New Wage Code: 30 ನಿಮಿಷ ಹೆಚ್ಚು ಕೆಲಸ ಮಾಡಿದರೆ ಸಿಗಲಿದೆ Over Time, ಈ ದಿನದಿಂದ ಬದಲಾಗಲಿದೆ ನಿಯಮ

New Wage Code Update: ನೂತನ ಕರಡು ನೀತಿಯ ಪ್ರಕಾರ್ 15 ರಿಂದ 30 ನಿಮಿಷಗಳ ಹೆಚ್ಚುವರಿ ಕೆಲಸವನ್ನು 30 ನಿಮಿಷಕ್ಕೆ ಪರಿಗಣಿಸಿ ಓವರ್ ಟೈಮ್ ನಲ್ಲಿ ಶಾಮೀಲುಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಇರುವ ನೀತಿಯಲ್ಲಿ ಈ ಸಮಯವನ್ನು ಪರಿಗಣಿಸಲಾಗುವುದಿಲ್ಲ .

Written by - Nitin Tabib | Last Updated : Aug 23, 2021, 12:09 PM IST
  • ಅಕ್ಟೋಬರ್ 1 ರಿಂದ ನೂತನ ಸಂಹಿತೆ ಜಾರಿಗೆ ಬರುತ್ತಿದೆ.
  • ಹೊಸ ನಿಯಮಗಳ ಬಳಿಕ ವೇತನ ಸಂರಚನೆಯಲ್ಲಿ ಬದಲಾವಣೆ ಆಗಲಿದೆ.
  • ರಜಾದಿನಗಳು ಹಾಗೂ ಕೆಲಸದ ಗಂಟೆಗಳೂ ಕೂಡ ಬದಲಾಗಲಿವೆ.
New Wage Code: 30 ನಿಮಿಷ ಹೆಚ್ಚು ಕೆಲಸ ಮಾಡಿದರೆ ಸಿಗಲಿದೆ Over Time, ಈ ದಿನದಿಂದ ಬದಲಾಗಲಿದೆ ನಿಯಮ title=
New Wage Code Update (File Photo)

ನವದೆಹಲಿ: New Wage Code Update - ಸರ್ಕಾರವು ಅಕ್ಟೋಬರ್ 1 ರಿಂದ ದೇಶಾದ್ಯಂತ ಹೊಸ ಕಾರ್ಮಿಕ ನೀತಿಗಳನ್ನು ಅಥವಾ ಕಾನೂನುಗಳನ್ನೂ (New Labour Codes) ಜಾರಿಗೆ ತರಲಿದೆ. ಅನುಷ್ಠಾನಕ್ಕೆ ಮುನ್ನ ಸರ್ಕಾರವು ತನ್ನ ನಿಯಮಗಳನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದೆ, ಹೀಗಾಗಿ ಅನುಷ್ಠಾನದ ನಂತರ ಯಾವುದೇ ಸಮಸ್ಯೆ ಇರುವುದಿಲ್ಲ. ಮೊದಲು ಇದನ್ನು ಏಪ್ರಿಲ್ 1 ರಿಂದ  ಜಾರಿಗೊಳಿಸಲು ನಿರ್ಧರಿಸಲಾಗುತ್ತು. ನಂತರ ಜುಲೈನಲ್ಲಿ ಅನುಷ್ಠಾನಗೊಳಿಸುವ ಚರ್ಚೆಯು ವೇಗ ಪಡೆಯಿತು. ಆದರೆ ಇದೀಗ ಇದನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ.

ಅಕ್ಟೋಬರ್ 1 ರಿಂದ ವೇತನದ ಸಂರಚನೆ ಬದಲಾವಣೆ
ಅಕ್ಟೋಬರ್ 1 ರಿಂದ, ಉದ್ಯೋಗಿಗಳ  ವೇತನದ ಸಂರಚನೆಯಲ್ಲಿ ದೊಡ್ಡ ಬದಲಾವಣೆಯನ್ನು ನೀವು ಕಾಣಬಹುದು. ಉದ್ಯೋಗಿಗಳ Take Home Salary ಇಳಿಕೆಯಾಗಬಹುದು. ಇದಲ್ಲದೇ, ಹೊಸ ಕಾರ್ಮಿಕ ಸಂಹಿತೆಯಲ್ಲಿ ಕೆಲಸದ ಸಮಯ, ಅಧಿಕ ಸಮಯ, ವಿರಾಮದ ಸಮಯಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಸಹ ಮಾಡಲಾಗಿದೆ. ಹಾಗಾದರೆ ಬನ್ನಿ ಅವುಗಳನ್ನು ಒಂದೊಂದಾಗಿ ಅರ್ಥ ಮಾಡಿಕೊಳ್ಳೋಣ. ಇದಕ್ಕೂ ಮೊದಲು ಹೊಸ ವೇತನ ಕೋಡ್ ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ.

ಏನಿದು New Wage Code?
29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸುವ ಮೂಲಕ ಸರ್ಕಾರವು 4 ಹೊಸ ವೇತನ ಸಂಹಿತೆಗಳನ್ನೂ ಸಿದ್ಧಪಡಿಸಿದೆ. ಆಗಸ್ಟ್ 2019 ರಂದು ಸಂಸತ್ತು ಮೂರು ಕಾರ್ಮಿಕ ಸಂಹಿತೆಗಳಾದ ಕೈಗಾರಿಕಾ ಸಂಬಂಧಗಳು, ಕೆಲಸದ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು ಮತ್ತು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿತ್ತು. ಈ ನಿಯಮಗಳನ್ನು ಸೆಪ್ಟೆಂಬರ್ 2020 ರಂದು ಅಂಗೀಕರಿಸಲಾಗಿದೆ.

ಆ ನಾಲ್ಕು ಸಂಹಿತೆಗಳು ಯಾವುವು?
1. ಕೋಡ್ ಆನ್ ವೆಜೆಸ್
2. ಇಂಡಸ್ಟ್ರಿಯಲ್ ರಿಲೇಶನ್ಸ್ ಕೋಡ್
3. ಆಕ್ಯುಪೆಶ್ನಲ್ ಸೇಫ್ಟಿ ಅಂಡ್ ಹೆಲ್ತ್
4. ಸೋಸಿಯಲ್ ಸೆಕ್ಯುರಿಟಿ ಕೋಡ್.

ಏಕಕಾಲಕ್ಕೆ ಜಾರಿಗೆ ಬರಲಿವೆ ಈ ನಾಲ್ಕು ಸಂಹಿತೆಗಳು
ಸರ್ಕಾರಿ ಮೂಲಗಳ ಪ್ರಕಾರ, ಈ ಎಲ್ಲಾ ಸಂಹಿತೆಗಳು  ಏಕಕಾಲದಲ್ಲಿ ಜಾರಿಗೊಳಿಸಲಾಗುವುದು ಎನ್ನಲಾಗಿದೆ.  ವೇತನ ಸಂಹಿತೆ ಕಾಯಿದೆ 2019 ರ (Wage Code Act), 2019  ಪ್ರಕಾರ, ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ (CTC) 50% ಕ್ಕಿಂತ ಕಡಿಮೆಯಿರಬಾರದು. ಪ್ರಸ್ತುತ, ಅನೇಕ ಕಂಪನಿಗಳು ಮೂಲ ವೇತನವನ್ನು (Cost To Company-CTC) ಕಡಿಮೆ ಮಾಡುತ್ತವೆ ಮತ್ತು ಮೇಲಿನಿಂದ ಹೆಚ್ಚಿನ ಭತ್ಯೆಗಳನ್ನು ನೀಡುವುದರಿಂದ ಕಂಪನಿಯ ಮೇಲಿನ ಹೊರೆ ಕಡಿಮೆಯಾಗುತ್ತದೆ.

15 ರಿಂದ 30 ನಿಮಿಷದ ಹೆಚ್ಚುವರಿ ಸಮಯ ಓವರ್ ಟೈಮ್ ಪರಿಗಣಿಸಲಾಗುವುದು
ನೂತನ ಕರಡು ನೀತಿಯ ಪ್ರಕಾರ್ 15 ರಿಂದ 30 ನಿಮಿಷಗಳ ಹೆಚ್ಚುವರಿ ಕೆಲಸವನ್ನು 30 ನಿಮಿಷಕ್ಕೆ ಪರಿಗಣಿಸಿ ಓವರ್ ಟೈಮ್ ನಲ್ಲಿ ಶಾಮೀಲುಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಇರುವ ನೀತಿಯಲ್ಲಿ ಈ ಸಮಯವನ್ನು ಪರಿಗಣಿಸಲಾಗುವುದಿಲ್ಲ. ಕರಡು ನಿಯಮಗಳ ಪ್ರಕಾರ ಯಾವುದೇ ಉದ್ಯೋಗಿ 5 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕೆಲಸ ಮಾಡುವಂತಿಲ್ಲ. ಪ್ರತಿ ಐದು ಗಂಟೆಗಳ ನಂತರ ಅವನಿಗೆ 30 ನಿಮಿಷಗಳ ವಿರಾಮ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ-Banking Update: ಬದಲಾಗುತ್ತಿದೆ ಬ್ಯಾಂಕ್ ಚೆಕ್ ಕ್ಲಿಯರಿಂಗ್ ಸಿಸ್ಟಂ! ಯಾವಾಗ ಜಾರಿಗೆ ಬರಲಿದೆ ತಿಳಿಯಲು ಸುದ್ದಿ ಓದಿ

ವೇತನ ಸಂರಚನೆ ಸಂಪೂರ್ಣ ಬದಲಾಗಲಿದೆ
ವೇತನ ಸಂಹಿತೆ ಕಾಯಿದೆ, 2019 ರ ಅನುಷ್ಠಾನದ ನಂತರ, ನೌಕರರ ವೇತನ ಸಂರಚನೆಯು ಸಂಪೂರ್ಣವಾಗಿ ಬದಲಾಗಲಿದೆ. ನೌಕರರ ಮನೆಗೆ ಕೊಂಡೊಯ್ಯುವ ವೇತನ (Take Home Salary) ಕಡಿಮೆಯಾಗಲಿದೆ. ಏಕೆಂದರೆ ಮೂಲ ವೇತನವನ್ನು (Basic Pay) ಹೆಚ್ಚಿಸುವ ಮೂಲಕ, ನೌಕರರ ಪಿಎಫ್ ಹೆಚ್ಚು ಸುರಕ್ಷಿತವಾಗಿರುತ್ತದೆ, ಅಂದರೆ ಅವರ ಭವಿಷ್ಯವು ಹೆಚ್ಚು  ಸುರಕ್ಷಿತವಾಗಿರಲಿದೆ. ಪಿಎಫ್ ಜೊತೆಗೆ ಗ್ರಾಚ್ಯುಟಿಗೆ (Monthly Gratuity) ಕೊಡುಗೆ ಕೂಡ ಹೆಚ್ಚಾಗಲಿದೆ. ಅಂದರೆ, ಟೇಕ್ ಹೋಮ್ ಸಂಬಳ ಕಡಿಮೆಯಾದರೂ ಕೂಡ ನಿವೃತ್ತಿಯ ನಂತರ ಉದ್ಯೋಗಿಗೆ ಹೆಚ್ಚಿನ ಮೊತ್ತ ಸಿಗಲಿದೆ. ಅಸಂಘಟಿತ ವಲಯದ ಉದ್ಯೋಗಿಗಳಿಗೂ ಕೂಡ ಹೊಸ ವೇತನ ಕೋಡ್ಅನ್ವಯಿಸಲಿದೆ.  ವೇತನ ಮತ್ತು ಬೋನಸ್‌ಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತಿವೆ.  ಪ್ರತಿ ಉದ್ಯಮ ಮತ್ತು ವಲಯದಲ್ಲಿ ಕೆಲಸ ಮಾಡುವ ನೌಕರರ ವೇತನದಲ್ಲಿ ಸಮಾನತೆ ಇರಲಿದೆ.

ಇದನ್ನೂ ಓದಿ-Pensionಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪ್ರಕಟ, PFRDA ತರುತ್ತಿದೆ ಈ ಜಬರ್ದಸ್ತ್ ಸ್ಕೀಮ್

ಕೆಲಸ, ಕೆಲಸದ ಗಂಟೆ ಮತ್ತು ರಜೆಗಳ ಮೇಲೂ ಪ್ರಭಾವ
EPFO ಮಂಡಳಿಯ ಸದಸ್ಯ ಮತ್ತು ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ವಿರ್ಜೇಶ್ ಉಪಾಧ್ಯಾಯರ ಪ್ರಕಾರ, ಉದ್ಯೋಗಿಗಳ ಕೆಲಸದ ಸಮಯ, ವಾರ್ಷಿಕ ರಜೆ, ಪಿಂಚಣಿ, PF, ಮನೆ ಸಂಬಳ, ನಿವೃತ್ತಿ ಮುಂತಾದ ಪ್ರಮುಖ ವಿಷಯಗಳ ನಿಯಮಗಳಲ್ಲಿಯೂ ಕೂಡ  ಬದಲಾವಣೆ ಇರಲಿದೆ. ಕಾರ್ಮಿಕ ಸಚಿವಾಲಯದ ಕಾರ್ಮಿಕ ಸುಧಾರಣಾ ಕೋಶದ ಅಧಿಕಾರಿಯ ಪ್ರಕಾರ, ಕಾರ್ಮಿಕ ಸಂಘವು PF ಮತ್ತು ವಾರ್ಷಿಕ ರಜಾದಿನಗಳ ಬಗ್ಗೆ ಬೇಡಿಕೆ ಇಟ್ಟಿದೆ. Earnned Leaveಗಳನ್ನು 240 ರಿಂದ 300 ಕ್ಕೆ ಹೆಚ್ಚಿಸಬೇಕು ಎಂದು ಒಕ್ಕೂಟವು ಒತ್ತಾಯಿಸುತ್ತಿದೆ.

ಇದನ್ನೂ ಓದಿ-Good News:ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ SBI, ಕೂಡಲೇ ಈ ಎರಡು ನಂಬರ್ ಮೊಬೈಲ್ ನಲ್ಲಿ ಸೇವ್ ಮಾಡಿ

Trending News