NEET PG Exam 2021 Date: ಸೆಪ್ಟೆಂಬರ್ 11 ಕ್ಕೆ NEET ಸ್ನಾತಕೋತ್ತರ ಪರೀಕ್ಷೆಆಯೋಜನೆ, ವಿದ್ಯಾರ್ಥಿಗಳಿಗೆ ಆರೋಗ್ಯ ಸಚಿವರ ಸಂದೇಶ

NEET PG Exam 2021 - ಸೆಪ್ಟೆಂಬರ್ 11 ರಂದು ನೀಟ್ ಪಿಜಿ ಪರೀಕ್ಷೆ (NEET PG Exam 2021) ನಡೆಯಲಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

Written by - Nitin Tabib | Last Updated : Jul 13, 2021, 08:08 PM IST
  • NEET PG Exam 2021 ದಿನಾಂಕ ಪ್ರಕಟಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ.
  • ಸೆಪ್ಟೆಂಬರ್ 11 ರಂದು ಈ ಪರೀಕ್ಷೆ ಆಯೋಜಿಸಲಾಗುತ್ತಿದೆ.
  • ಜುಲೈ 12ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ NEET UG Exam 2021 ಪ್ರಕಟಿಸಿದ್ದರು.
NEET PG Exam 2021 Date: ಸೆಪ್ಟೆಂಬರ್ 11 ಕ್ಕೆ NEET ಸ್ನಾತಕೋತ್ತರ ಪರೀಕ್ಷೆಆಯೋಜನೆ, ವಿದ್ಯಾರ್ಥಿಗಳಿಗೆ ಆರೋಗ್ಯ ಸಚಿವರ ಸಂದೇಶ title=
NEET PG Exam 2021 Date (File Photo)

NEET PG Exam 2021 - ನೀಟ್ ಸ್ನಾತಕೋತ್ತರ ಪರೀಕ್ಷೆಯ (NEET PG Exam 2021) ದಿನಾಂಕ ಪ್ರಕಟಗೊಂಡಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Union Health Minister Mansukh Mandaviya) ಅವರು ಟ್ವೀಟ್ ಮಾಡಿ ಸೆಪ್ಟೆಂಬರ್ 11 ರಂದು ನೀಟ್ ಸ್ನಾತಕೋತ್ತರ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಕೇಂದ್ರ ಆರೋಗ್ಯ ಸಚಿವರು, "ಸೆಪ್ಟೆಂಬರ್ 11, 2021 ರಂದು ನೀಟ್ ಸ್ನಾತಕೋತ್ತರ ಪರೀಕ್ಷೆಯನ್ನು ನಡೆಸಲು ನಾವು ನಿರ್ಧರಿಸಿದ್ದೇವೆ. ಯುವ ವೈದ್ಯಕೀಯ ಆಕಾಂಕ್ಷಿಗಳಿಗೆ ನನ್ನ ಶುಭಾಶಯಗಳು" ಎಂದಿದ್ದಾರೆ.

ನಿನ್ನೆ NEET UG ದಿನಾಂಕ ಪ್ರಕಟಗೊಂಡಿತ್ತು
ಇದಕ್ಕೂ ಒಂದು ದಿನ ಮೊದಲು ಅಂದರೆ ಜುಲೈ 12 ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ (Union Education Minister Dharmendra Pradhan), NEET UG ಪರೀಕ್ಷೆ ದಿನಾಂಕ ಘೋಷಿಸಿದ್ದರು. 

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಮನೆ ನಿರ್ಮಾಣಕ್ಕೆ ಸಿಗಲಿದೆ House Building Advance

NEET UG ಪರೀಕ್ಷೆಗಾಗಿ (NEET UG Exam 2021 Date) ನೋಂದಣಿ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ನೀಟ್ ಸ್ನಾತಕೋತ್ತರ ಪರೀಕ್ಷೆ ಸೆಪ್ಟೆಂಬರ್ 12ರಂದು ನಡೆಯಲಿದೆ. ಆಗಸ್ಟ್ 6ರವರೆಗೆ ಈ ಪರೀಕ್ಷೆಗಾಗಿ ಹೆಸರನ್ನು ನೊಂದಾಯಿಸಬಹುದಾಗಿದೆ.

ಇದನ್ನೂ ಓದಿ-New Wage Code: ನೌಕರರಿಗೆ 240 ರ ಬದಲು, ಈಗ 300 ದಿನ ಗಳಿಕೆ ರಜೆ! ಅಕ್ಟೋಬರ್‌ನಿಂದ ನಿಯಮ ಜಾರಿಗೆ 

ಕೊವಿಡ್ ಪ್ರೋಟೋಕಾಲ್ ಗಳನ್ನು ಪಾಲಿಸಲಾಗುವುದು
ಕೊವಿಡ್-19 ಮಹಾಮಾರಿಯ ಮಧ್ಯೆ ಈ ಪರೀಕ್ಷೆಗಳು ಆಯೋಜನೆಗೊಳ್ಳಲಿದ್ದು, ಪರೀಕ್ಷೆಯ ವೇಳೆ ಸುರಕ್ಷತೆಯ ಸಂಪೂರ್ಣ ಕಾಳಜಿ ವಹಿಸಲಾಗುವುದು. ಕೊವಿಡ್-19 (Covid-19) ಪ್ರೋಟೋಕಾಲ್ ಹಿನ್ನೆಲೆ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿಯೇ ಫೇಸ್ ಮಾಸ್ಕ್ ಒದಗಿಸಲಾಗುವುದು. ಇದಲ್ಲದೆ ಎಂಟ್ರಿ ಹಾಗೂ ಎಕ್ಸಿಟ್ ಟೈಮ್ ಸ್ಲಾಟ್ ನಿರ್ಧರಿಸಲಾಗುತ್ತಿದೆ. ಕಾಂಟಾಕ್ಟ್ ಲೆಸ್ ರಿಜಿಸ್ಟ್ರೇಷನ್, ಸ್ಯಾನಿಟೈಸೇಶನ್ ಹಾಗೂ ಸೋಶಿಯಲ್ ಡಿಸ್ಟೆನ್ಸಿಂಗ್ ಜೊತೆಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಸುನೀಸ್ಚಿತಗೊಳಿಸಲಾಗುತ್ತಿದೆ.

ಇದನ್ನೂ ಓದಿ-DL New Rules 2021 : DL ನಿಯಮದಲ್ಲಿ ಬದಲಾವಣೆ! ಈ ಒಂದು ಪ್ರಮಾಣಪತ್ರ ಇದ್ರೆ ಸಿಗಲಿದೆ ಡ್ರೈವಿಂಗ್ ಲೈಸನ್ಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News