ನವದೆಹಲಿ: ಉತ್ತರಾಖಂಡ್ ಸೇರಿದಂತೆ ದೇಶದ ಏಳು ರಾಜ್ಯಗಳಿಗೆ ಕೇಂದ್ರ ಸರ್ಕಾರ ನೂತನ ರಾಜ್ಯಪಾಲರನ್ನು ನೇಮಕ ಮಾಡಿದೆ.
ಉತ್ತರಾಖಂಡ್ ರಾಜ್ಯದ ರಾಜ್ಯಪಾಲರಾಗಿ ಉತ್ತರ ಪ್ರದೇಶದ ಹಿರಿಯ ರಾಜಕಾರಣಿ ಬೇಬಿರಾಣಿ ಮೌರ್ಯ ಅವರನ್ನು, ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿ ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸತ್ಯಪಾಲ್ ಮಲಿಕ್ ಅವರನ್ನು, ಮೇಘಾಲಯದ ರಾಜ್ಯಪಾಲರಾಗಿ ತ್ರಿಪುರದ ರಾಜ್ಯಪಾಲ ತಥಾಗತ್ ರಾಯ್ ಅವರನ್ನು ನೇಮಕ ಮಾಡಲಾಗಿದೆ.
ಸಿಕ್ಕಿಂ ರಾಜ್ಯಪಾಲರಾಗಿ ಗಂಗಾಪ್ರಸಾದ್ ಅವರನ್ನು, ತ್ರಿಪುರಾ ರಾಜ್ಯಪಾಲರಾಗಿ ಕ್ಯಾಪ್ಟನ್ ಸಿಂಗ್ ಸೋಲಂಕಿ, ಬಿಹಾರದ ರಾಜ್ಯಪಾಲರಾಗಿ ಎಸ್.ಎನ್.ಆರ್ಯ ಮತ್ತು ಹರಿಯಾಣದ ರಾಜ್ಯಪಾಲರಾಗಿ ಬಿಹಾರದ ಮಾಜಿ ಸಚಿವ ಎಸ್.ಎನ್.ಆರ್ಯ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.