್ಲಿ ಇತರೆ ಇಬ್ಬರು ಪೊಲೀಸ ಪೇದೆಗಳು ಗಾಯಗೊಂಡಿದ್ದಾರೆ.  

Last Updated : Apr 12, 2020, 12:22 PM IST
ಕೊರೊನಾ ಲಾಕ್ ಡೌನ್ ವೇಳೆ ASI ಕೈ ಕತ್ತರಿಸಿದ ನಿಹಂಗ್ ಸಿಖ್ ಸಮುದಾಯದ ಜನ title=

ಚಂಡಿಗಡ್: ಪಂಜಾಬ್ ರಾಜ್ಯದ ಪಟಿಯಾಲಾ ಜಿಲ್ಲೆಯಲ್ಲಿ ರವಿವಾರ ಜನರ ಸಮೂಹವೊಂದು ಪೊಲೀಸರ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಿಹಂಗ್ ಸಿಖ್ ಸಮುದಾಯಕ್ಕೆ ಸೇರಿದ ಜನರು ಪೊಲೀಸ್ ಅಧಿಕಾರಿಯೊಬ್ಬನ ಕೈಯನ್ನು ಕತ್ತರಿಸಿದ್ದು, ಇತರೆ ಇಬ್ಬರು ಪೋಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು ಸುಮಾರು 6-7 ನಿಹಂಗ್ ಸಿಖರು (ಸಾಂಪ್ರದಾಯಿಕವಾಗಿ ಶಸ್ತ್ರಾಸ್ತ್ರ ಹೊಂದಿರುವ ಹಾಗೂ ನೀಲಿ ಬಣ್ಣದ ಉದ್ದನೆಯ ಉಡುಪು ಧರಿಸಿರುವ) ಒಂದು ಸಮೂಹ ವಾಹನವೊಂದರಲ್ಲಿ ಪ್ರವಾಸ ನಡೆಸುತ್ತಿದ್ದರು. ಈ ವೇಳೆ ಅಲ್ಲಿನ ಮಂಡಿ ಬೋರ್ಡ್ ಪೊಲೀಸ್ ಅಧಿಕಾರಿಗಳು ಬೆಳಗ್ಗೆ ಸುಮಾರು 6.15ರ ಸುಮಾರಿಗೆ ತರಕಾರಿ ಮಾರುಕಟ್ಟೆ ಬಳಿ ಅವರನ್ನು ತಡೆಯಲು ಯತ್ನಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪಟಿಯಾಲಾ ಜಿಲ್ಲೆಯ ಹಿರಿಯ ಪೊಲೀಸ ಇನ್ಸ್ಪೆಕ್ಟರ್ ಮನದೀಪ್ ಸಿಂಗ್ ಸಿದ್ಧು, ಈ ಸಂದರ್ಭದಲ್ಲಿ ಅವರಿಗೆ ಕರ್ಫ್ಯೂ ಪಾಸ್ ತೋರಿಸಲು ಹೇಳಲಾಯಿತು. ಆದರೆ, ಅದನ್ನು ಪಾಲಿಸದ ಈ ಗುಂಪು, ರಸ್ತೆ ತಡೆಗೆ ತಮ್ಮ ವಾಹನವನ್ನು ಡಿಕ್ಕಿ ಹೊಡೆಸಿದ್ದಾರೆ" ಎಂದು ಹೇಳಿದ್ದಾರೆ. ಬಳಿಕ ಅವರು ಅಲ್ಲಿ ಕಾರ್ಯನಿರತರಾಗಿದ್ದ ಪೋಲೀಸ್ ತಂಡದ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಹಲ್ಲೆಯಲ್ಲಿ ಅವರು ASI ಒಬ್ಬರ ಕೈಯನ್ನು ಕತ್ತರಿಸಿದ್ದಾರೆ. ಇನ್ನೊಂದೆಡೆ ಇತರೆ ಇಬ್ಬರು ಪೋಲೀಸ್ ಪೇದೆಗಳು ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಸಿದ್ಧು ಹೇಳಿದ್ದಾರೆ.

ಈ ದಾಳಿಯ ಬಳಿಕ ASI ಅವರನ್ನು ರಾಜೆಂದ್ ಆಸ್ಪತ್ರೆಗೆ ಸಾಗಿಸಲಾಯುತು. ನಂತರ ಅಲ್ಲಿಂದ ಅವರನ್ನು PGIMER ಚಂಡಿಗಡ್ ಗೆ ರೆಫರ್ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ SSP, ಹಲ್ಲೆಯ ಬಳಿಕ ಈ ನಿಹಂಗ್ ಸಮುದಾಯದ ಸಿಖರು ಅಲ್ಲಿನ ಪರಾರಿಯಾಗಿದ್ದು, ಅವರ ಬಂಧನಕ್ಕೆ ಪ್ರಯತ್ನ ಮುಂದುವರೆಸಲಾಗಿದೆ ಎಂದಿದ್ದಾರೆ.

ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯಾದ್ಯಂತ ಸದ್ಯ ಲಾಕ್ ಡೌನ್ ಹಾಗೂ ನಿಬಂಧನೆಗಳನ್ನು ವಿಧಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಪ್ರಕರಣ ಭಾರಿ ಮಹತ್ವ ಪಡೆದುಕೊಂಡಿದೆ.

Trending News